Advertisement
ವಿದ್ಯಾರ್ಥಿಯಾದ ಆಕಾಂಕ್ಷ್ ಹುಲಿ ಮುಖ ಹೋಲುವ ಹೆಲ್ಮೆಟ್ ಧರಿಸಿ ಜನರನ್ನು ಆಕರ್ಷಿಸುತ್ತಿದ್ದಾರೆ. ಐಎಸ್‌ಒ ಮಾರ್ಕ್‌ನ ಹೆಲ್ಮೆಟ್ ಖರೀದಿಸಿದ ಆಕಾಂಕ್ಷ್ ಅವರು ಹುಲಿ ಬಣ್ಣದಂತೆ ಪೈಂಟ್ ಮಾಡಿ ಕೊಡಿ ಎಂದು ಕಲಾವಿದ ಉಮೇಶ್ ಬೋಳಾರ್ ಅವರಲ್ಲಿ ತಿಳಿಸಿದ್ದರು. ಆದರೆ ಉಮೇಶ್ ಅವರು ಧರ್ಮೋಫೋಮ್, ಗಮ್‌ಗಳನ್ನು ಬಳಸಿ ಹುಲಿಯ ಮುಖದಂತೆ ಹೆಲ್ಮೆಟ್‌ನ್ನು ಸಿದ್ಧಪಡಿಸಿದ್ದು, ಆರು ತಿಂಗಳ ಹಿಂದೆಯೇ ಹೆಲ್ಮೆಟ್ ತಯಾರಾಗಿದ್ದರೂ ಕೆಲವು ದಿನಗಳಿಂದ ಅದನ್ನು ಬಳಸುತ್ತಿದ್ದೇನೆ ಎಂದು ಆಕಾಂಕ್ಷ್ ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ. ಅಜ್ಜ ಹುಲಿ ವೇಷಾಧಾರಿಯಾಗಿದ್ದರಿಂದ ಚಿಕ್ಕಂದಿನಿಂದಲೇ ಹುಲಿ ಬಗ್ಗೆ ಆಕರ್ಷಣೆ ಇತ್ತು. ಹಾಗಾಗಿ ಹುಲಿ ಮುಖದಂತಹ ಹೆಲ್ಮೆಟ್ ಮಾಡಿಸಿಕೊಂಡೆಎನ್ನುವ ಆಕಾಂಕ್ಷ್ , ನಗರದ ಖಾಸಗಿಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.
ಕೆಲವು ದಿನಗಳಿಂದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಈ ಹುಲಿ ಹೆಲ್ಮೆಟ್ ನ ಫೋಟೋ ವೈರಲ್ ಆಗುತ್ತಿದೆ. ಆಕಾಂಕ್ಷ್ ಅವರು ಹೆಲ್ಮೆಟ್ ಧರಿಸಿ ಸಂಚರಿಸುತ್ತಿರುವುದನ್ನು ಕೆಲವರು ಅಚ್ಚರಿಯಿಂದ ನೋಡುತ್ತಿದ್ದರೆ ಇನ್ನೂ ಕೆಲವರು ಬೈಕ್ ನಿಲ್ಲಿಸಿ ಆ ಹೆಲ್ಮೆಟ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಪರಿಶೀಲಿಸಿ ಕ್ರಮ
ವಾಹನಗಳ ಆಲ್ಟ್ರೇಶನ್ ಬಗ್ಗೆ ಈ ಹಿಂದೆ ಕೇಳಿದ್ದೆ. ಆದರೆ ಹೆಲ್ಮೆಟ್ ಆಲ್ಟ್ರೇಶನ್ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂದು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ.
– ಮಂಜುನಾಥ ಶೆಟ್ಟಿ
ಸಂಚಾರಿ ವಿಭಾಗದ ಎಸಿಪಿ