Advertisement

ಜೋಶಿಮಠದ ಸುರಕ್ಷಿತ ವಲಯದ ಮನೆಗಳಲ್ಲೂ ಬಿರುಕು!

11:49 PM May 09, 2023 | Team Udayavani |

ಜೋಶಿಮಠ: ಉತ್ತರಾಖಂಡದ ಜೋಶಿಮಠದಲ್ಲಿ ಕೆಲವು ತಿಂಗಳ ಹಿಂದೆ ಭಾರೀ ಬಿರುಕುಗಳು ಕಾಣಿಸಿಕೊಂಡು, ಹಲವು ಮನೆಗಳು ಧ್ವಂಸಗೊಂಡಿದ್ದವು. ನೂರಾರು ಮಂದಿ ತಾಪತ್ರಯಕ್ಕೊಳಗಾಗಿದ್ದರು.

Advertisement

ಇದೀಗ ಸುರಕ್ಷಿತ ವಲಯ ಎಂದು ಕರೆಸಿಕೊಂಡಿದ್ದ ಜಾಗಗಳಲ್ಲೂ ಬಿರುಕುಗಳು ಕಂಡು ಬಂದಿರು ವುದರಿಂದ ನಿವಾಸಿಗಳು ಆತಂಕಕ್ಕೊಳ ಗಾಗಿದ್ದಾರೆ.ಸದ್ಯದಲ್ಲೇ ಮುಂಗಾರು ಪ್ರವೇಶವಾಗುವ ಕಾರಣ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.

ಈ ಹಿಂದೆ ಮಳೆ ಬಿದ್ದಾಗಲೇ ಮನೆಗಳಲ್ಲಿ ದೊಡ್ಡದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದವು. ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದ್ದ ಜ್ಯೋತಿರ್ಮಠದಲ್ಲೂ ಬಿರುಕುಗಳುಂಟಾಗಿದ್ದವು.

ವಿಚಿತ್ರವೆಂದರೆ ಹಳದಿ ವಲಯ (ಯೆಲ್ಲೋ ಜೋನ್‌) ಪರವಾಗಿಲ್ಲ, ಸುರಕ್ಷಿತ ಎನ್ನಲಾಗಿತ್ತು. ಆದರೆ ಈಗ ಇಲ್ಲಿನ ಮನೆಗಳಲ್ಲೂ ಸಣ್ಣಸಣ್ಣ ಬಿರುಕುಗಳು ಕಂಡುಬಂದಿವೆ. ಜೋಶಿಮಠದ ಗಾಂಧಿನಗರ ವ್ಯಾಪ್ತಿಯಲ್ಲಿ ಈ ಮನೆಗಳು ಬರುತ್ತವೆ. ಸದ್ಯ ಅಧಿಕಾರಿಗಳು ಈ ಪ್ರದೇಶವನ್ನು ನಿಗಾದಲ್ಲಿಟ್ಟಿದ್ದು ಸೂಕ್ತ ವ್ಯವಸ್ಥೆಗೆ ಮುಂದಾಗಿದ್ದಾರೆ. ಆದರೆ ಜನ ಮಾತ್ರ ತಮ್ಮ ಮನೆಗಳ ಕಥೆ ಏನಾಗುತ್ತದೋ, ಏನೋ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next