ಮುಂಡಗೋಡ: ಭಯ ರಹಿತ ವಾತಾವರಣದಲ್ಲಿ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ ಎಂದು ಲೊಯೋಲಾ ಸಂಸ್ಥೆಯ ಜೆರಾಲ್ಡ್ ಡಿಸೋಜಾ ಹೇಳಿದರು.
ತಾಲೂಕಿನ ಜೋಡಿಕಟ್ಟ ಗ್ರಾಮದಲ್ಲಿ ಶಿಕ್ಷಣ ಇಲಾಖೆ, ಗ್ರಾಪಂ, ಎಸ್ ಡಿಎಂಸಿ ಹಾಗೂ ಲೋಯೋಲಾ ವಿಕಾಸ ಕೇಂದ್ರ ಆಯೋಜಿಸಿದ ಮಕ್ಕಳ ಸ್ನೇಹಿ ಶಾಲಾ ವಾತಾವರಣ ಉತ್ತೇಜಿಸುವ ಶಾಲಾಭಿವೃದ್ಧಿ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೂತನ ರಾಷ್ಟೀಯ ಶಿಕ್ಷಣ ನೀತಿ-2020, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೊಂದಿದ ವಿದ್ಯಾರ್ಥಿಸ್ನೇಹಿ ತರಗತಿಗಳನ್ನು ಉತ್ತೇಜಿಸುತ್ತಿದ್ದು, ಈ ದಿಸೆಯಲ್ಲಿ ತಳಮಟ್ಟದಿಂದಲೇ ಬುನಾದಿ ಗಟ್ಟಿಗೊಳಿಸುವ ಅಗತ್ಯತೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದಾಖ್ಲು ಶಳಕೆ ಮಾತನಾಡಿ ಪರಿಷ್ಕೃತ ಕ್ರಿಯಾ ಯೋಜನೆ ಅನ್ವಯ ಶೌಚಾಲಯಕ್ಕೆ ಮೇಲ್ಛಾವಣಿ, ಶಾಲಾ ಆವರಣ ಸಮತಟ್ಟು ಹಾಗೂ ಕೈತೋಟ, ಆವರಣಗೋಡೆ ಪೂರ್ಣಗೊಳಿಸಿವಿಕೆ, ಕುಡಿಯುವ ನೀರಿನ ಶುದ್ಧೀಕರಣಕ್ಕೆ μಲ್ಟರ್, ನಲಿ-ಕಲಿ ವಿಭಾಗಕ್ಕೆ ಹೆಚ್ಚುವರಿ ಶಿಕ್ಷಕ, ಗ್ರಂಥಾಲಯ, ಪೀಠೊಪಕರಣ, ಗೋಡೆ ಬರಹ ಇವು ಭಾಗಿದಾರರ ಪ್ರಮುಖ ಅಗತ್ಯತೆಗಳಾಗಿವೆ. ಇವನ್ನು ಗ್ರಾಪಂ, ದಾನಿಗಳು, ಸಂಘ-ಸಂಸ್ಥೆ, ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ, ಸಂಪನ್ಮೂಲ ಸಂಸ್ಥೆಗಳ ನೆರವು ಪಡೆದು ಮಕ್ಕಳ ಸ್ನೇಹಿ ಶಾಲೆಯನ್ನಾಗಿ ಪರಿವರ್ತಿಸಲು ಎಸ್‌ಡಿಎಂಸಿ ತಿರ್ಮಾನಿಸಿದೆ ಎಂದರು.
ಇದನ್ನೂ ಓದಿ:ಫೆಬ್ರವರಿಯಿಂದ ಇಡೀ ದಿನ ಶಾಲೆ ನಡೆಸಲು ಸಮಾಲೋಚನೆ
ನಾಜರಾಜ ಕಟ್ಟಿಮನಿ, ಮಹಾದೇವಗೌಡ ಪಾಟೀಲ, ದಾನೇಶ್ವರಿ, ರಾಮು ಪಿಂಗಳೆ, ಲೊಯೋಲಾ ವಿಕಾಸ ಕೇಂದ್ರದ ಸಿಬ್ಬಂದಿ ಇದ್ದರು