Advertisement
ತವರಲ್ಲಿ ಬಾಂಗ್ಲಾದೇಶದ ವಿರುದ್ಧ ಆಗಸ್ಟ್-ಸೆಪ್ಟಂಬರ್‌ನಲ್ಲಿ 2 ಟೆಸ್ಟ್, ನ್ಯೂಜಿಲ್ಯಾಂಡ್ ವಿರುದ್ಧ ಅಕ್ಟೋಬರ್-ನವೆಂಬರ್‌ನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಜುಲೈಯಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಭಾರತದಲ್ಲಿ ಅಫ್ಘಾನ್,ಬಾಂಗ್ಲಾದೇಶ ಸರಣಿ
ಮುಂಬಯಿ: ಅಫ್ಘಾನಿ ಸ್ಥಾನಕ್ಕೆ ಕ್ರಿಕೆಟ್ ಆಯೋಜಿಸಲು ಭಾರತ ಎರಡನೇ ತವರು ತಾಣವಾಗಿದೆ. ಅದರಂತೆ ಅಫ್ಘಾನಿಸ್ಥಾನ-ಬಾಂಗ್ಲಾದೇಶ ನಡುವಿನ ತಲಾ 3 ಪಂದ್ಯಗಳ ಏಕದಿನ ಮತ್ತು 3 ಟಿ20 ಸರಣಿ ಆಯೋಜಿಸಲು ಬಿಸಿಸಿಐ ಒಪ್ಪಿಗೆ ನೀಡಿದೆ.