Advertisement

Cricket ಐಬಿಎಸ್‌ಎ ವರ್ಲ್ಡ್ ಗೇಮ್ಸ್‌ ;ಭಾರತದ ವನಿತಾ ಅಂಧರ ತಂಡಕ್ಕೆ ಕ್ರಿಕೆಟ್‌ ಚಿನ್ನ

12:03 AM Aug 27, 2023 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ವನಿತಾ ಅಂಧರ ಕ್ರಿಕೆಟ್‌ ತಂಡ ಐಬಿಎಸ್‌ಎ ವರ್ಲ್ಡ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದೆ. ಶನಿವಾರ ಎಜ್‌ಬಾಸ್ಟನ್‌ ಅಂಗಳದಲ್ಲಿ ನಡೆದ ಮಳೆಪೀಡಿತ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು 9 ವಿಕೆಟ್‌ಗಳಿಂದ ಮಣಿಸಿತು.

Advertisement

ಆಸ್ಟ್ರೇಲಿಯ 8 ವಿಕೆಟಿಗೆ 114 ರನ್‌ ಮಾಡಿತು. ಆದರೆ ಮಳೆಯಿಂದಾಗಿ ಭಾರತಕ್ಕೆ 3.3 ಓವರ್‌ಗಳಲ್ಲಿ 42 ರನ್‌ ಗುರಿ ಲಭಿಸಿತು. ಇದನ್ನು ಒಂದು ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿತು.

ಇಂಟರ್‌ನ್ಯಾಶನಲ್‌ ಬ್ಲೈಂಡ್ ಸ್ಪೋರ್ಟ್ಸ್ ಫೆಡರೇಶನ್‌ ವರ್ಲ್ಡ್ ಗೇಮ್ಸ್‌ ನಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್‌ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾರತದ ಪುರುಷರ ತಂಡ ಕೂಡ ಫೈನಲ್‌ ಪ್ರವೇಶಿಸಿದ್ದು, ಇಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next