Advertisement

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಮಿತಿ ರಚನೆ ಮಾಡಿ

04:38 PM Oct 21, 2019 | Team Udayavani |

ಕೆಜಿಎಫ್: ಕನ್ನಡ ತಾಯಿ ಭುವನೇಶ್ವರಿ ಆರಾಧನೆ ಮತ್ತು ನಾಡು ನುಡಿಯ ಬಗ್ಗೆ ಗೌರವವಾಗಿ ನಡೆದುಕೊಳ್ಳಬೇಕು. ಎಲ್ಲಾ ಹಿರಿಯರನ್ನು ಒಳಗೊಂಡ ರಾಜ್ಯೋತ್ಸವ ಸಮಿತಿ ರಚನೆ ಮಾಡಿ, ಅದರ ಮೂಲಕ ದಿನಾಚರಣೆ ಮಾಡಬೇಕು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

Advertisement

ನಗರದ ಕಿಂಗ್‌ ಜಾರ್ಜ್‌ಹಾಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡ ಕಲೆ, ಸಂಸ್ಕೃತಿ ಉಳಿಯಬೇಕು. ಇಲ್ಲಿ ಕನ್ನಡ ಹೋರಾಟಗಾರರು, ಪ್ರಥಮ ಮುಖ್ಯಮಂತ್ರಿಯನ್ನು ಕೊಟ್ಟಿರುವ ತಾಲೂಕು ಇದೆ. ಸರ್ಕಾರ ಬಹುಶಃ ಶೀಘ್ರದಲ್ಲಿಯೇ ಒಂದು ಕೋಟಿ ರೂ.ಬಿಡುಗಡೆ ಮಾಡುವ ಸಂಭವ ಇದೆ ಎಂದರು.

ಪ್ರತಿಯೊಬ್ಬರ ಸಹಕಾರ ಅಗತ್ಯ: ಭಾಷೆ ಬಗೆಗೆ ಭಿನ್ನಾಭಿಪ್ರಾಯ ಬರಬಾರದು.ಭಾಷೆಗೆ ಅಪಮಾನ ಮಾಡಬಾರದು. ನನ್ನಿಂದ ಕೆಲವು ತಪ್ಪಾಗಿದೆ. ಅದನ್ನು ಮರಕಳಿಸಲು ಬಿಡುವುದಿಲ್ಲ. ನಮ್ಮ ಊರು ಚಿನ್ನದ ನಾಡು ಎಂದು ಹೇಳಲಾಗುತ್ತಿದೆ. ಆದರೆ, ನಿಜವಾದ ಚಿನ್ನದ ನಾಡು ನಮ್ಮ ಊರು ಇಲ್ಲ. ಚೆನ್ನಾಗಿರಬೇಕಾದ ಊರು ಹೇಗಿರಬೇಕು ಎಂಬ ನನ್ನ ಯೋಜನೆ ಇದೆ. ಅಭಿವೃದ್ಧಿ ಆಗಬೇಕಾಗಿದೆ. ಅಧಿಕಾರಿಗಳು ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಪರಿಶ್ರಮ ಇರಬೇಕು ಎಂದರು.

ಮಾನಸಿಕವಾಗಿ ಸಬಲರಾಗಿ: ಎಂಜಿನಿಯರ್‌, ಡಾಕ್ಟರ್‌, ವಿಜ್ಞಾನಿಗಳು ಬೇರೆ ದೇಶದಲ್ಲಿದ್ದಾರೆ. ನಮ್ಮ ಆಸ್ತಿಯಾದ ವಿದ್ಯಾವಂತ ಮಕ್ಕಳನ್ನು ನಾವು ಬಳಸಿಕೊಳ್ಳಬೇಕು. ವಯಸ್ಸಾದ ತಂದೆ ತಾಯಿಗಳು ಕೊನೆಗಾಲದಲ್ಲಿ ಕೊರತೆ ಅನುಭವಿಸಬಾರದು. ಮಕ್ಕಳು ನಮ್ಮ ಮುಂದೆ ಇದ್ದರೆ ಯಾವುದೇ ಕಾಯಿಲೆ ಬರಲ್ಲ. ಮಾನಸಿಕವಾಗಿ ಸಬಲರಾಗಿರುತ್ತೇವೆ. ಆರೋಗ್ಯ ಇಲ್ಲ. ಯಾಕೆಂದರೆ ನಮ್ಮ ಮಕ್ಕಳು ನಮ್ಮ ಹತ್ತಿರ ಇಲ್ಲ ಎಂದು ಶಾಸಕಿ ವಿಷಾದಿಸಿದರು. 50-60 ಸಾವಿರ ಜನಕ್ಕೆ ಕೆಲಸ ಕೊಟ್ಟ ಕೆಜಿಎಫ್ ಮತ್ತೆ ಗತವೈಭವವನ್ನು ಮರುಕಳಿಸಬೇಕು. ಇಲ್ಲಿ ಕೈಗಾರಿಕೆಗಳು ಬರಬೇಕು. ಅದಕ್ಕಾಗಿ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಇಲ್ಲಿಗೆ ಕೆಲಸ ಹುಡುಕಿಕೊಂಡು ಬರಬೇಕು. ಅಂತಹ ಕ್ಷೇತ್ರವನ್ನು ಸೃಷ್ಟಿಸಬೇಕು ಎಂದರು.

ಎಲ್ಲಾ ಭಾಷಿಕರು ಸಹಬಾಳ್ವೆ ನಡೆಸುವ ವಾತಾವರಣ ಇರಬೇಕು ಎಂದು ಶಾಸಕಿ ಹೇಳಿದರು. ನಗರಸಭೆ, ತಹಶೀಲ್ದಾರ್‌ ಅವರು, ಖಾಸಗಿ ಶಾಲೆಗಳಲ್ಲಿ ಕನ್ನಡದ ಫ‌ಲಕ ಹಾಕಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಕವಿ, ಸಾಹಿತಿಗಳ ಹೆಸರು ಇಡಬೇಕು ಎಂಬ ಸೂಚನೆ ಪಾಲಿಸುತ್ತೇನೆ ಎಂದು ರೂಪಕಲಾ ಹೇಳಿದರು. ತಹಶೀಲ್ದಾರ್‌ ಕೆ.ರಮೇಶ್‌, ನಗರಸಭೆ ಆಯುಕ್ತ ಸಿ.ರಾಜು, ಕೆಡಿಎ ಆಯುಕ್ತ ಜಬ್ಟಾರ್‌, ಕನ್ನಡ ಸಂಘದ ಅಧ್ಯಕ್ಷ ವಿಜಯಶಂಕರ್‌, ಅಶೋಕ ಲೋಣಿ, ವಿ.ಎಸ್‌.ಪ್ರಕಾಶ್‌, ಪುರುಷೋತ್ತಮ ಇದ್ದರು. ಅಶ್ವತ್ಥ್ಕಾ ರ್ಯಕ್ರಮ ನಿರ್ವಹಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next