Advertisement

ಆಫ್ರಿಕಾ ಪ್ರವಾಸ ಬಹಿಷ್ಕರಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗರು

03:45 AM Jul 07, 2017 | Team Udayavani |

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿನ ವೇತನ ಬಿಗಡಾಯಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ನೀಡಿದ ಹೊಸ ವೇತನ ಒಪ್ಪಂದಕ್ಕೆ ಕ್ರಿಕೆಟಿಗರ ಸಂಸ್ಥೆ ಇನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ಇದೇ ತಿಂಗಳ ಆಸ್ಟ್ರೇಲಿಯಾ ಎ ತಂಡದ ದಕ್ಷಿಣ ಆಫ್ರಿಕಾದ ಪ್ರವಾಸವನ್ನೇ ಬಹಿಷ್ಕರಿಸಿದೆ. 

Advertisement

ಸದ್ಯದ ಪರಿಸ್ಥಿತಿಯನ್ನು ಗಮನಿಸಿದಾಗ ಆಸ್ಟ್ರೇಲಿಯಾದ ಮುಂದಿನ ಬಾಂಗ್ಲಾ, ಭಾರತ ಪ್ರವಾಸವೂ ರದ್ದಾಗುವ ಸಾಧ್ಯತೆಯಿದೆ. ಅಷ್ಟು ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೇ ನಡೆಯಲಿರುವ ಅತಿ ಪ್ರಮುಖ ಆ್ಯಷಸ್‌ ಸರಣಿಯೂ ಭೀತಿಯಲ್ಲಿದೆ. ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ನೂತನ ವೇತನ ಪದ್ಧತಿಯನ್ನು ಜಾರಿಗೆ ತಂದಿತ್ತು. ಅದನ್ನು ಒಪ್ಪಿಕೊಳ್ಳಲು ಜೂನ್‌ ತಿಂಗಳ ಗಡುವು ನೀಡಿತ್ತು. ಆದರೆ ಈ ವೇತನವು ರಾಷ್ಟ್ರೀಯ ಆಟಗಾರರು ಮತ್ತು ದೇಶೀಯ ಆಟಗಾರರ ನಡುವೆ ತೀವ್ರ ತಾರತಮ್ಯ ಸೃಷ್ಟಿಸುತ್ತಿದೆ ಎಂದು ಕ್ರಿಕೆಟಿಗರ ಸಂಘ ಆರೋಪಿಸಿ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ. ಪರಿಣಾಮ 230ಕ್ಕೂ ಹೆಚ್ಚು ಆಸೀಸ್‌ ಕ್ರಿಕೆಟಿಗರು ನಿರುದ್ಯೋಗಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next