Advertisement

ಕವಿತೆಗಳ ಸೃಷ್ಟಿ ಸುಲಭವಲ್ಲ : ಶಿವಲೀಲಾ ಹುಣಸಗಿ

04:26 PM Oct 20, 2020 | Suhan S |

ಹಾಸನ: ಕವಿತೆಯ ಹುಟ್ಟು ಅಷ್ಟು ಸುಲಭದಮಾತಲ್ಲ. ಅದು ಪ್ರಸವ ವೇದನೆಗೆ ಸಮಾನ. ಅಷ್ಟು  ಅನುಭವದ ಗರಡಿಯಲ್ಲಿ ಮೈಳೈಸಿದಮೇಲೆಒಂದು ಕವಿತೆ ಅಮೂರ್ತದಿಂದ ಮೂರ್ತ ರೂಪಕ್ಕೆ ಬರುತ್ತದೆ ಎಂದು ಕವಯಿತ್ರಿ ಶಿವಲೀಲಾ ಹುಣಸಗಿ ಅಭಿಪ್ರಾಯಪಟ್ಟರು.

Advertisement

ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನ ಹಮ್ಮಿಕೊಂಡಿದ್ದ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಕವಿ-ಕಾವ್ಯ ಸಂಭ್ರಮದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಶಿಲೆ ಮೂರ್ತಿಯಾಗಿಪರಿವರ್ತನೆಯಾಗಲು ಶಿಲ್ಪಿಯ ದೂರ ದೃಷ್ಟಿ,ಕೆತ್ತುವ ತಾಳ್ಮೆ ಎಷ್ಟು ಮುಖ್ಯವೋ ಹಾಗೆಯೇ ಒಬ್ಬ ಕವಿಗೆ ಕವಿತೆ ಸೃಷ್ಟಿಸುವಾಗ ಅವನ ಅನುಭವ ಜನ್ಯ, ವರ್ತಮಾನದ ಅಂಶಗಳಿಗೆ ವಾಸ್ತವಿಕ ನೆಲೆಗಟ್ಟನ್ನುಮೌಲ್ಯದ ಅಡಿಯಲ್ಲಿ ಕಟ್ಟಿ ಕೊಳ್ಳಲು ಜ್ಞಾನದ ಅವಶ್ಯಕತೆಯಿದೆ ಎಂದರು.

ಈ ನಿಟ್ಟಿನಲ್ಲಿ ಕವಿಯಾದವನಿಗೆ ತಾಳ್ಮೆಯ ಜೊತೆ ಸತತ ಸಾಧನೆ ಬೇಕು. ಜೊತೆಗೆ ಯಾವುದೇ ಹೊಗಳಿಕೆಗೆ ಬರೆಯದೇ ತನ್ನ ಆತ್ಮ ತೃಪ್ತಿಗಾಗಿ ಬರೆಯಬೇಕು ಎಂದು ಹೇಳಿದರು. ಪ್ರಕಾಶನದ ಸೇವೆ ಮೆಚ್ಚುವಂತದ್ದು: ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿತೆಗಳು ಭಿನ್ನ ವಿಭಿನ್ನವಾಗಿವೆ. ಆದರೂ ಎಲ್ಲಾ ಕವಿತೆಗಳಆಶಯ ಸಮಾಜದ ಪರಿವರ್ತನೆಯ ಭಾವಗಳನ್ನು ತುಂಬಿಕೊಂಡಿವೆ. 34 ಕವಿಗಳು ನಾಡಿನ ವಿವಿಧೆಡೆಯಿಂದ ಆಗಮಿಸಿ ಕನ್ನಡದ ಕಂಪನ್ನು ಹಂಚಲು ಪ್ರಯತ್ನಿಸಿದ್ದಾರೆ. ಕನ್ನಡ ಸಾಹಿತ್ಯದ ಸೇವೆಗೆ ದುಡಿಯುತ್ತಿರುವ ಮಾಣಿಕ್ಯ ಪ್ರಕಾಶನದ ಸೇವೆ ಮೆಚ್ಚುವಂತದ್ದು ಎಂದು ಹೇಳಿದರು.

ಮಾಣಿಕ್ಯ ಪ್ರಕಾಶನದ ದೀಪಾ ಕೊಟ್ರೇಶ್‌ ಉಪ್ಪಾರ್‌ ಅವರ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆ ಯಿಂದ ಕವಿಗಳನ್ನು ಆಹ್ವಾನಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾದುದು ಎಂದರು. ರಾಜ್ಯ ಸಂಘಟನಾಕಾರ್ಯದರ್ಶಿ ನಾಗರಾಜ್‌ ದೊಡ್ಡಮನಿ ಮಾತ ನಾಡಿ, ಹಾಸನ ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕೊಟ್ರೇಶ್‌ ಎಸ್‌.ಉಪ್ಪಾರ್‌ ಅವರು ತಮ್ಮ ಸಂಘಟನಾ ಶ‌ಕ್ತಿಯಿಂದ ಗುರುರ್ತಿಸಿಕೊಂಡಿದ್ದಾರೆ. ತಾನೂ ಬೆಳೆದು ತನ್ನವರನ್ನೂ ಬೆಳೆಸುವ ‌ ಅವರ ಗುಣ ಅಪರೂಪವಾದುದು ಎಂದರು.

ಹಾಸನ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ವಿಜಯಪುರ ಜಿಲ್ಲಾಧ್ಯಕ್ಷೆ ಗಿರಿಜಾ ಮಾಲಿ ಪಾಟೀಲ್‌, ಚಿತ್ರದುರ್ಗ ಜಿಲ್ಲಾಧ್ಯಕ್ಷ ನಂರುಶಿ ಕಡೂರು,ಶಿವಮೊಗ್ಗ ಜಿಲ್ಲಾಧ್ಯಕ್ಷೆ ಕುಮುದಾ ಬಿ.ಸುಶೀಲಪ್ಪ, ಮೈಸೂರು ಜಿಲ್ಲಾಧ್ಯಕ್ಷ ಡಾ.ಬಿ.ಬಸವರಾಜ್‌, ಚಾಮರಾಜನಗರ ಜಿಲ್ಲಾಧ್ಯಕ್ಷ ಡಾ.ಮಹೇಶ್‌ಚಿಕ್ಕಲ್ಲೂರು ಸೇರಿದಂತೆ ಹಲವು ಗಣ್ಯರು ಮಾತ ನಾಡಿದರು. ನೀಲಾವತಿ ಸಿ.ಎನ್‌.ಸ್ವಾಗತಿಸಿದರು, ಎ.ಸಿ.ನಿರಂಜನ್‌ ಎ.ಸಿ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next