ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನು ಷ್ಠಾನ ಸಂಬಂಧ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೂ ಪಠ್ಯಕ್ರಮ ಚೌಕಟ್ಟು (ಕೆಸಿಎಫ್)ರಚನೆಗೆ ಸಿದ್ಧತೆ ಮಾಡಿ ಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಬಿ.ಸಿ. ನಾಗೇಶ್ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ.
ಗುರುವಾರ ಎನ್‌ಸಿಎಫ್ ಬಿಡುಗಡೆಯಾಗಿದ್ದು, 3ರಿಂದ 8ನೇ ವಯಸ್ಸಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದಲ್ಲಿ ಬೋಧಿಸಬೇಕಾದ ಪಠ್ಯದ ಚೌಕಟ್ಟನ್ನು ಬಿಡುಗಡೆ ಮಾಡಿದೆ. ಇದನ್ನು ರಾಜ್ಯದ ಶಿಕ್ಷಣ ಕ್ರಮಗಳಿಗೆ ಅನು ಗುಣ ವಾಗುವಂತೆ ಬದ ಲಾವಣೆ ಮಾಡಿ ಕೊಂಡು ಅಳವಡಿಸಿಕೊಳ್ಳುವ ಕೆಲಸ ಆರಂಭಿಸುವಂತೆ ತಿಳಿಸಿದ್ದಾರೆ.
ರಾಜ್ಯದಲ್ಲಿ ತತ್‌ಕ್ಷಣದಿಂದಲೇ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲಸ ಗಳನ್ನು ತ್ವರಿತಗತಿಯಲ್ಲಿ ಮಾಡ ಬೇಕು. ಈಗಾಗಲೇ ನವೆಂಬರ್ ವೇಳೆಗೆ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ಎನ್‌ಇಪಿ ಜಾರಿ ಮಾಡುವುದಾಗಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು.
ಸಮಗ್ರ ಶಿಕ್ಷಣ ಕರ್ನಾಟಕದ ಯೋಜನ ನಿರ್ದೇಶಕರು ಹಾಗೂ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳನ್ನು ಒಳ ಗೊಂಡು ಸಭೆ ನಡೆಸಿರುವ ಸಚಿವರು, ಎನ್‌ಇಪಿ ಜಾರಿ ಸಂಬಂಧ ಮದನ್ ಗೋಪಾಲ್ ನೇತೃತ್ವದ ಕಾರ್ಯಪಡೆ ಹಾಗೂ 6 ಉಪ ಸಮಿತಿ ಗಳು ಕೆಸಿಎಫ್ ಕಾರ್ಯ ಆರಂಭಿಸುವಂತೆ ತಿಳಿಸಿದ್ದಾರೆ. ಎಲ್ಲ ಖಾಸಗಿ ಶಾಲೆಗಳೂ ಈ ವರ್ಷದಿಂದಲೇ ಜಾರಿಗೊಳಿಸಬಹುದು.
ಪಠ್ಯಕ್ರಮ ಸಂಬಂಧಿಸಿದ
6 ಉಪ ಸಮಿತಿಗಳು
-ಪಠ್ಯಕ್ರಮ ವಿನ್ಯಾಸ
-ಪಠ್ಯಕ್ರಮ, ಬೋಧನೆ ಮತ್ತು ಕಲಿಕಾ ಸಾಮಗ್ರಿ ಹಾಗೂ ಮೌಲ್ಯಮಾಪನ
-ಸಾಮರ್ಥ್ಯ ಅಭಿವೃದ್ಧಿ
-ಸಮುದಾಯ ತಲುಪುವಿಕೆ
-ಮಗುವಿನ ಆರಂಭಿಕ ಉತ್ತೇಜನ