ಅರಸೀಕೆರೆ: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಕಾರಣ ತಾ ಲೂಕಿನ ಗಂಡಸಿ ದೊಡ್ಡಕೆರೆ ಏರಿ ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿದ್ದು ಈ ಭಾಗದ ಗ್ರಾಮಸ್ಥರು ಹಾಗೂ ಕೃಷಿಕರ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನಲ್ಲಿ ಸತತ ಮಳೆ ಅಭಾವದ ಕಾರಣ ಕಳೆದ ಹತ್ತಾರು ವರ್ಷಗಳಿಂದ ತಾ ಲೂಕಿನ ಕೆರೆಗಳು ನೀರಿಲ್ಲದೆ ಬರಿದಾಗಿದ್ದು, ಕಳೆದ ಎಂಟು ತಿಂಗಳ ಹಿಂದೆ ಗಂಡಸಿ ಹಾಗೂ ಸುತ್ತಮುತ್ತಲ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ದೊಡ್ಡಕೆರೆಯಲ್ಲಿ ನೀರು ತುಂಬಿ ತ್ತು. ಈ ವೇಳೆ ಕೆರೆಯ ಏರಿ ಮೇಲೆ ಹಾದು ಹೋಗಿರುವ ರಸ್ತೆ ಉದ್ದಕ್ಕೂ ಬಿರುಕು ಕಾಣಿಸಿ ಕೊಂಡಿದೆ. ಸುದ್ದಿ ತಿಳಿದ ಶಾಸಕ ಕೆ.ಎಂ ಶಿವಲಿಂಗೇಗೌಡ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕೆರೆ ಏರಿಯನ್ನು ತಾತ್ಕಾಲಿ ಕವಾಗಿ ದುರಸ್ತಿಗೊಳಿಸಿ ಮುಂದೆ ಉಂಟಾಗುತ್ತಿದ್ದ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದರು.
ಆತಂಕದಲ್ಲಿ ಗ್ರಾಮಸ್ಥರು: ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ನೀಡಿದ್ದ ಭರವಸೆಯಂತೆ ಕೆರೆಯ ಏರಿಯ ದುರಸ್ತಿ ಕಾಮಗಾರಿಗೆ ಮುಂದಾಗದ ಪರಿಣಾಮ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಕೆರೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಳ್ಳುತ್ತಿದ್ದು, ಕೆರೆಯ ಏರಿಯಲ್ಲಿ ಬಿರುಕು ಕಾಣಿಸುತ್ತಿದ್ದು, ಯಾವ ಕ್ಷಣದಲ್ಲಿ ಕೆರೆ ಏರಿ ಒಡೆಯುತ್ತದೆ ಎಂಬ ಆತಂಕದಲ್ಲಿ ಸುತ್ತಮುತ್ತಲಿನ ಗ್ರಾಮಸ §ರನ್ನು ಹಾಗೂ ರೈತರು ಆತಂಕದಲ್ಲಿದ್ದಾರೆ.
ತುರ್ತು ದುರಸ್ತಿಗೊಳಿಸಿ: ಗ್ರಾಮದ ಮುಖಂಡ ಸಂಜೀವ ಆಗ್ರಹ- ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕೆರೆಯ ಏರಿ ದುರಸ್ತಿಗೆ ಮುಂದಾಗದಿದ್ದರೇ ಹೆಚ್ಚಿನ ಅನಾಹುತಕ್ಕೆ ತಾಲೂಕು ಆಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ನೇರ ಕಾರಣರಾಗುತ್ತಾರೆ. ಆದ್ದರಿಂದ ತಕ್ಷಣ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸಮಸ್ಯೆ ಬಗೆ ಹರಿಸಬೇಕೆಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಸಮಸ್ಯೆ ಗಂಭೀರತೆ ಅರಿಯಿರಿ: ಕೆಎಂಶಿ : ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ, ತಾಲೂಕಿನ ಗಂಡಸಿ ದೊಡ್ಡಕೆರೆ ಏರಿಯು ಅಪಾಯದ ಅಂಚಿನಲ್ಲಿದ್ದು ದುರಸ್ತಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಪರಿಸ್ಥಿತಿ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿ ದ್ದರು. ಅಧಿಕಾರಿಗಳ ನಿರ್ಲಕ್ಷ ಮನೋಭಾವನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.