Advertisement
ನೆದರ್ಲೆಂಡ್‌ನ ಕಂಪೆನಿ ಫಗ್ರೋ (Fugro)ಈ ಕಟ್ಟಡದ ವಿನ್ಯಾಸ ರೂಪಿಸಿದೆ. ಮಾತ್ರವಲ್ಲದೆ 928 ಮೀಟರ್ (3,028 ಅಡಿ) ಎತ್ತರದ ಕಟ್ಟಡ ನಿರ್ಮಾಣಕ್ಕೆ ಮಣ್ಣಿನ ಪರೀಕ್ಷೆಯನ್ನೂ ನಡೆಸಿದೆ. ದುಬೈನ ಎಮ್ಮಾರ್ ಪ್ರಾಪರ್ಟೀಸ್ ಅದರ ನಿರ್ಮಾಣ ಕಾರ್ಯವನ್ನು ವಹಿಸಿಕೊಳ್ಳಲಿದೆ.
ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಟಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ನಾಲ್ಕು ದಿನಗಳ ಹಿಂದೆ ಅದು ಉದ್ಘಾಟನೆಯಾಗಿದೆ. ಅದು 492 ಅಡಿ ಎತ್ತರವಿದೆ. ಮಹಾನಗರದ ಆಶೋತ್ತರ ಮತ್ತು ಸಾಧನೆಯ ಹೆಗ್ಗು ರುತು ಅದಾಗಬೇಕು ಎನ್ನುವುದು ಪ್ರವರ್ತಕರ ಅಭಿಲಾಶೆಯಾಗಿದೆ. ಚಿನ್ನದ ಬಣ್ಣದ ಕನ್ನಡಿಗಳಿಂದ ಅದು ಒಡಗೂಡಿದ್ದು, 2020ರಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ವಿವರಗಳನ್ನು ಒಳಗೊಂಡಿದೆ. ಹೆಬ್ಟಾಗಿಲಿನ ಮೇಲ್ಭಾಗಕ್ಕೆ ಹೋದಾಗ ಬುರ್ಜ್ ಖಲೀಫಾ ಸಹಿತ ಇತರ ಗಗನಚುಂಬಿ ಕಟ್ಟಡಗಳ ದೃಶ್ಯ ಕಾಣುತ್ತದೆ.