Advertisement

ಮತ್ತೆ ಹೊಸ ಗೆಟಪ್‌ನಲ್ಲಿ ಕ್ರೇಜಿಸ್ಟಾರ್‌

10:02 AM Oct 22, 2019 | Lakshmi GovindaRaju |

ಕ್ರೇಜಿಸ್ಟಾರ್‌ ರವಿಚಂದ್ರನ್‌ ತಮ್ಮ ಸಿನಿಮಾಗಳಲ್ಲಿ ಹೊಸ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳೋದು ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ರವಿಚಂದ್ರನ್‌ ತಮ್ಮ ಹೊಸ ಸಿನಿಮಾ “ರವಿ ಬೋಪಣ್ಣ’ ಚಿತ್ರಕ್ಕಾಗಿ ಬಿಳಿ ಗಡ್ಡ ಬಿಟ್ಟು, ತುಂಬಾ ವಯಸ್ಸಾದ ಗೆಟಪ್‌ನಲ್ಲಿದ್ದರು.

Advertisement

ಆ ಚಿತ್ರದ ಚಿತ್ರೀಕರಣ ಸತತವಾಗಿ ನಡೆಯುತ್ತಿದ್ದು, ಬೆಂಗಳೂರು, ಮಡಿಕೇರಿ ಸುತ್ತಮುತ್ತ ನಡೆದಿದೆ. ಈಗ ರವಿಚಂದ್ರನ್‌ ಮತ್ತೆ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗಡ್ಡ ತೆಗೆದು, ಸಖತ್‌ ಸ್ಟೈಲಿಶ್‌ ಆಗಿ ಮೀಸೆ ಬಿಟ್ಟು, ಮತ್ತೊಂದು ಹೊಸ ಗೆಟಪ್‌ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ “ಆಯುಷ್ಮಾನ್‌ ಭವ’ ಚಿತ್ರದ ಆಡಿಯೋ ಬಿಡುಗಡೆಗೆ ಹೊಸ ಗೆಟಪ್‌ನಲ್ಲಿ ಎಂಟ್ರಿಕೊಟ್ಟಿದ್ದರು.

ಅಂದಹಾಗೆ, “ರವಿ ಬೋಪಣ್ಣ’ ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್‌ ಇಲ್ಲಿ ಸೈಬರ್‌ ಸೆಲ್‌ನ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಸ್ನೇಹಕ್ಕೂ ಹೆಚ್ಚಿನ ಮಹತ್ವವಿದೆಯಂತೆ. ಕಾವ್ಯಾ ಶೆಟ್ಟಿ “ರವಿ ಬೋಪಣ್ಣ’ದ ನಾಯಕಿ. ಈ ಚಿತ್ರದಲ್ಲಿ ನಟ ಸುದೀಪ್‌ ಕೂಡಾ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next