Advertisement

ISIS: ನಕಲಿ ಬಿಲ್‌ ಸೃಷ್ಟಿಸಿ ಐಸಿಸ್‌ಗೆ ಹಣ ಸಂಗ್ರಹ!

12:03 AM Dec 26, 2023 | Team Udayavani |

ಹೊಸದಿಲ್ಲಿ: ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಇತ್ತೀಚೆಗೆ ಮಹಾರಾಷ್ಟ್ರ, ಕರ್ನಾಟಕ ಸೇರಿ ಒಟ್ಟು 44 ಸ್ಥಳಗಳಲ್ಲಿ ದಾಳಿ ನಡೆಸಿ ನಿಷೇಧಿತ ಉಗ್ರ ಸಂಘ ಟನೆ ಐಸಿಸ್‌ನ ಒಟ್ಟು 15 ಮಂದಿ
ಯನ್ನು ಬಂಧಿಸಿದೆ. ಗಮನಾರ್ಹ ಸಂಗತಿಯೆಂದರೆ ಈ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಉತ್ತರ ರೈಲ್ವೇಯ ಗುಮಾಸ್ತನೊಬ್ಬ ತಲೆತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ಹಲವು ತಂಡಗಳು ಶೋಧ ನಡೆಸುತ್ತಿವೆ. ಈತ ನಕಲಿ ವೈದ್ಯಕೀಯ ಬಿಲ್‌ಗ‌ಳನ್ನು ತಯಾರು ಮಾಡಿ ಇಲಾಖೆಗೆ ಸಲ್ಲಿಸುತ್ತಿದ್ದ. ಪಾವತಿಯಾಗಬೇಕಾದ ಮೊತ್ತಕ್ಕೆ ಐಸಿಸ್‌ ಉಗ್ರರ ಖಾತೆಯ ವಿವರಗಳನ್ನು ನೀಡಿದ್ದ. ಈ ಹಣವನ್ನು ಉಗ್ರರು ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಿಕೊಳ್ಳಲು ಬಳಸಿಕೊಳ್ಳುತ್ತಿದ್ದರು.

Advertisement

ಏನಿದು ನಕಲಿ ಬಿಲ್‌ ವಂಚನೆ?
ಉತ್ತರಪ್ರದೇಶದ ನೊಯ್ಡಾ ನಿವಾಸಿಯಾಗಿದ್ದ ಈ “ಗುಮಾಸ್ತ”ನ ತಲೆಗೆ ಐಸಿಸ್‌ ಉಗ್ರರು ಮತೀಯ ವಿಷವನ್ನು ತುಂಬಿದ್ದರು. ಪರಿಣಾಮವಾಗಿ ಆತ ಉಗ್ರರಿಗೆ ಹಣಕಾಸು ನೆರವು ನೀಡಲು ಆರಂಭಿ ಸಿದ್ದ. ಇದಕ್ಕಾಗಿ ಆತ ಕಂಡುಕೊಂಡ ಮಾರ್ಗ ನಕಲಿ ವೈದ್ಯಕೀಯ ಬಿಲ್‌ಗ‌ಳನ್ನು ಸಿದ್ಧಪಡಿಸಿ ರೈಲ್ವೇ ಇಲಾಖೆಗೆ ಸಲ್ಲಿಸುವುದು. ಆ ಹಣ ಉಗ್ರರ ಖಾತೆ ಸೇರಿಕೊಳ್ಳುತ್ತಿತ್ತು ಎಂದು ಮೂಲಗಳು ಹೇಳಿವೆ.

ಗೊತ್ತಾದದ್ದು ಹೇಗೆ?
ಅಕ್ಟೋಬರ್‌ ತಿಂಗಳಿನಲ್ಲಿ ಐಸಿಸ್‌ಗೆ ಸೇರಿದ ಮೂವರು ಉಗ್ರರಾದ ಶಹನವಾಜ್‌ ಆಲಮ್‌, ಮೊಹಮ್ಮದ್‌ ರಿಜ್ವಾನ್‌ ಅಶ್ರಫ್, ಮೊಹಮ್ಮದ್‌ ಅರ್ಷದ್‌ ವಾರ್ಸಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಈ ಪ್ರಕರಣದ ತನಿಖೆ ಎನ್‌ಐಎ ಹೆಗಲೇರಿತು. ಆ ವೇಳೆ ಉಗ್ರರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಯಿತು. ಆಗ ಒಂದೇ ಮೂಲದಿಂದ ನಿರಂತರವಾಗಿ ಹಣ ಬರುವುದು ಪತ್ತೆಯಾಯಿತು. ಇದನ್ನು ವಿಚಾರಣೆ ಮಾಡಿದಾಗ ಉತ್ತರ ರೈಲ್ವೇ ವಲಯದ ವಿತ್ತ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತನೊಬ್ಬ ಇಂತಹ ವ್ಯವಸ್ಥೆ ಮಾಡಿರುವುದು ಪತ್ತೆಯಾಯಿತು.

ಇದನ್ನು ಉತ್ತರ ರೈಲ್ವೇ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅವರು ದಿಲ್ಲಿಯ ಸಂಸತ್‌ ಮಾರ್ಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಈ ದೂರಿನಲ್ಲಿ ಆಂತರಿಕ ಅವ್ಯವಹಾರ ಎಂದಷ್ಟೇ ಮಾಹಿತಿ ನೀಡಲಾಗಿದ್ದು, ಗುಮಾಸ್ತ ಐಸಿಸ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಇಲ್ಲ.

ಬಂಧಿತರು ಮಹಾರಾಷ್ಟ್ರದವರು
ಎನ್‌ಐಎಯಿಂದ ಇತ್ತೀಚೆಗೆ ಬಂಧಿತರಾಗಿ ರುವ ಎಲ್ಲ 15 ಮಂದಿಯೂ ಮಹಾರಾಷ್ಟ್ರದ ಥಾಣೆಯವರು. ಇವರೆಲ್ಲ ಪಾದ್ಘಾ ಬೊರಿವಿಲಿ ಯಿಂದ ಉಗ್ರ ಕೃತ್ಯ ನಡೆಸಲು ಸಂಚು ನಡೆಸುತ್ತಿ ದ್ದರು. ಈ ಘಟಕಕ್ಕೆ 63 ವರ್ಷದ ಸಖೀಬ್‌ ನಾಚನ್‌ ಮುಖ್ಯಸ್ಥನಾಗಿದ್ದ. ಈತನ ಮೇಲೆ 12 ಕೇಸ್‌ಗಳು ದಾಖಲಾಗಿವೆ. ಈತ 1990 ಮತ್ತು 2002-03ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದ. ಎರಡೂ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿ, 2017ರಲ್ಲಿ ಬಿಡುಗಡೆಯಾಗಿದ್ದ. ಈಗ ಮತ್ತೆ ಎನ್‌ಐಎನಿಂದ ಬಂಧಿತನಾಗಿದ್ದಾನೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next