Advertisement

Crazy Star Ravichandran: ನಾನು ಸಿನಿಮಾ ನಿರ್ದೇಶಿಸೋದು ದಾಖಲೆಗೆ, ಹೊಸತನಕ್ಕೆ..

12:39 PM Sep 13, 2023 | Team Udayavani |

“ಮುಂದಿನ ವರ್ಷ ನನ್ನ ರುದ್ರ ತಾಂಡವ ಶುರು…’ – ಹೀಗೆ ಹೇಳಿ ನಕ್ಕರು ರವಿಚಂದ್ರನ್‌. ಸಾಲು ಸಾಲು ಸಿನಿಮಾಗಳ ನಟನೆಯಲ್ಲಿ ಬಿಝಿಯಾಗಿರುವ ರವಿಚಂದ್ರನ್‌ ಮುಂದಿನ ವರ್ಷ ಅವರದ್ದೇ ನಿರ್ದೇಶನದ ಸಿನಿಮಾ ಮಾಡಲಿದ್ದಾರೆ. ಕನ್ನಡ ಚಿತ್ರರಂಗದ ಕನಸುಗಾರನಾಗಿರುವ ರವಿಚಂದ್ರನ್‌ ಮುಂದಿನ ವರ್ಷ ಮಾಡುವ ಸಿನಿಮಾ ಎಲ್ಲರ ಗಮನ ಸೆಳೆಯಲಿದೆಯಂತೆ. ಅದೇ ಕಾರಣದಿಂದ ಅವರು ಹೇಳಿದ್ದು ಮುಂದಿನ ವರ್ಷ ರುದ್ರ ತಾಂಡವ…

Advertisement

ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡುವ ರವಿಚಂದ್ರನ್‌, “ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸೋದು ನನ್ನ ಜೀವನಕ್ಕೆ, ಸಮಸ್ಯೆಗಳಿಗೆ, ಬದುಕಿಗೆ, ಪಾಕೆಟ್‌ ಮನಿಗೆ…ಆ ಚಿತ್ರಗಳ ಒಳ್ಳೆಯದು, ಕೆಟ್ಟದ್ದು ಆ ಸಿನಿಮಾಗಳಿಗೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು. ನಾನು ನನ್ನ ಕೆಲಸವನ್ನು ಮಾಡಿಕೊಡುತ್ತೇನೆ.. ಆದರೆ, ನಾನು ಸಿನಿಮಾ ನಿರ್ದೇಶಿಸೋದು ದಾಖಲೆಗೆ, ಹೊಸತನಕ್ಕೆ…’ ಹೀಗೆ ಹೇಳುವ ಮೂಲಕ ಮುಂದಿನ ವರ್ಷ ಹೊಸದನ್ನು ನೀಡುವ ಸುಳಿವು ಕೊಡುತ್ತಾರೆ ಕ್ರೇಜಿಸ್ಟಾರ್‌.

ಸದ್ಯ ರವಿಚಂದ್ರನ್‌ “ದಿ ಜಡ್ಜ್ಮೆಂಟ್‌’, “ಕೆಡಿ’, “ಗೌರಿ ಶಂಕರ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next