Advertisement

ಕ್ರೇಜಿ ಬೈಕ್‌ ಹೋಂಡಾ CB300R

01:25 PM Jun 21, 2019 | Sriram |

ನಗರ ಪ್ರವಾಸಕ್ಕೂ ಹೊಂದುವಂಥ, ದೂರ ಪ್ರಯಾಣಕ್ಕೂ ಸೈ ಅನ್ನುವಂಥ ಬೈಕ್‌ ಬೇಕು ಅನ್ನುವವರು ಈ ಬೈಕ್‌ ಖರೀದಿಸಬಹುದು. ಹೊಸ ಮಾದರಿಯ ಫ್ರೇಮ್ ನ ಅಳವಡಿಕೆಯಿಂದಾಗಿ ಈ ಬೈಕ್‌ ಹ್ಯಾಂಡ್ಲಿಂಗ್‌ ಅತ್ಯುತ್ತಮವಾಗಿದೆ.

Advertisement

ಭಾರತೀಯರಲ್ಲಿ ಬೈಕ್‌ಕ್ರೇಜ್‌ ಈಗ ಮೊದಲಿಗಿಂತ ಹೆಚ್ಚಾಗಿದೆ. ಇದೇ ಕಾರಣಕ್ಕೆ, ದೊಡ್ಡ ಪ್ರಮಾಣದಲ್ಲಿ ಬೈಕ್‌ಗಳೂ ಮಾರಾಟವಾಗುತ್ತಿವೆ. ಅಧಿಕ ಶಕ್ತಿ-ಸಾಮರ್ಥ್ಯದ ಬೈಕ್‌ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ 250-300 ಸಿಸಿ ಬೈಕ್‌ಗಳಿಗೆ ಬೇಡಿಕೆ ಕುದುರಿರುವುದೇ ಈ ಮಾತಿಗೆ ಉದಾಹರಣೆ. ಭಾರತದ ಅತಿದೊಡ್ಡ ದ್ವಿಚಕ್ರ ತಯಾರಿಕಾ ಕಂಪೆನಿಯಾಗಿರುವ ಜಪಾನ್‌ ಮೂಲದ ಹೋಂಡಾ ಈ ಸೂಕ್ಷ್ಮವನ್ನು ಮನಗಂಡಿದ್ದು, ಈ ನಿಟ್ಟಿನಲ್ಲಿ ಹೊಸ ಸಿಬಿ 300 ಆರ್‌ ಅನ್ನು ಬಿಡುಗಡೆ ಮಾಡಿದೆ.

ಈವರೆಗೆ ಮಾರುಕಟ್ಟೆಯಲ್ಲಿ ಹೋಂಡಾದ ಸಿಬಿಆರ್‌ 250 ಆರ್‌ ಸದ್ದು ಮಾಡಿತ್ತು. ಇದೊಂದು ಫ‌ುಲ್‌ಫೇರಿಂಗ್‌ ರೇಸಿಂಗ್‌ ಮಾದರಿ ಬೈಕ್‌ಆಗಿದ್ದು ಒಂದು ವರ್ಗವನ್ನು ಆರ್ಕಷಿಸಿತ್ತು. ಇದರ ಹೊಸ ಆವೃತ್ತಿಯನ್ನು ಹೋಂಡಾ ಇತ್ತೀಚೆಗೆ ಬಿಡುಗಡೆ ಮಾಡುವುದರೊಂದಿಗೆ ಹೊಸ ಸಿಬಿ 300 ಆರ್‌ ನೇಕೆಡ್‌ ಮಾದರಿಯನ್ನೂ ಬಿಡುಗಡೆ ಮಾಡಿದೆ.

