Advertisement
ಈ ಕೀಟ ಲೋಕವೇ ಅದ್ಭುತ. ಕಣ್ಣಿಗೆ ಮ್ಯಾಕ್ರೊ ಲೆನ್ಸ್ ರೀತಿಯಲ್ಲಿ ಚಿಕ್ಕವೆಲ್ಲ ದೊಡ್ಡವಾಗಿ ಕಾಣುವ ಶಕ್ತಿಯಿದ್ದರೆ, ಇನ್ನೂ ಎಂತೆಂಥ ಅದ್ಭುತಗಳು ಕಣ್ಣಿಗೆ ಕಾಣಿಸುತ್ತಿದ್ದವೋ ಏನೋ ? ಆದರೆ ಕ್ಯಾಮರಾ ತಂತ್ರಜಾnನ ಅಂತಹ ಅವಕಾಶವನ್ನೂ ಒದಗಿಸಿದೆ. ಆ ಮಾತು ಬೇರೆ. ನಾನು ಹೇಳುತ್ತಿರುವುದು, ಪುಟ್ಟ ಕೀಟಗಳ ಲೋಕದಲ್ಲಿ ಏನೆಲ್ಲ ನಡೆಯಬಹುದು ಎಂಬ ಬಗ್ಗೆ.
Related Articles
Advertisement
ಈ ಕುರಿತು ಮಾಹಿತಿ ಕಲೆಹಾಕಿದಾಗ, ಇದನ್ನು ಬ್ಯಾಗ್ ವರ್ಮ್ (ಸಂಚಿ ಹುಳು ಎಂದು ನಾನಿಟ್ಟ ಹೆಸರು) ಎಂದು ಕೀಟಲೋಕದ ತಜ್ಞರು ಗುರುತಿಸುತ್ತಾರೆ. ಪ್ಸೆ„ಕಿಡಾ ಗುಂಪಿನ ಇದನ್ನು ಚಿಟ್ಟೆ, ಪತಂಗಗಳ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಚಿಟ್ಟೆ, ಪತಂಗಗಳ ಮೊಟ್ಟೆಗಳು ಲಾರ್ವಾ ಹಂತದಲ್ಲಿದ್ದಾಗ ತಮ್ಮ ಮೈಸುತ್ತ ಗೂಡನ್ನು ನಿರ್ಮಿಸಿಕೊಳ್ಳುವಂತೆಯೇ, ಈ ಪ್ರಭೇದದ ಹುಳುಗಳು ತಮ್ಮ ಮೈಸುತ್ತ ಪುಟ್ಟ ಚೀಲವನ್ನು ನೇಯ್ದುಕೊಳ್ಳುತ್ತವೆ. ಇದಕ್ಕೆ ಇಂಥದೇ ಸಾಮಗ್ರಿ ಬೇಕೆಂದಿಲ್ಲ. ಕಡ್ಡಿ, ಮಣ್ಣು, ಉಸುಕು, ಒಣಗಿದ ಎಲೆ, ಇರುವೆಯಂತಹ ಜೀವಿಗಳ ತುಣುಕುಗಳು ಏನು ಬೇಕಾದರೂ ನಡೆದೀತು.
ತಮ್ಮ ರೇಷ್ಮೆಯಂಥ ನಯವಾದ ಜೊಲ್ಲಿನಿಂದ ಗೂಡನ್ನು ಹೆಣೆದುಕೊಂಡು ಜೀವನಪೂರ್ತಿ ಅದರಲ್ಲೇ ಜೀವಿಸುತ್ತವೆ. ಇವುಗಳ ಗೂಡುಗಳು 1 ಸೆಂ.ಮೀ.ನಿಂದ 15 ಸೆಂ.ಮೀ ಉದ್ದವಿರುತ್ತವೆ. ಹುಳುವಿನ ಗಾತ್ರ ಹೆಚ್ಚಾದಂತೆಲ್ಲ ಗೂಡು ಅಥವಾ ಚೀಲವನ್ನು ದೊಡ್ಡದು ಮಾಡಿಕೊಳ್ಳುತ್ತದೆ ಎಂಬ ವಿವರಗಳೆಲ್ಲ ತಿಳಿದು ಬಂದವು. ಇವುಗಳ ಆಹಾರ ಗಿಡದ ಎಲೆಗಳೇ. ಹೀಗಾಗಿ ಗಿಡದ ಕಾಂಡಕ್ಕೋ, ಎಲೆಗೋ ಜೋತುಬಿದ್ದಿರುತ್ತವೆ ಅಥವಾ ಗೋಡೆ, ಬಂಡೆಗಳಿಗೂ ಜೋತುಬಿದ್ದಿರುವುದನ್ನು ಕಾಣಬಹುದು. ಥಟ್ಟನೆ ನೋಡಿದಾಗ ಏನೋ ಹೊಲಸು ಎನಿಸಬಹುದಾದರೂ, ಪಕ್ಷಿ$ಗಳಿಂದ ರಕ್ಷಣೆ ಪಡೆಯಲೂ ಇದು ಸುಲಭ ಉಪಾಯವಾಗಿದೆ. ಹೆಣ್ಣು ಹುಳು ಅದೇ ಚೀಲದಲ್ಲಿಯೇ ಒಂದು ಸಲಕ್ಕೆ 500ರಿಂದ 1,600ರವರೆಗೂ ಮೊಟ್ಟೆಗಳನ್ನಿಡುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹುಳುವಿನೊಂದಿಗೆ ಕೂಡಿದಾಗ ಹೆಣ್ಣು ಮೊಟ್ಟೆಯಿಟ್ಟಿದೆ. ಕೆಲವೊಂದಕ್ಕೆ ಗಂಡು ಹುಳುವನ್ನು ಕೂಡದೆಯೂ ಮೊಟ್ಟೆಗಳನ್ನಿಡಬಹುದು. ಬ್ಯಾಗ್ ವಮ್ಸ್ì ಅಥವಾ ಕನ್ನಡದ ಸಂಚಿಹುಳುಗಳಲ್ಲಿ ಇಂಥದೇ ರೀತಿಯವಾಗಿರಬೇಕೆಂದಿಲ್ಲ, ಒಣಗಿದ ಎಲೆಗಳಿಂದಲೂ ಅವು ಗೂಡನ್ನು ನಿರ್ಮಿಸಿಕೊಳ್ಳಬಹುದು.
ಏನೆಂದರೂ ಹುಳುಗಳ ಲೋಕವೇ ಅದ್ಭುತ ಅಲ್ಲವೆ? ನಾನೂ ಒಂದು ಸಂಚಿಹುಳುವಾಗಿ ನನ್ನ ಮನೆಯ ಭಾರವನ್ನೆಲ್ಲ ಹೊತ್ತು ಸಾಗುವ ಕಲ್ಪನೆ ಮಾಡಿಕೊಂಡಾಗ ಅಬ್ಟಾ ! ಎನ್ನಿಸಿತು. ಮನುಷ್ಯರು ಮನೆ ಕಟ್ಟಲು ಸಾಲದ ಭಾರವನ್ನು ಹೊತ್ತಾರೆ, ಈ ಪುಟ್ಟ ಹುಳುಗಳು ತಾವು ಕಟ್ಟಿದ ಮನೆಯನ್ನು ತಾವೇ ಹೊತ್ತು ಓಡಾಡುವುದು ವಿಚಿತ್ರವಾದರೂ ಸತ್ಯ !
ಸಿದ್ಧರಾಮ ಹಿರೇಮಠ