Advertisement

ಕ್ರಿಕೆಟ್‌ ಬೆಟ್ಟಿಂಗ್‌: ಮೂವರ ಬಂಧನ

11:55 AM Dec 08, 2018 | Team Udayavani |

ಬೆಂಗಳೂರು: ಭಾರತ -ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ಪಂದ್ಯ ಆಧರಿಸಿ ಬೆಟ್ಟಿಂಗ್‌ ಆಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿರುವ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ 16.43 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ.

Advertisement

ಹೆಮ್ಮಿಗೆಪುರ ನಿವಾಸಿ ಎಚ್‌.ಆರ್‌ ಮಂಜುನಾಥ್‌ (32), ಜೆ.ಪಿ ನಗರದ ಜೆ. ಗೋಪಾಲ್‌ (45) ಮತ್ತು ಬಿನ್ನಿ (33) ಬಂಧಿತರು. ಹೆಮ್ಮಿಗೆಪುರದ ಮನೆಯೊಂದರಲ್ಲಿ ಆರೋಪಿ ಮಂಜುನಾಥ್‌ ಕ್ರಿಕೆಟ್‌ ಪಂದ್ಯದ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ. ಆತನಿಂದ 11.5 ಲಕ್ಷ ರೂ. ನಗದು, ಒಂದು ಆ್ಯಪಲ್‌ ಐಫೋನ್‌ ಜಪ್ತಿ ಮಾಡಲಾಗಿದೆ. ಈ ಕುರಿತು ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತೂಂದು ಪ್ರಕರಣದಲ್ಲಿ, ಜೆ.ಪಿ.ನಗರದಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಮಾಹಿತಿ ಆಧರಿಸಿ ಆರೋಪಿಗಳಾದ ಗೋಪಾಲ್‌ ಹಾಗೂ ಬಿನ್ನಿಯನ್ನು ಬಂಧಿಸಿ 5.38 ಲಕ್ಷ ರೂ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಕುರಿತು ಜೆ.ಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next