Advertisement

2028 Los Angeles ಒಲಿಂಪಿಕ್ಸ್‌ ಗೆ ಕ್ರಿಕೆಟ್‌ ; ಅ.15ರಂದು ಅಧಿಕೃತ ಪ್ರಕಟನೆ

12:08 AM Oct 10, 2023 | Team Udayavani |

ಲಂಡನ್‌: ಜಗತ್ತಿನ ಪರಮೋತ್ಛ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ 1900ರ ಬಳಿಕ ಕ್ರಿಕೆಟ್‌ ಸ್ಪರ್ಧೆ ಸೇರ್ಪಡೆಗೊಳ್ಳಲಿರುವ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಪಂದ್ಯವನ್ನು ಪದಕ ಸ್ಪರ್ಧೆಯಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಫ್ಲ್ಯಾಗ್‌ ಫುಟ್‌ಬಾಲ್‌, ಬೇಸ್‌ಬಾಲ್‌, ಸಾಫ್ಟ್ ಬಾಲ್‌ ಕ್ರೀಡೆಗಳೂ ಇರಲಿವೆ ಎಂದು “ದಿ ಗಾರ್ಡಿಯನ್‌’ ವರದಿ ಮಾಡಿದೆ.

Advertisement

141ನೇ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸಭೆ ಅ.15ರಂದು ಮುಂಬಯಿ ಯಲ್ಲಿ ನಡೆಯಲಿದ್ದು, ಆಗ ಅಧಿಕೃತ ಪ್ರಕಟನೆ ಹೊರಬೀಳಲಿದೆ ಎಂದು ವರದಿ ತಿಳಿಸಿದೆ.

2028ರ ಸಮ್ಮರ್‌ ಗೇಮ್ಸ್‌ಗೆ ಇನ್ನೂ 2 ಕ್ರೀಡೆಗಳನ್ನು ಹೆಚ್ಚುವರಿಯಾಗಿ ಸೇರಿಸಲು ಪ್ರಸ್ತಾವಿಸಲಾಗಿದೆ. ಇವುಗಳೆಂದರೆ ಲ್ಯಾಕ್ರೋಸ್‌ (ಹಾಕಿ ಶೈಲಿಯ ಆಟ) ಮತ್ತು ಸ್ಕ್ವಾಷ್‌. ಈವರೆಗೆ ಒಮ್ಮೆಯಷ್ಟೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಆಡಲಾಗಿತ್ತು. ಅದು 1900ರಷ್ಟು ಹಿಂದೆ. ಅಂದಿನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಚಿನ್ನದ ಸ್ಪರ್ಧೆಯ ಹೋರಾಟಕ್ಕೆ ಇಳಿದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next