Advertisement

ಕ್ರಿಕೆಟ್‌ ಬೆಟ್ಟಿಂಗ್‌: ಆರೋಪಿ ಬಂಧನ, 48 ಲಕ್ಷ ರೂ. ನಗದು ವಶ

02:32 PM Apr 05, 2023 | Team Udayavani |

ಬೆಂಗಳೂರು: ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ವಿಕ್ರಮ್‌ ಮೆಹ್ತಾ ಬಂಧಿತ. ಆರೋಪಿಯಿಂದ 47.90 ಲಕ್ಷ ರೂ. ನಗದು ಮತ್ತು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

ವಿಠ್ಠಲ್‌ ಮಲ್ಯ ರಸ್ತೆಯ ಸೂರ್ಯಮುಖೀ ಅಪಾರ್ಟ್‌ಮೆಂಟ್‌ ನಿವಾಸಿ ವಿಕ್ರಮ್‌ ಹಲವು ತಿಂಗಳಿನಿಂದ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ. ವಸಂತನಗರದ ಲೂಪ್‌ ರಸ್ತೆಯಲ್ಲಿ ಓಡಾಡುತ್ತಿದ್ದ ಆರೋಪಿ, ಕ್ರಿಕೆಟ್‌ ಪಂದ್ಯಗಳ ಸೋಲು- ಗೆಲುವು ಲೆಕ್ಕಾಚಾರದಲ್ಲಿ ಜನರಿಂದ ಹಣ ಕಟ್ಟಿಸಿಕೊಂಡು, ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ಕೃತ್ಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ವಶಕ್ಕೆ ಪಡೆಯಲಾಯಿತು. ಮೊಬೈಲ್‌ ಆ್ಯಪ್‌ ಹಾಗೂ ಜಾಲತಾಣಗಳ ಮೂಲಕ ಪಂದ್ಯಗಳ ರೆಶ್ಯೂ ತಿಳಿದುಕೊಂಡು ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದಾಗಿ ಆತನ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next