ಹೇಗಿದೆ ವಿನ್ಯಾಸ?
ಪರಿಪೂರ್ಣ ಜಪಾನ್‌ ತಂತ್ರಜ್ಞಾನದ ಈ ಬೈಕ್‌ ಮೊದಲ ನೋಟಕ್ಕೇ ಆಕರ್ಷಕವಾಗಿ ಕಾಣುತ್ತದೆ. ಹಿಂದೆ ಮತ್ತು ಮುಂಭಾಗ ಆಕರ್ಷಕ ಎಲ್‌ಇಡಿ ಲೈಟುಗಳು, ಡಿಜಿಟಲ್‌ ಮೀಟರ್‌, ಸೆಳೆಯುವ ಇಂಡಿಕೇಟರ್‌ ಲೈಟ್‌ಗಳಿವೆ. ಅತ್ಯುತ್ತಮ ಟ್ಯಾಂಕ್‌ ವಿನ್ಯಾಸ, ಕೂರಲು ಆರಾಮದಾಯಕ ಸೀಟುಗಳು ಇದರ ಪ್ಲಸ್‌ ಪಾಯಿಂಟ್‌. ಇದರ ವಿನ್ಯಾಸ ಹೋಂಡಾದ ಸಿಬಿ 1000 ಆರ್‌ ಬೈಕ್‌ನ ವಿನ್ಯಾಸವನ್ನು ಹೋಲುವಂತೆ ಇದೆ. ಯಾವುದೇ ರೀತಿಯ ಹೆಚ್ಚುವರಿ ಸ್ಪೇರ್‌ಗಳು, ನೋಡಲು ಕೆಟ್ಟದೆನಿಸುವ ಸ್ಟಿಕ್ಕರ್‌ಗಳು ಇಲ್ಲದೆ ಅತಿ ಸಿಂಪಲ್‌ ಮತ್ತು ಆಕರ್ಷಕವಾಗಿದೆ. ತುಸು ದೊಡ್ಡದಾದ ಸೈಲೆನ್ಸರ್‌ ಇದ್ದು, ಹಿಂಭಾಗ ಸ್ಟೀಲ್‌ ಕವರ್‌ ಅನ್ನು ಹೊಂದಿದೆ. ಮುಂಭಾಗದಲ್ಲಿ ಆಕರ್ಷಕವಾದ ಗ್ರ್ಯಾಬ್‌ರೇಲ್‌ ಮತ್ತು ಮುಂಭಾಗ ನ್ಪೋರ್ಟಿ ಹ್ಯಾಂಡಲ್‌ ಬಾರ್‌ಇದೆ.

ಸೌಲಭ್ಯಗಳು
ಸಿಬಿ 300 ಆರ್‌ ಸಾಕಷ್ಟು ಸುಧಾರಣೆ ಕಂಡ ಬೈಕ್‌ ಆಗಿದೆ. 250 ಆರ್‌ ಫ‌ುಲ್‌ಫೇರಿಂಗ್‌ ಬೈಕ್‌ ಬಿಡುಗಡೆ ಮಾಡಿದ್ದಾಗ ಭಾರತದಲ್ಲಿ ಇಂತಹುದೇ ನೇಕೆಡ್‌ ಬೈಕ್‌ ಬೇಕು ಎಂಬ ನಿರೀಕ್ಷೆಗಳಿದ್ದವು. ಕೆಟಿಎಂ 390 ಮಾರುಕಟ್ಟೆಗೆ ಬಂದ ಬಳಿಕ ಹೋಂಡಾದಿಂದಲೂ 300 ಸಿಸಿ ಹೆಚ್ಚು ಸಾಮರ್ಥ್ಯದ ಬೈಕ್‌ ನೀಡುವ ನಿರೀಕ್ಷೆ ಇತ್ತು. ಈಗ ತಡವಾಗಿಯಾದರೂ ಹೋಂಡಾ ಅದನ್ನು ಬಿಡುಗಡೆ ಮಾಡಿದೆ. ಹೋಂಡಾದ ಅತ್ಯಂತ ಪರಿಣಾಮಕಾರಿ ಎಂಜಿನ್‌, ಯಾವುದೇ ಹೆಚ್ಚುವರಿ ಶಬ್ದ ಕೇಳಿಸದಷ್ಟು ಉತ್ತಮವಾಗಿದೆ. ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. ಎರಡೂ ಕಡೆ 296 ಮತ್ತು 220 ಎಂ.ಎಂ.ನ ಡಿಸ್ಕ್ ಹೊಂದಿದೆ. 41 ಎಂ.ಎಂ.ನ ಅಪ್‌ಸೆçಡ್‌ ಆಂಡ್‌ ಡೌನ್‌ಟೆಲಿ ಸ್ಕೋಪಿಕ್‌ ಶಾಕ್ಸ್‌ಅಬಾರ್ಬರ್‌ ಮತ್ತು ಹಿಂಭಾಗ ಸುಧಾರಿತ ಮೋನೋಶಾಕ್‌ ಸಸ್ಪೆನÒನ್‌ ಹೊಂದಿದೆ. ಡಿಜಿಟಲ್‌ ಮೀಟರ್‌ ಕೂಡ ಹಲವು ಸೌಕರ್ಯಗಳನ್ನು ಹೊಂದಿದೆ. ಹೆಚ್ಚು ಅಗಲವಾದ 17 ಇಂಚಿನ 150/60 ಹಿಂಭಾಗ ಮತ್ತು 110/70 ಮಾದರಿಯ ಮುಂಭಾಗದ ಟಯರ್‌ ಹೊಂದಿದೆ. ಇದು ಹೆಚ್ಚಿನ ಗ್ರಿಪ್‌ ಕಾಯ್ದುಕೊಳ್ಳಲು ನೆರವಾಗುತ್ತದೆ. ಸವಾರಿಗೆ ಬೈಕ್‌ ಅನುಕೂಲಕರವಾಗಿದ್ದು, ಹೊಸ ಮಾದರಿಯ ಫ್ರೇಮ್ ನಿಂದಾಗಿ ಹ್ಯಾಂಡ್ಲಿಂಗ್‌ ಅತ್ಯುತ್ತಮವಾಗಿದೆ.

