Advertisement
ಭಾರತದ 145 ಮಂದಿ ಸಹಿತ ವಿವಿಧ ರಾಷ್ಟ್ರಗಳ 600 ಮಂದಿ ಸಿಬಂದಿಯಿದ್ದ ಹಡಗು ಲಾಕ್‌ಡೌನ್‌ನಿಂದ ಬಂದರು ಸೇರಲಾಗದೆ ಮಾ. 14ರಿಂದ ಸಮುದ್ರದಲ್ಲಿಯೇ ಸಿಲುಕಿತ್ತು. ಈ ಮಧ್ಯೆ ಚೆನ್ನೈ, ಮಂಗಳೂರು, ಮುಂಬಯಿಗಳಲ್ಲಿ ಬಂದರು ಪ್ರವೇಶಿಸಲು ಪ್ರಯತ್ನಿಸಿ ದರೂ ಅವಕಾಶ ಸಿಗಲಿಲ್ಲ. ಹಾಗಾಗಿ ಹಡಗಿನಲ್ಲಿದ್ದ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿ ಊರಿಗೆ ತೆರಳಲು ಅವಕಾಶ ಕಲ್ಪಿಸುವಂತೆ ವಿನಂತಿಸಿದ್ದರು. ಕೊನೆಗೆ ಎ. 23ರಂದು ಮುಂಬಯಿ ಬಂದರಿನಲ್ಲಿ ಅವರನ್ನು ಇಳಿಸಲಾಯಿತು. ಬಳಿಕ ಅಂಧೇರಿಯಲ್ಲಿ 5 ದಿನಗಳ ಕಾಲ ಕ್ವಾರಂಟೈನ್ ಮಾಡಲಾಯಿತು. ಎಲ್ಲರ ತಪಾಸಣೆ ವರದಿ ನೆಗೆಟಿವ್ ಬಂದ ಬಳಿಕ ಎ. 30ರಂದು ಬಸ್, ಕಾರು ಗಳಲ್ಲಿ ಅವರವರ ಊರುಗಳಿಗೆ ಕಳುಹಿಸಲಾಯಿತು.
ಆತಂಕ ತಂದ ಉಷ್ಣಾಂಶ ಹಡಗು ಸಿಬಂದಿ ದ.ಕ. ಜಿಲ್ಲೆ ಪ್ರವೇ
ಶಿಸುವ ಹೆಜಮಾಡಿ ತಪಾಸಣೆ ಕೇಂದ್ರದಲ್ಲಿ ಪೊಲೀಸರು, ಆರೋಗ್ಯ ಇಲಾಖೆ ಸಿಬಂದಿ ಆರೋಗ್ಯ ತಪಾಸಣೆ ನಡೆಸಿ
ದಾಗ ದೇಹದ ಉಷ್ಣತೆ ಹೆಚ್ಚು ತೋರಿಸಿದ್ದು ಆತಂಕಕ್ಕೆ ಕಾರಣವಾಯಿತು. ಒಂದು ಗಂಟೆ ಕಾಲ ವಿಶ್ರಮಿಸಲು ಹೇಳಿ ಮತ್ತೆ ತಪಾಸಣೆ ಮಾಡಿದಾಗ ಸರಿಯಾದ ಉಷ್ಣತೆ ತೋರಿಸಿದ್ದರಿಂದ ತೆರಳಲು ಅವಕಾಶ ಕಲ್ಪಿಸಲಾಯಿತು.