Advertisement
ಬಿಜೆಪಿ ಸೇರಿದಂತೆ ಸಂಘ ಪರಿವಾರದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಮೃತರ ಅಂತಿಮ ದರ್ಶನ ಪಡೆದರು. ಇದಕ್ಕಾಗಿ ನಗರದ ಅಗ್ರಹಾರದ ರಾಮಾನುಜರಸ್ತೆಯ 9ನೇ ತಿರುವಿ ನಲ್ಲಿರುವ ಮೃತರ ಸ್ವಗೃಹದಲ್ಲಿ ಮಧ್ಯಾಹ್ನ 12.30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮಧ್ಯಾಹ್ನ 12.45ಕ್ಕೆ ಮೃತದೇಹವನ್ನು ತೆರೆದ ವಾಹನದಲ್ಲಿ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
Related Articles
Advertisement
ಮೃತರ ಸಂತಾಪ ಸಭೆ: ಮೈ.ಚ. ಜಯದೇವರ ಅವರ ನಿಧನದ ಹಿನ್ನೆಲೆಯಲ್ಲಿ ಸುತ್ತೂರು ಶ್ರೀ ಹಾಗೂ ಆರ್‌ಎಸ್‌ಎಸ್ ಕುಟುಂಬ ಪ್ರಮೋದನ್ ವಿಭಾಗದ ಅಖೀಲ ಭಾರತ ಪ್ರಮುಖ ಸು.ರಾಮಣ್ಣ ನೇತೃತ್ವದಲ್ಲಿ ಸಂತಾಪ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸು.ರಾಮಣ್ಣ, ಮೃತ ಮೈ.ಚ.ಜಯದೇವ ಅವರು ಅನೇಕರಿಗೆ ಪ್ರೇರಕ ಶಕ್ತಿಯಾಗಿದ್ದರು. ಸರಳ ಜೀವನಕ್ಕೆ ಒತ್ತು ನೀಡಿದ ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದ ಅವರು ಸಂಘಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಿದ್ದರು.
ಧೈರ್ಯದ ಮೇರು, ಹೋರಾಟದಲ್ಲಿ ಮುಂದಿದ್ದ ಜಯದೇವ ಅವರದ್ದು ಯಾರಿಗೂ ಹೆದರುವ ವ್ಯಕ್ತಿತ್ವ ವಾಗಿರಲಿಲ್ಲ. ರಾಷ್ಟ್ರೋತ್ಥಾನ ಪರಿಷತ್‌ನ ಶಿಲ್ಪಿಯಾಗಿದ್ದ ಅವರು ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ಬದುಕು ನಡೆಸಿದವರು ಎಂದು ಬಣ್ಣಿಸಿದರು. ಸುತ್ತೂರು ಶ್ರೀಗಳು ಮಾತನಾಡಿ, ಸಂಘದ ಹೊರತಾಗಿ ಬೇರೇನು ಬೇಕಿರದ ಹಾಗೂ ಬೇರೇನನ್ನು ಚಿಂತಿಸದ ಮೈ.ಚ. ಜಯದೇವ ಅವರು ತಮ್ಮ ರಕ್ತದ ಕಣ ಕಣದಲ್ಲೂ ರಾಷ್ಟ್ರಪ್ರೇಮವನ್ನು ತುಂಬಿಕೊಂಡಿದ್ದರು ಎಂದು ಸ್ಮರಿಸಿದರು.
ಜಯದೇವ್ ಅವರು ನನಗೆ ತಂದೆ – ಗುರುವಿನ ಸ್ಥಾನದಲ್ಲಿದ್ದ ಮಾರ್ಗದರ್ಶಕ ರಾಗಿದ್ದರು. ನನ್ನ ಜೀವನದಲ್ಲಿ ದೊರೆತ ಎಲ್ಲಾ ಸ್ಥಾನಗಳಿಗೂ ಅವರೇ ಕಾರಣ ವಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯುತ್ತಿದ್ದೆ. ಸಂಘಕ್ಕಾಗಿ ಜೀವನವನ್ನೇ ಮುಡಿಪಾಗಿರಿಸಿದ್ದ ಅವರು ನನ್ನಂತಹ ಹಲವು ನಾಯಕರನ್ನು ದೇಶ ಸೇವೆಗೆ ಕರೆತಂದರು. ಇಂತಹ ಹಿರಿಯ ನನ್ನು ಕಳೆದು ಕೊಂಡು ಎಲ್ಲರೂ ತಬ್ಬಲಿಯಾಗಿದ್ದೇವೆ.-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಜಯದೇವ ಅವರು ರಾಷ್ಟ್ರ ಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿ ಕೊಂಡಿದ್ದರು. ನನ್ನಂತಹ ಹಲ ವಾರು ನಾಯಕರುಗಳನ್ನು ದೇಶ ಸೇವೆಗೆ ಕರೆ ತಂದ ಅವರ ಆದರ್ಶ ಜೀವನ ಅನೇಕರಿಗೆ ಪ್ರೇರಣೆಯಾಗಿದೆ.
-ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