ಹ್ಯಾಮಿಲ್ಟನ್: ಭಾರತವಿಲ್ಲದೇ ಕ್ರಿಕೆಟ್ ವಿಶ್ವ ನಡೆಯುವುದು ಕಷ್ಟ. ಕ್ರಿಕೆಟ್ ಗೆ ಭಾರತದ ಅಗತ್ಯ ತುಂಬಾನೇ ಇದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ದಿಗ್ಗಜ ರಿಚರ್ಡ್ ಹ್ಯಾಡ್ಲಿ ಹೇಳಿದ್ದಾರೆ.
ಭಾರತದಿಂದಾಗಿ ಕ್ರಿಕೆಟ್ ನಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆ. ಟೆಲಿವಿಶನ್ ಹಕ್ಕುಗಳು, ಜಾಹೀರಾತುಗಳು, ದೊಡ್ಡ ಮಟ್ಟದ ಪ್ರೇಕ್ಷಕರು, ಪ್ರಾಯೋಜಕತ್ವಗಳು ಮತ್ತು ಐಪಿಎಲ್ ನಂತಹ ದೊಡ್ಡ ಕೂಟಗಳಿಂದ ಭಾರತದಿಂದಾಗಿ ದೊಡ್ಡ ಪ್ರಮಾಣದ ಹಣ ವಿಶ್ವ ಕ್ರಿಕೆಟ್ ಗೆ ಸಂಗ್ರಹವಾಗುತ್ತದೆ ಎಂದು ಹ್ಯಾಡ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಸ್ಟಾರ್ ನಟನ ಚಿತ್ರಕ್ಕೆ ನೋ ಎಂದ ‘ಉಪ್ಪೆನ’ ಬೆಡಗಿ ಕೃತಿ ಶೆಟ್ಟಿ
ಐಪಿಎಲ್ ನಂತಹ ವರ್ಣರಂಜಿತ ಚುಟುಕು ಮಾದರಿ ಕೂಟದ ಹೊರತಾಗಿಯೂ ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತುಂಗದಲ್ಲಿದೆ. ಮೂರು ಮಾದರಿಯಲ್ಲೂ ಭಾರತ ತಂಡ ಎತ್ತರದಲ್ಲಿದೆ ಎನ್ನುತ್ತಾರೆ ಕಿವೀಸ್ ದಿಗ್ಗಜ.
ಆಸೀಸ್ ಸರಣಿಯಲ್ಲಿ ಭಾರತದ ಪ್ರದರ್ಶನದ ಬಗ್ಗೆ ಹ್ಯಾಡ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟಾದರೂ ತಂಡ ಮೇಲೆದ್ದುಬಂದ ರೀತಿ ಅದ್ಭುತ. ಆಸೀಸ್ ನಲ್ಲಿ ಭಾರತದ ಪ್ರದರ್ಶನದಿಂದ ಟೆಸ್ಟ್ ಕ್ರಿಕೆಟ್ ಮತ್ತೆ ಜೀವಂತಿಕೆ ಪಡೆಯಿತು ಎಂದರು.