Advertisement

ಭರಾಟೆ ಕ್ವಿಡ್‌: ರಿನಾಲ್ಟ್ ಕ್ವಿಡ್‌ ಫೇಸ್‌ಲಿಫ್ಟ್ ಮಾದರಿಯಲ್ಲಿ…

09:55 AM Nov 12, 2019 | mahesh |

ಎಸ್‌.ಯು.ವಿ ಲುಕ್‌ನಲ್ಲೇ ಮಾರ್ಕೆಟ್‌ಗೆ ಬಂದಿದ್ದ ಕಾರು ರಿನಾಲ್ಟ್ ಕ್ವಿಡ್‌. ಈಗಾಗಲೇ ಮಾರ್ಕೆಟ್‌ನಲ್ಲಿ ಚಮತ್ಕಾರ ಸೃಷ್ಟಿಸಿರುವ ಈ ಕಾರು, ಫೇಸ್‌ಲಿಫ್ಟ್(ವಿನ್ಯಾಸ ಬದಲಾವಣೆ) ಮಾದರಿಯಲ್ಲಿ ಮತ್ತೂಮ್ಮೆ ಬರುತ್ತಿದೆ. ಇನ್ನಷ್ಟು ಡಿಜಿಟಲ್‌ ಸವಲತ್ತುಗಳನ್ನು ಅಳವಡಿಸಿಕೊಂಡು ಬಂದಿರುವ ಈ ಕಾರು, ಹೊಸ ಲುಕ್‌ ಜತೆಗೆ ಕಂಗೊಳಿಸುತ್ತಿದೆ.

Advertisement

ತೈಲ ಸಾಮರ್ಥ್ಯ- 28 ಲೀಟರ್‌
ತೂಕ- 705- 755 ಕೆ.ಜಿ
ಗ್ರೌಂಡ್‌ ಕ್ಲಿಯರೆನ್ಸ್- 184 ಎಂ.ಎಂ
ವೀಲ್‌ ಬೇಸ್‌- 2422 ಎಂ.ಎಂ

ಸದ್ಯ ಮಾರುಕಟ್ಟೆಯಲ್ಲಿ ಇರುವ ಕಾರುಗಳು, 54ಎಚ್‌.ಪಿ, 0.8 ಲೀಟರ್‌ ಪೆಟ್ರೋಲ್‌ ಎಂಜಿನ್‌ ಮತ್ತು ಎಎಂಟಿ ಆಟೋಮ್ಯಾಟಿಕ್‌ 68ಎಚ್‌.ಪಿ, 1 ಲೀಟರ್‌ ಪೆಟ್ರೋಲ್‌ ಎಂಜಿನ್‌ ಸಾಮರ್ಥ್ಯ ಹೊಂದಿವೆ. ಆದರೆ, ಈಗ ಫೇಸ್‌ಲಿಫr…ನಲ್ಲಿ ಬರುತ್ತಿರುವ ಕಾರು ಬಿಎಸ್‌4ನಲ್ಲೇ ಇದ್ದು, ಬಿಎಸ್‌6ಗೆ ಮುಂದಿನ ಏಪ್ರಿಲ್‌ಗೆ ಬದಲಾಗಲಿದೆ.

ಇನ್ನಷ್ಟು ಡಿಜಿಟಲ್‌ ಆಗಿದೆ
ಸದ್ಯ ಫೇಸ್‌ಲಿಫ್ಟ್ ನಲ್ಲಿ ಬರುತ್ತಿರುವ ಕಾರು, ಹೆಚ್ಚು ಸ್ಮಾರ್ಟ್‌. ಅಂದರೆ ಡಿಜಿಟಲ್‌ ಗುಣಗಳನ್ನು ಅಳವಡಿಸಿಕೊಂಡು ಬರುತ್ತಿದೆ. ಹೊಸ ಪೀಳಿಗೆಯ ಸ್ಪ್ಲಿಟ್‌ ಹೆಡ್‌ ಲ್ಯಾಂಪ್‌, ಮೇಲೆ ಎಲ…ಇಡಿ ಡಿಆರ್‌ಎಲ್‌ ಗಳು, ಪ್ರಮುಖ ಹೆಡ್‌ ಲ್ಯಾಂಪ್‌ ಅನ್ನು ಕೊಂಚ ಕೆಳಗೆ ಅಳವಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಡಿಆರ್‌ಎಲ್‌ ಲುಕ್‌ ಎಲ್ಲಾ ಮಾದರಿಯ ಕಾರಿನಲ್ಲೂ ಇರಲಿದೆ.

