Advertisement
ಕಾರ್ಪೊರೇಟ್ ಕಂಪೆನಿಯ ತಾನು ತಯಾರಿಸಿದ ಸರಕನ್ನು ಜನಸಾಮಾನ್ಯರಿಗೆ ಮಾಹಿತಿ ಮುಟ್ಟಿಸುವ ಮಾರ್ಗವೆಂದರೆ ಅದು ಜಾಹೀರಾತು. ವಸ್ತು, ಸೇವೆಗಳ ಬಗ್ಗೆ ಸಾಮಾಜಿಕ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಜಾಹೀರಾತನ್ನು ಬಳಸಲಾಗುತ್ತದೆ. ಹಾಗಾಗಿ ಈ ಕ್ಷೇತ್ರದಲ್ಲಿ ಉತ್ತಮ ಸಂವಹನ ಕೌಶಲ, ಬುದ್ಧಿವಂತಿಕೆ, ಸೃಜನಾಶೀಲರಾದವರಿಗೆ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚಿನದವಾಗಿರುತ್ತವೆ.
Related Articles
ಜಾಹೀರಾತು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಖಾಸಗಿ ಜಾಹೀರಾತು ಏಜೆನ್ಸಿಗಳು, ಸರ್ಕಾರಿ ಮತ್ತು ಖಾಸಗಿ ವಲಯದ ಜಾಹೀರಾತು ವಿಭಾಗಗಳು, ದಿನಪತ್ರಿಕೆ, ಜರ್ನಲ್ಗಳು, ನಿಯತಕಾಲಿಕೆಗಳು, ರೇಡಿಯೊ ಮತ್ತು ದೂರದರ್ಶನಗಳ ಕಮರ್ಷಿಯಲ್ ವಿಭಾಗಗಳು, ಮಾರ್ಕೆಟ್ ರಿಸರ್ಚ್ ಸಂಸ್ಥೆಗಳು – ಈ ಎಲ್ಲೆಡೆ ಉದ್ಯೋಗಾವಕಾಶಗಳು ಹೆಚ್ಚಿವೆ. ಜತೆಗೆ ಫ್ರೀಲಾನ್ಸ್ (ಸ್ವತಂತ್ರ) ಆಗಿಯೂ ಜಾಹೀರಾತು ಸೇವೆ ಸಲ್ಲಿಸಬಹುದು. ಅಡ್ವರ್ಟೈಸಿಂಗ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್, ಸಾರ್ವಜನಿಕ ಸಂಪರ್ಕಾಧಿಕಾರಿ, ಕ್ರಿಯೇಟಿವ್ ಡೈರೆಕ್ಟರ್, ಕಾಪಿ ರೈಟರ್ ಮತ್ತು ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ಮ್ಯಾನೇಜರ್‌ಗಳಾಗಿ ಹುದ್ದೆಗಳನ್ನು ಪಡೆಯಬಹುದು. ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗಳು ಇಂದು ಹೆಚ್ಚಿನ ಬೇಡಿಕೆಯಿದೆ. ಜಾಹೀರಾತು ಕಂಪೆನಿಗಳು ಬಹುತೇಕವಾಗಿ ಹೆಚ್ಚು ಸೃಜನಾಶೀಲ ಹಾಗೂ ಕ್ರಿಯಾಶೀಲರಾಗಿರುವ ಆಕಾಂಕ್ಷಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.
Advertisement