Advertisement

Delhi ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಭಾಗ ಕುಸಿದು ಕ್ರೇನ್ ಆಪರೇಟರ್ ಮೃತ್ಯು

04:38 PM Jun 14, 2023 | Team Udayavani |

ಹೊಸದಿಲ್ಲಿ: ನೈಋತ್ಯ ದೆಹಲಿಯ ರಾಷ್ಟ್ರೀಯ ಹೆದ್ದಾರಿ-48ರ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ಕ್ರೇನ್ ನಿರ್ವಾಹಕರೊಬ್ಬರು ಬುಧವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನೈಋತ್ಯ ದೆಹಲಿಯ ಪೊಲೀಸ್ ಉಪ ಆಯುಕ್ತ ಮನೋಜ್ ಸಿ ಘಟನೆಯ ಕುರಿತು ಪ್ರತಿಕ್ರಿಯಿಸಿ “ಎರಡು ಪಿಲ್ಲರ್ ಗಳ ನಡುವಿನ ಸ್ಪ್ಯಾನ್‌ಗಳಲ್ಲಿ ಒಂದು ನೆಲದ ಮೇಲೆ ಬಿದ್ದಿದೆ. ಕ್ರೇನ್ ಕೆಳಗೆ ಹಾದು ಹೋಗುತ್ತಿತ್ತು ಅದರ ಚಾಲಕ ರಾಜಸ್ಥಾನದ ಭರತ್‌ಪುರ ನಿವಾಸಿ ಮೊಹಮ್ಮದ್ ಶಕೀಲ್ (35) ಅವಶೇಷಗಳಡಿಯಲ್ಲಿ ನಜ್ಜುಗುಜ್ಜಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

“ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಸೈಟ್ ಮೇಲ್ವಿಚಾರಕ ಮತ್ತು ಸೈಟ್ ಮ್ಯಾನೇಜರ್ ಅನ್ನು ತನಿಖೆಗಾಗಿ ಬಂಧಿಸಲಾಗಿದೆ, ”ಎಂದು ತಿಳಿಸಿದರು.

ಮುಚ್ಚಿದ ಪ್ರದೇಶದಲ್ಲಿ ಸ್ಪ್ಯಾನ್ ಬಿದ್ದಿದ್ದು, ಅಲ್ಲಿ ಸಂಚಾರ ದಟ್ಟಣೆ ಇರಲಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ. “ಇದು ನಿರ್ಮಾಣ ಸ್ಥಳವಾಗಿದ್ದು, ಎನ್ ಎಚ್ 8 ಗೆ ಅಡ್ಡಲಾಗಿ ದ್ವಾರಕಾ ಎಕ್ಸ್‌ಪ್ರೆಸ್‌ವೇ ಲಿಂಕ್ ರಸ್ತೆಯ ಎತ್ತರದ ಭಾಗವು ನಿರ್ಮಾಣ ಹಂತದಲ್ಲಿದೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next