Advertisement

ಬಿರುಕು ಬಿಟ್ಟ ಹೆಗ್ಡೆಬೆಟ್ಟು-ಪೈತಾಳ ಸಂಪರ್ಕ ರಸ್ತೆ

11:30 AM Jun 24, 2019 | sudhir |

ಅಜೆಕಾರು: ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಹೆಗ್ಡೆಬೆಟ್ಟುವಿನಿಂದ ಪೈತಾಳ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆ ಕಾಮಗಾರಿ ಪೂರ್ಣಗೊಂಡು 3 ತಿಂಗಳು ಕಳೆಯುವ ಮೊದಲೇ ಬಿರುಕುಬಿಟ್ಟಿದೆ.

Advertisement

ಸುಮಾರು 3.90 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿ ನಡೆದಿದ್ದು ಕಳಪೆ ಕಾಮಗಾರಿ ಯಿಂದಾಗಿ ರಸ್ತೆ ಕುಸಿಯುವ ಭೀತಿ ಕಾಡಿದೆ.

ಹೊಸ ಸೇತುವೆಯ ಇಕ್ಕೆಲಗಳ ರಸ್ತೆಗೆ ಹಾಕಲಾದ ಡಾಮರು ಕೂಡ ಕಿತ್ತು ಹೋಗುವ ಸ್ಥಿತಿಯಲ್ಲಿದೆ. ಘನ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದಲ್ಲಿ ರಸ್ತೆ ಕುಸಿಯಲಿದೆ ಎನ್ನುವುದು ಸ್ಥಳೀಯರ ಆರೋಪ.

ಕಳೆದ ವರ್ಷ ಮಳೆಗಾಲದಲ್ಲಿ ಇದೇ ಸೇತುವೆ ಹಾಗೂ ರಸ್ತೆಯ ಅರ್ಧಂಬರ್ಧ ಕೆಲಸದಿಂದಾಗಿ ಈ ಭಾಗದ ಜನರು ಹೈರಾಣಾಗಿದ್ದರು. ಸೇತುವೆ ಅಕ್ಕಪಕ್ಕದ ಕೃಷಿಕರ ಅಡಿಕೆ ತೋಟ ಕೃತಕ ನೆರೆಯಿಂದಾಗಿ ಆದರೆ ಗುತ್ತಿಗೆದಾರರು ಈ ಕೃಷಿಕರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅಸಮರ್ಪಕ ಚರಂಡಿ ವ್ಯವಸ್ಥೆ

Advertisement

ಹೆಗ್ಡೆಬೆಟ್ಟುವಿನಿಂದ ಪೈತಾಳದವರೆಗೆ ಸುಮಾರು 2 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು ಇದರ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಕೆಲವೆಡೆ ಮಳೆ ನೀರು ಕೃಷಿಕರ ಜಮೀನಿಗೆ ನುಗ್ಗುತ್ತಿದ್ದು ಕೃಷಿ ಹಾನಿಯೂ ಆಗುತ್ತಿದೆ.

ಹಲವು ದಶಕಗಳಿಂದ ತೂಗು ಸೇತುವೆಯಲ್ಲಿ ಸಂಕಷ್ಟಪಡುತ್ತಿದ್ದ ಸ್ಥಳೀಯರು ನಿರಂತರ ಮನವಿ ಮಾಡಿ, ಅನಂತರ ಶಾಸಕ ಸುನಿಲ್ ಕುಮಾರ್‌ ಅವರು ಸೇತುವೆ ಹಾಗೂ ರಸ್ತೆಗೆ 3.90 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದರು.

ಸೇತುವೆ ಹಾಗೂ ರಸ್ತೆ ನಿರ್ಮಾಣ ಸಂದರ್ಭ ತಾತ್ಕಾಲಿಕವಾಗಿ ತಗ್ಗುಪ್ರದೇಶದಲ್ಲಿ ಅಳವಡಿಸಲಾಗಿರುವ ವಿದ್ಯುತ್‌ ಕಂಬಗಳು ಈಗಲೂ ಅಲ್ಲೇ ಇದ್ದು ವಿದ್ಯುತ್‌ ತಂತಿಗಳು ಕೈಗೆಟಕುವಂತಿವೆ. ಇದರಿಂದಾಗಿ ಘನ ವಾಹನಗಳೂ ರಸ್ತೆಯಲ್ಲಿ ಸಂಚರಿಸುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next