Advertisement
ಜೇವರ್ಗಿಯ ಕೋಳಕೂರಿನ ಬಾಲೆಫೈನಲ್ ಪಂದ್ಯದಲ್ಲಿ ಮುನ್ನುಗ್ಗಿ ಹೋಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹಿಡಿದು ನಿಲ್ಲಿಸುವಲ್ಲಿ ಶ್ರೇಯಾಂಕಾ ಪಾಟೀಲ್ ತೋರಿದ ಸಾಧನೆ ಅಸಾಮಾನ್ಯ. ಕೇವಲ 12 ರನ್ ನೀಡಿ 4 ವಿಕೆಟ್ ಉರುಳಿಸಿದ ಸಾಹಸ ಇವರದ್ದು. ಈ ಬಾಲೆ ಸ್ಪಿನ್ ಮೋಡಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ತರಗಲೆಯಂತೆ ಉದುರಿತು. ಈ ಪಂದ್ಯದ ಬಳಿಕ ಎಲ್ಲೆಡೆ ಈ ಬಾಲೆಯದ್ದೇ ಹೆಸರು ಮತ್ತು ಬೌಲಿಂಗ್ ಮೋಡಿಯದ್ದೇ ಚರ್ಚೆ.
Related Articles
ಶ್ರೇಯಾಂಕಾ ಅಂದರೆ ಕುಟುಂಬ, ಬಂಧುವರ್ಗಕ್ಕೆ ಅಚ್ಚುಮೆಚ್ಚು. ತಾನೊಬ್ಬ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಟು ಎನ್ನುವ ಅಹಂ ಆಗಲಿ, ದೊಡ್ಡಸ್ತಿಕೆಯಾಗಲಿ ಇಲ್ಲವೇ ಇಲ್ಲ. ಎಲ್ಲರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಸರಳ ಸ್ವಭಾವದ ಹುಡುಗಿ. ಅವಳಿಂದ ನಮ್ಮ ಕುಟುಂಬದಲ್ಲಿ ಬಹಳಷ್ಟು ಸಂತಸದ ವಾತಾವರಣ ಸೃಷ್ಟಿಯಾಗಿದೆ ಎಂದು ಶ್ರೇಯಾಂಕಾ ಅವರ ಅಜ್ಜಿ ಲಕ್ಷ್ಮಿ ಅಮೃತಗೌಡ ಸಂತಸ ಹಂಚಿಕೊಂಡರು.
Advertisement
ಅಪ್ಪ, ತಮ್ಮ ಕೂಡ ಕ್ರಿಕೆಟಿಗರುಶ್ರೇಯಾಂಕಾಳ ತಂದೆ ರಾಕೇಶ ಪಾಟೀಲ್ ಹಾಗೂ ಸಹೋದರ ಆದರ್ಶ ಪಾಟೀಲ್ ಕೂಡ ಕ್ರಿಕೆಟ್ ಆಡುತ್ತಾರೆ. ಆದರ್ಶ ಪಾಟೀಲ್ ಅಂಡರ್-19 ಕ್ರಿಕೆಟ್‌ನಲ್ಲಿ ಪಾಂಡಿಚೇರಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಇಡೀ ಕುಟುಂಬ ಕಲ್ಯಾಣ ಮತ್ತು ಕರ್ನಾಟಕದ ಹೆಮ್ಮೆ. ಮುಂದೆ ಆದರ್ಶನೂ ತನ್ನ ಪ್ರತಿಭೆಯಿಂದ ರಾಜ್ಯದ ಹೆಸರು ಮಿಂಚಿಸುತ್ತಾನೆ ಎನ್ನುತ್ತಾರೆ ಅಜ್ಜ (ತಂದೆಯ ತಂದೆ) ಅಮೃತಗೌಡ ಪಾಟೀಲ. -ಸೂರ್ಯಕಾಂತ್ ಎಂ. ಜಮಾದಾರ