Advertisement

ಭಾರತೀಯ ಕ್ರಿಕೆಟಿಗರ ಹೊಟೇಲ್‌ ಬಿಲ್‌ ನೀಡುವ ಮೂಲಕ ಸುದ್ದಿಯಾದ ನವಲ್‌ದೀಪ್‌ ಸಿಂಗ್‌

10:58 AM Jan 02, 2021 | Team Udayavani |

ಮೆಲ್ಬರ್ನ್: ಕ್ರಿಕೆಟ್‌ ಅಭಿಮಾನಿಯೊಬ್ಬರು ಟೀಮ್‌ ಇಂಡಿಯಾ ಆಟಗಾರರ ಹೊಟೇಲ್‌ ಬಿಲ್‌ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಈ ಅಭಿಮಾನಿ ಹೆಸರು ನವಲ್‌ದೀಪ್‌ ಸಿಂಗ್‌.

Advertisement

ನವಲ್‌ದೀಪ್‌ ತನ್ನ ಪತ್ನಿಯೊಂದಿಗೆ ಮೆಲ್ಬರ್ನ್ ರೆಸ್ಟೋರೆಂಟ್‌ನಲ್ಲಿದ್ದಾಗಲೇ ರೋಹಿತ್‌ ಶರ್ಮಾ, ನವದೀಪ್ ಸೈನಿ, ರಿಷಭ್ ಪಂತ್‌, ಶುಭ್ಮನ್ ಗಿಲ್‌ ಆಗಮಿಸಿದ್ದರು. ತನ್ನ ನೆಚ್ಚಿನ ಕ್ರಿಕೆಟಿಗರನ್ನು ಕಂಡ ನವಲ್‌ದೀಪ್‌ ಖುಷಿಗೆ ಪಾರವೇ ಇಲ್ಲ. ಕೊನೆಯಲ್ಲಿ ಉಳಿದ ಅಭಿಮಾನಿಗಳು ಕ್ರಿಕೆಟಿಗರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರೆ, ಇತ್ತ ಸಿಂಗ್‌ ಆ ಕ್ರಿಕೆಟಿಗರ 118.69 ಆ. ಡಾಲರ್‌ (6,683 ರೂ.) ಬಿಲ್‌ ಮೊತ್ತವನ್ನು ಪಾವತಿಸಿಯಾಗಿತ್ತು!

ಇದನ್ನೂ ಓದಿ:ಇನ್ನೂ ಎರಡು ವಿಶ್ವಕಪ್‌ ಆಡಿದ ಬಳಿಕವೇ ನಿವೃತ್ತಿ: ಕ್ರಿಸ್‌ ಗೇಲ್‌

ಇದನ್ನು ತಿಳಿದ ರೋಹಿತ್‌ ಆ ಮೊತ್ತವನ್ನು ತೆಗೆದುಕೊಳ್ಳುವಂತೆ ಸೂಚಿಸಿದರೂ ನವಲ್‌ದೀಪ್‌ ನಿರಾಕರಿಸಿದರು. ಬಳಿಕ ಪಂತ್‌, “ಥ್ಯಾಂಕ್ಯೂ ಭಾಭಿಜೀ ಫಾರ್‌ ದ ಲಂಚ್‌’ ಎಂದು ನವಲ್‌ದೀಪ್‌ ಪತ್ನಿಗೆ ಕೃತಜ್ಞತೆ ಸಲ್ಲಿಸಿದರು.

ಭಾರತ- ಆಸೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಜ.7ರಂದು ಆರಂಭವಾಗಲಿದೆ. ಭಾರತ ಅಡಿಲೇಡ್ ಪಂದ್ಯದಲ್ಲಿ ಸೋಲನುಭವಿಸಿದ್ದರೆ, ಮೆಲ್ಬರ್ನ್ ನಲ್ಲಿ ಗೆಲುವು ಕಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next