ಬೆಂಗಳೂರು: ಹಲೋ ಐ ಆ್ಯಮ್ ಯಮ. ಹೆಲ್ಮೆಟ್ ಹಾಕದೆ ಹೋಗ್ತಿದ್ದಿರಾ, ಇದೋ ಯಮಪಾಶಾ. ಬನ್ನಿ ನಿಮ್ಮನ್ನು ಮೇಲಕ್ಕೆ ಕರೆದುಕೊಂಡು ಹೋಗ್ತಿನಿ! ಇದು, ಯಾವುದೋ ಪೌರಾಣಿಕ ನಾಟಕದ ಡೈಲಾಗ್ ಅಲ್ಲ.
ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದರೂ, ದಂಡ ವಿಧಿಸಿದರೂ ಶೇ.100ರಷ್ಟು ಜಾರಿಯಾಗುತ್ತಿಲ್ಲ. ಹೀಗಾಗಿ, ಹಲಸೂರು ಗೇಟ್ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಮೊಹಮ್ಮದ್ ಅಲಿ ನೇತೃತ್ವದಲ್ಲಿ ಯಮ ಧರ್ಮರಾಯನ ವೇಷಧಾರಿ ಮೂಲಕ ಸಾರ್ವಜನಿಕರಲ್ಲಿ ಸಂಚಾರ ಜಾಗೃತಿ ಮೂಡಿಸಿದರು.
ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಗದಗ ಮೂಲದ ರಂಗಭೂಮಿ ಕಲಾವಿದ ವೀರೇಶ್ ಮುದ್ದಿನ ಮಠ ಯಮನ ವೇಷಧರಿಸಿ ಟೌನ್‌ಹಾಲ್, ವಿಲ್ಸನ್‌ಗಾರ್ಡ್‌ನ್ ಹಾಗೂ ರಿಚ್‌ಮಂಡ್ ಸರ್ಕಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂ ಸುವ ಸವಾರರನ್ನು ತಡೆದು ಶಿರಸ್ತ್ರಾಣ ಧರಿಸದೆ
ವಾಹನ ಚಲಾಯಿಸಿದರೆ ನಿಮ್ಮ ಬೆನ್ನು ಬೀಳುತ್ತೇನೆ ಎಂದು ಎಚ್ಚರಿಸುವ ಮೂಲಕ ಅರಿವು ಮೂಡಿಸಿದರು. ಅಲ್ಲದೆ, ನಿಯಮ ಉಲ್ಲಂ ಸಿದವರಿಗೆ ಗುಲಾಬಿ ಹೂ ಕೊಟ್ಟು ಹೆಲ್ಮೆಟ್ ಧರಿಸುವಂತೆ ಮನವೊಲಿಸಿದರು. ಜತೆಗೆ ಪರಿಸರ ಜಾಗೃತಿಗೆ ಸಸಿ ಕೂಡ ವಿತರಣೆ ಮಾಡಲಾಯಿತು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿ ಯಮ ಧರ್ಮರಾಯ ವೇಷಧಾರಿ ವೀರೇಶ್, ದೇವತೆಗಳಿಗೆ ಶಿರಸ್ತ್ರಾಣ ಇದೆ. ವಾಹನ ಚಾಲನೆ ಮಾಡುವ ನಿವೇಕೆ ಹೆಲ್ಮೆಟ್ ಧರಿಸುವುದಿಲ್ಲ. ನಿಮ್ಮಗಾಗಿ ನಿಮ್ಮ ಹೆಂಡತಿ, ಮಕ್ಕಳು ಇರುತ್ತಾರೆ. ಅವರ ಬಗ್ಗೆಯೂ ಯೋಚನೆ ಮಾಡಬೇಕು. ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹೆಲ್ಮೆಟ್ ಧರಿಸಿ. ಹಾಗೆಯೇ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು ಎಂದು ಮನವಿ ಮಾಡಿದರು.
ಬೈಕ್ ಏರಿದ ಯಮ: ಟೌನ್‌ಹಾಲ್ ಮುಂಭಾಗ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಸವಾರರನ್ನು ಕಂಡ ಯಮ ಧರ್ಮರಾಯ ವೇಷಧಾರಿ ಏಕಾಏಕಿ ಆತನನ್ನು ಹಿಂಬಾಲಿಸಿದರು. ಇದರಿಂದ ಒಂದು ಕ್ಷಣ ಆತಂಕಕ್ಕೊಳಗಾದ ಸಾವರ ಕೂಡಲೇ ಬೈಕ್ ನಿಲ್ಲಿಸಿ ಆಶ್ಚರ್ಯವ್ಯಕ್ತಪಡಿಸಿದ. ಬಳಿಕ ನೀನು ಹೆಲ್ಮೆಟ್ ಧರಿಸಿಲ್ಲ. ನನ್ನೊಟ್ಟಿಗೆ ಬಾ ಎಂದು ಹೇಳುತ್ತಾ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.