ಇನ್ನು ಹೊಸ ಮಾದರಿಯಲ್ಲಿ ಕಾರಿನ ವೀಲ್‌ಗ‌ಳನ್ನು 13 ಇಂಚಿನಿಂದ 14 ಇಂಚಿಗೆ ಎತ್ತರಿಸಲಾಗಿದೆ. ಹಾಗೆಯೇ ಗ್ರೌಂಡ್‌ ಕ್ಲಿಯರೆನ್ಸ್ ಕೂಡ 4 ಎಂ.ಎಂ ಎತ್ತರಿಸಿ 184 ಎಂ.ಎಂಗಳಷ್ಟು ಮಾಡಲಾಗಿದೆ. ಕ್ವಿಡ್‌ ಕ್ಲೈಂಬರ್‌ನಲ್ಲಿ ಗ್ರೇ ಪ್ಲಾಸ್ಟಿಕ್‌ ವೀಲ್‌ ಕವರ್‌ಗಳನ್ನು ಅಳವಡಿಸಲಾಗಿದೆ. ಉಳಿದ ಮಾದರಿಗಳಲ್ಲಿ ಸರಳವಾದ ವೀಲ್‌ ಕವರ್‌ ಸಿಗಲಿದೆ.

Advertisement

ಉಳಿದಂತೆ 2019ರ ಫೇಸ್‌ಲಿಫ್ಟ್ ಕಾರು 52 ಎಂ.ಎಂನಷ್ಟು ಉದ್ದವಿರಲಿದೆ. ಹಾಗೆಯೇ ಹಿಂದಿನ ಕಾರಿಗಿಂತ ಇನ್ನೂ 35-40 ಕೆ.ಜಿ ಹೆಚ್ಚು ಭಾರವಿರಲಿದೆ. ಇದನ್ನು ಇತ್ತೀಚಿನ ಸೇಫ್ಟಿ ಮತ್ತು ಕ್ರಾಶ್‌ ಟೆನ್ಸ್ ನ ಮಾನದಂಡಗಳಂತೆ ಅಳವಡಿಸಿಕೊಳ್ಳಲಾಗಿದೆ.

ಒಳಾಂಗಣ ವಿನ್ಯಾಸ
ಫೇಸ್‌ ಲಿಫ್ಟ್ ಕಾರಿನಲ್ಲಿ ಅತ್ಯಂತ ಪ್ರಮುಖವಾದ ಬದಲಾವಣೆ ಒಳಾಂಗಣದಲ್ಲಿ ಆಗಿದೆ. ಹೊಸ ಸ್ಟಿಯರಿಂಗ್‌ ವೀಲ…, ಅಗಲವಾದ ಟಚ್‌ಸ್ಕ್ರೀನ್‌ನ ಇನ್ಫೋಟೈನ್‌ಮೆಂಟ್‌ ಸಿಸ್ಟಮ… ಒಳಾಂಗಣದಲ್ಲಿ ಆಗಿರುವ ಬದಲಾವಣೆಯನ್ನು ಸೂಚಿಸುತ್ತದೆ. ಹಿಂದಿನ ಇನ್ಫೋಟೈನ್‌ ಸಿಸ್ಟಮ್‌ನಲ್ಲಿ ರಿಫ್ಲೆಕ್ಷನ್‌ ಬರುತ್ತದೆ ಎಂಬ ಮಾತುಗಳಿದ್ದವು. ಈ ಪ್ರತಿಫ‌ಲನ ಬರದಂತೆ ಹೊಸ ಮಾದರಿಯ ಮ್ಯೂಸಿಕ್‌ ಸಿಸ್ಟಮ್‌ಅನ್ನು ರೂಪಿಸಲಾಗಿದೆ. ಅಂದರೆ, 8 ಎಂಚಿನ ಅಗಲದ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಇದೆ. ಇದು ಆ್ಯಪಲ್‌ ಕಾರ್‌ ಪ್ಲೇ ಮತ್ತು ಆಂಡ್ರಾಯಯ್ಡ್ ಆಟೋಗೆ ಸಪೋರ್ಟ್‌ ಮಾಡುತ್ತದೆ. ಹಾಗೆಯೇ ರಿವರ್ಸ್‌ ಕ್ಯಾಮೆರಾಗೂ ಡಿಸ್‌ಪ್ಲೇ ಆಗಿಯೂ ಕೆಲಸ ಮಾಡುತ್ತದೆ. ಫ್ರಂಟ್‌ ಪ್ಯಾನಲ್‌ ಕೂಡ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ.