Advertisement

ಎಂಜಿನ್‌ ಸಾಮರ್ಥ್ಯ
ಹೋಂಡಾ ಸಿಬಿ 300 ಆರ್‌, ಸುಧಾರಿತ ಲಿಕ್ವಿಡ್‌ಕೂಲ್ಡ್‌ ಎಂಜಿನ್‌ಅನ್ನು ಇದರಲ್ಲಿ ಪರಿಚಯಿಸಿದೆ. 286.01 ಸಿಸಿಯ 4 ಸ್ಟ್ರೋಕ್‌ ಎಸ್‌ಐ ಎಂಜಿನ್‌ ಇದರಲ್ಲಿದ್ದು, 31 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರೊಂದಿಗೆ 6500 ಆರ್‌ಪಿಎಂನಲ್ಲಿ ಗರಿಷ್ಠ 27.4ಎನ್‌ಎಂ ಟಾರ್ಕ್‌ಅನ್ನು ಉತ್ಪಾದನೆ ಮಾಡುವುದು ಇದರ ಹೆಚ್ಚುಗಾರಿಕೆ. ಫ‌ುÂಯಲ್‌ ಇಂಜೆಕ್ಷನ್‌ ವ್ಯವಸ್ಥೆ ಇದರಲ್ಲಿದೆ. ಒಟ್ಟು 6 ಗಿಯರ್‌ ಹೊಂದಿದೆ. 1344 ಎಂ.ಎಂ. ಹೀಲ್‌ಬೇಸ್‌, 151 ಎಂ.ಎಂ. ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿದೆ. ಒಟ್ಟು 147 ಕೆ.ಜಿ. ಭಾರವಿದ್ದು, 10 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಟ್ಯಾಂಕ್‌ಇದೆ.

ಖರೀದಿಸಬಹುದೇ?
ಛಂಗನೆ ನೆಗೆಯುವ ಶಕ್ತಿಶಾಲಿ ಬೈಕ್‌ ಬೇಕು. ತುಸುದೂರ ಪ್ರವಾಸ ಮಾಡುವಂತೆ ಇರಬೇಕು, ನಗರ ಸವಾರಿಗೂ ಇರಬೇಕು ಎನ್ನುವವರು ಈ ಬೈಕ್‌ ಖರೀದಿಸಬಹುದು. ಪೆಟ್ರೋಲ್‌ ಟ್ಯಾಂಕ್‌ ತುಸು ಸಣ್ಣದಿರುವುದು ಇದರ ಹಿನ್ನಡೆ. ಹಾಗೆಯೇ ಹಿಂದಿನ ಸೀಟ್‌ ಉದ್ದವಾಗಿಲ್ಲ. ಹೋಂಡಾ ಇದನ್ನು ಸಿಕೆಡಿ ಮೂಲಕ (ವಿದೇಶದಿಂದ ಬಿಡಿ ಭಾಗಗಳನ್ನು ತಂದು ಜೋಡಿಸುತ್ತದೆ) ಭಾರತಕ್ಕೆ ತರುತ್ತದೆ. ಇದರಿಂದ ಬೆಲೆ ತುಸು ಹೆಚ್ಚಿದೆ. ಆದರೂ ಹೋಂಡಾ ಮಾರುಕಟ್ಟೆಯಲ್ಲಿ ಸಾಕಷ್ಟು ಅಧ್ಯಯನ ಮಾಡಿ, ಉತ್ತಮ ಬೆಲೆಗೆ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ 2.41 ಲಕ್ಷ ರೂ. ಇದೆ.

ತಾಂತ್ರಿಕ ವಿವರಗಳು
286.01 ಸಿಸಿ ಎಂಜಿನ್‌
ಲಿಕ್ವಿಡ್‌ಕೂಲ್ಡ್‌, ಫ‌ುÂಯೆಲ್‌ಇಂಜೆಕ್ಷನ್‌
6 ಗಿಯರ್‌
31 ಎಚ್‌ಪಿ, 27.4 ಎನ್‌.ಎಂ. ಟಾರ್ಕ್‌
1344 ಎಂ.ಎಂ. ವೀಲ್‌ ಬೇಸ್‌
151 ಎಂ.ಎಂ. ಗ್ರೌಂಡ್‌ಕ್ಲಿಯರೆನ್ಸ್‌,
10 ಲೀ. ಇಂಧನ ಟ್ಯಾಂಕ್‌ ಸಾಮರ್ಥ್ಯ
ಎಕ್ಸ್‌ ಷೋರೂಂ ಬೆಲೆ:2.41 ಲಕ್ಷ ರೂ.

-ಈಶ

Advertisement

Udayavani is now on Telegram. Click here to join our channel and stay updated with the latest news.

Next