ಹೊಸದಿಲ್ಲಿ : ಕೇಂದ್ರ ಸರಕಾರ ಒಬಿಸಿ ವರ್ಗದ ‘ಕೆನೆ ಪದರ’ ದ ಆರ್ಥಿಕ ಮಿತಿಯನ್ನು 2 ಲಕ್ಷ ರೂ. ಹೆಚ್ಚಿಸಿದೆ. ಜತೆಗೆ ಒಬಿಸಿ ಒಳಗೆ ಉಪ ವರ್ಗಗಳನ್ನು ರಚಿಸುವುದಕ್ಕಾಗಿ ಆಯೋಗ ರಚಿಸುವುದಾಗಿ ಹೇಳಿದೆ.
ಈ ಕ್ರಮದಿಂದ ಮೀಸಲಾತಿ ಲಾಭ ವಿತರಣೆಯು ಹೆಚ್ಚು ಸಮಾನವಾಗಿ ಆಗುವುದೆಂಬ ವಿಶ್ವಾಸವನ್ನು ಸರಕಾರ ವ್ಯಕ್ತಪಡಿಸಿದೆ.
ಇದೇ ವೇಳೆ ಸರಕಾರ “ಮೀಸಲಾತಿಯ ಯಾವುದೇ ಪರಾಮರ್ಶೆ ಮಾಡುವುದಿಲ್ಲ’ ಎಂಬುದನ್ನು ಒತ್ತಿ ಹೇಳಿದೆ.
ವಾರ್ಷಿಕ ಎಂಟು ಲಕ್ಷ ರೂ. ಆದಾಯವಿರುವ ಒಬಿಸಿ ಕುಟುಂಬಗಳನ್ನು ಇನ್ನು ಮುಂದೆ ‘ಕೆನೆ ಪದರ ವೆಂದು ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಪ್ರಕಟಿಸಿದರು.
ಒಬಿಸಿ ಕುಟುಂಬಗಳು ಕೆನೆ ಪದರ ಎನಿಸುವುದಕ್ಕೆ ಈ ವರೆಗಿನ ಆದಾಯ ಮಿತಿ ಆರು ಲಕ್ಷ ರೂ. ಇತ್ತು.