ಎಕ್ಸ್‌ಟ್ರಾ ಸವಲತ್ತುಗಳು
ಇನ್ನು ಸ್ಟೋರೇಜ್‌ ವಿಷಯದಲ್ಲೂ ಸ್ಮಾರ್ಟ್‌ ಆಗಿಯೇ ವಿನ್ಯಾಸಗೊಳಿಸಲಾಗಿದೆ. ಯುಎಸ್‌ಬಿ ಸ್ಲಾಟ್‌ ಮತ್ತು ಚಾರ್ಜರ್‌ ಸ್ಲಾಟ್‌ಗಳನ್ನು ಇನ್ಫೋಟೈನ್‌ಮೆಂಟ್‌ ಕನ್ಸೋಲ್‌ನ ಕೆಳಭಾಗದಲ್ಲೇ ನೀಡಲಾಗಿದೆ. ಎ.ಎಂ.ಟಿ ವರ್ಷನ್‌ನ ಗೇರ್‌ ಬಾಕ್ಸ್ ಶಿಫ್ಟ್ ಬಟನ್‌ ಅನ್ನು ಮಧ್ಯಭಾಗದಲ್ಲಿ ನೀಡಲಾಗಿದೆ. ಕ್ಲೈಂಬರ್‌ ವರ್ಷನ್‌ನಲ್ಲಿ ಪವರ್‌ ವಿಂಡೋ ಫೀಚರ್‌ ನೀಡಲಾಗಿದೆ. ಒಂದಷ್ಟು ದೊಡ್ಡದು ಎನ್ನಬಹುದಾದ ಗ್ಲೋವ್‌ ಬಾಕ್ಸ್ ಅನ್ನೂ ನೀಡಲಾಗಿದೆ. ಡ್ರೈವರ್‌ ಮತ್ತು ಪ್ಯಾಸೆಂಜರ್‌ ಸೀಟಿಗೆ ಏರ್‌ಬ್ಯಾಗ್‌ ಅನ್ನು ನೀಡಲಾಗಿದೆ.

ಮೈಲೇಜ್‌ ಸಮಾಚಾರ
ಉಳಿದಂತೆ ಕಾರಿನ ಮೈಲೇಜ್‌ ಸಾಮರ್ಥ್ಯಕ್ಕೆ ಬಂದರೆ, ಕ್ವಿಡ್‌ 0.8 ಲೀಟರ್‌ ಎಂಜಿನ್‌ ಪ್ರತಿ ಲೀಟರ್‌ ಗೆ 22.3 ಕಿ.ಮೀ., ರಿನಾಲ್ಟ… ಕ್ವಿಡ್‌ 1.0 ಎಂ.ಟಿಯಲ್ಲಿ ಪ್ರತಿ ಲೀಟರ್‌ಗೆ 21.70 ಕಿ.ಮೀ. ರಿನಾಲ್ಟ್ ಕ್ವಿಡ್‌ 1.0ಎಎಂಟಿಯಲ್ಲಿ ಪ್ರತಿ ಲೀಟರ್‌ಗೆ 22.50 ಕಿ.ಮೀ. ಮೈಲೇಜ್‌ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕಾರಿನ ದರ(ಎಕ್ಸ್ ಶೋ ರೂಂ, ದೆಹಲಿ) ರೂ.ಗಳಲ್ಲಿ
ಸ್ಟಾಂಡರ್ಡ್‌ 0.8 – 2.83 ಲಕ್ಷ
ಆರ್‌ ಎಕ್ಸ್ ಇ 0.8 – 3,53 ಲಕ್ಷ
ಆರ್‌ ಎಕ್ಸ್ ಎಲ್‌ 0.8 – 3.83 ಲಕ್ಷ
ಆರ್‌ ಎಕ್ಸ್ ಟಿ 0.8 – 4.13 ಲಕ್ಷ
ಆರ್‌ ಎಕ್ಸ್ ಟಿ 1.0 – 4.33 ಲಕ್ಷ
ಆರ್‌ ಎಕ್ಸ್ ಟಿ 1.0 ಎಎಂಟಿ – 4.63 ಲಕ್ಷ
ಕ್ಲೈಂಬರ್‌ 1.0 – 4.54 ಲಕ್ಷ
ಕ್ಲೈಂಬರ್‌ 1.0 ಎಎಂಟಿ- 4.84 ಲಕ್ಷ

ಸೋಮಶೇಖರ ಸಿ. ಜೆ.

Advertisement

Udayavani is now on Telegram. Click here to join our channel and stay updated with the latest news.

Next