Advertisement

ಯುವಕರಲ್ಲಿ ಪರಿಸರ ಸಂರಕ್ಷಣೆಯ ಆಸಕ್ತಿ ಮೂಡಿಸಿ: ಶ್ರೀಧರ್‌

11:21 AM Jun 22, 2019 | mahesh |

ಮಹಾನಗರ: ಸ್ವಯಂ ಪ್ರೇರಿತ ಸೇವಾ ಸಂಸ್ಥೆಗಳು ವಿವಿಧ ಪರಿಸರ ಸಂರಕ್ಷಣಾ ಯೋಜನೆಗಳನ್ನು ಆಯೋಜಿಸಿ ಯುವ ಜನರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಮೂಡಿಸುವ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ವಲಯ ಅರಣ್ಯಾಧಿಕಾರಿ, ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಪಿ. ಶ್ರೀಧರ್‌ ಸಲಹೆ ನೀಡಿದ್ದಾರೆ.

Advertisement

ರೋಟರಿ ಕ್ಲಬ್‌ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ “ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು. ಈ ಅಮೂಲ್ಯ ಸೇವೆಗೆ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ನೀಡುವ ಆಶ್ವಾಸನೆ ನೀಡಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಡಾ| ರಂಜನ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ ಖ್ಯಾತ ಪರಿಸರವಾದಿ, ಹಸುರು ಕ್ರಾಂತಿಕಾರ ಜೀತ್‌ ಮಿಲನ್‌ ರೋಶ್‌ ಅವರು ಪರಿಸರ ಆಂದೋಲನಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ, ಗೌರವಿಸಿ ರೋಟರಿ ಸಂಸ್ಥೆಯ ಪ್ರತಿಷ್ಠಿತ “ಪರಿಸರ ಸಂರಕ್ಷಣಾ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಿಡ್ರಿಕ್‌ ಡಿ’ಸೋಜಾ ಅಭಿನಂದನ ಭಾಷಣ ಮಾಡಿದರು. ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ಡಾ| ಅನಿಲ್‌ ಕುಮಾರ್‌, ಸಮುದಾಯ ಸೇವಾ ಯೋಜನೆಯ ನಿರ್ದೇಶಕಿ ಸರಿತಾ ಡಿ’ಸೋಜಾ, ಕಾರ್ಯದರ್ಶಿ ಪ್ರಶಾಂತ್‌ ರೈ ಉಪಸ್ಥಿತರಿದ್ದರು. ಡಾ| ರೋಶನ್‌ ಮೊನಿಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next