Advertisement

ಚಾಕಲೇಟ್‌ ಸೃಷ್ಟಿ

07:23 PM Aug 28, 2019 | Team Udayavani |

ಚಾಕ್ಲೇಟ್‌ ಅಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ? ಮಕ್ಕಳಿಂದ, ವಯಸ್ಸಾಗಿರುವವ ತನಕ ಚಾಕ್ಲೇಟ್‌ ಅಂದರೆ ಅದೇನೋ ವಿಶಿಷ್ಟವಾದ ಬಯಕೆ. ಈ ಚಾಕ್ಲೇಟ್‌ ಅನ್ನು ಇಟ್ಟುಕೊಂಡೇ ಜಾದೂ ಮಾಡಬಹುದು. ಇದು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಅದು ಬಹಳ ಸುಲಭ. ಹೇಗೆಂದರೆ, ಮೇಜಿನ ಮೇಲೆ ಗಾಜಿನ ಒಂದು ಲೋಟವನ್ನು ಇಡಲಾಗಿದೆ. ಜಾದೂಗಾರ ಇದರಲ್ಲಿ ಏನೂ ಇಲ್ಲ ನೋಡಿಕೊಳ್ಳಿ ಅನ್ನೋ ರೀತಿ ಒಂದು ಕರವಸ್ತ್ರವನ್ನು ಬಿಡಿಸಿ ತೋರಿಸಿ, ಅದರಲ್ಲೇ ಲೋಟವನ್ನೂ ಮುಚ್ಚುತ್ತಾನೆ. “ಹೋಕಸ್‌, ಪೋಕಸ್‌’ ಎನ್ನುತ್ತಾ ಕರವಸ್ತ್ರವನ್ನು ತೆಗೆದಾಗ ಲೋಟದ ತುಂಬ ಚಾಕಲೇಟ್‌ಗಳು ಕಾಣಸಿಗುತ್ತದೆ. ಆಗ ನೋಡಿ, ಚಪ್ಪಳೆಯೋ ಚಪ್ಪಾಳೆ.

Advertisement

ಇದೆಲ್ಲ ಹೇಗೆ ಬಂತು? ಲೋಟದೊಳಗೆ ಯಾರು ತಂದು ಇಟ್ಟರು? ಅನ್ನೋ ಕೌತುಕ ಹೆಚ್ಚುತ್ತದೆ. ಇದರ ರಹಸ್ಯ ಇಷ್ಟೆ. ನೀವು ಮಾಡಬೇಕಾದದ್ದು ಇಷ್ಟೆ. ಒಂದು ಕನ್ನಡಿಯನ್ನು (ಮುಖ ನೋಡುವ ಕನ್ನಡಿ) ಗ್ಲಾಸಿನ ಒಳಭಾಗದಲ್ಲಿ ಎರಡು ಭಾಗಗಳಾಗುವಂತೆ ಇಡಿ. (ಈ ಕನ್ನಡಿಯನ್ನು ನೀವು ಮೊದಲೇ ಫೋಟೊ ಫ್ರೆಂ ಹಾಕುವವರಿಂದ ಗ್ಲಾಸಿನ ಒಳ ಅಳತೆಗೆ ಸರಿಹೊಂದುವಂತೆ, ಹುಷಾರಾಗಿ ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ಈ ಕನ್ನಡಿಗೆ ಫ್ರೆಂ ಇರಬಾರದು) ಕನ್ನಡಿಯ ಹಿಂಭಾಗದಲ್ಲಿ ಚಾಕಲೇಟುಗಳನ್ನು ಇಡಿ. ಮುಂಭಾಗ ಪ್ರೇಕ್ಷಕರ ಕಡೆ ಇರಲಿ. ದೂರದಿಂದ ನೋಡಿದಾಗ ಗ್ಲಾಸ್‌ ಖಾಲಿ ಇರುವಂತೆ ಭಾಸವಾಗುತ್ತದೆ. ಇವಿಷ್ಟು ಹೊರಭಾಗದ ಕೆಲಸಗಳು. ಆದರೆ, ನೀವು ಒಳಗೆ ಒಂದು ಸಣ್ಣ ಟೆಕ್ನಿಕ್‌ ಮಾಡಬೇಕಾಗುತ್ತದೆ. ಅದೇನೆಂದರೆ, ಕರವಸ್ತ್ರವನ್ನು ಲೋಟದ ಮೇಲೆ ಹಾಕಿ ತೆಗೆಯವಾಗ ಅದರೊಳಗಿರುವ ಕನ್ನಡಿಯನ್ನೂ, ಅದರ ಜತೆ ಹೊರ ತೆಗೆಯಿರಿ. ಆ ನಂತರ ಅದರ ತಳಗೆ ಈಗಾಗಲೇ ಅಡಗಿಸಿಟ್ಟಿದ್ದ ಚಾಕ್ಲೇಟ್‌ಗಳನ್ನು ಗ್ಲಾಸಿನಿಂದ ಹೊರಗೆ ಸುರಿಯಿರಿ.

ಅರೆ, ಚಾಕ್ಲೇಟ್‌ ಎಲ್ಲಿಂದ ಬಂತು ಅಂತ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ನಿಮ್ಮ ಚಮತ್ಕಾರಕ್ಕೆ ಒಳ್ಳೆ ಬೆಲೆ ಸಿಗುತ್ತದೆ.

ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next