Advertisement

ಬಿರುಕುಬಿಟ್ಟ ದೊಡ್ಡ ಕೆರೆ ಕೋಡಿ: ರೈತರಿಗೆ ಆತಂಕ

05:32 PM Feb 05, 2020 | Suhan S |

ಕೆ.ಆರ್‌.ಪೇಟೆ: ಮೈಸೂರು ಮಹಾರಾಜರು ನಿರ್ಮಿಸಿರುವ ಪಟ್ಟಣದಲ್ಲಿರುವ ದೇವೀರಮ್ಮಣ್ಣಿ ಕೆರೆ ಕೋಡಿ ಬಿರುಕುಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕೋಡಿ ಒಡೆದು ನೂರಾರು ಎಕರೆ ಕೃಷಿ ಭೂಮಿ ಕೊಚ್ಚಿ ಹೋಗುವ ಸಾಧ್ಯತೆಗಳಿದ್ದು, ಕೆರೆ ಕೆಳಭಾಗದ ರೈತರು ಆತಂಕದಲ್ಲಿದ್ದಾರೆ.

Advertisement

ನೂರಾರು ಎಕರೆ ಕೃಷಿ ಭೂಮಿಗೆ ನೀರೊದಗಿಸುವ ದೇವೀರಮ್ಮಣ್ಣಿಕೆರೆ ನೀರನ್ನು ಬಳಸಿಕೊಂಡು ರೈತರು ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಾರೆ. ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ದೇವೀರಮ್ಮಣ್ಣಿ ಕೆರೆ ಕೋಡಿಯನ್ನು ಕೆಲವು ವರ್ಷಗಳ ಹಿಂದೆ ದುರಸ್ತಿ ಮಾಡುವುದಾಗಿ ಹಳೆ ಕೋಡಿ ಕಟ್ಟಡಕ್ಕೆ ಅಧಿಕಾರಿಗಳು ತೇಪೆ ಹಾಕಿದ್ದರು. ಈಗ ಅದು ಬಿರುಕು ಬಿಟ್ಟಿದ್ದುನೀರು ವೇಗವಾಗಿ ಹರಿಯುತ್ತಿದೆ. ಕೋಡಿ ಒಡೆದು ಕೆರೆಯಲ್ಲಿ ತುಂಬಿರುವ ನೀರು ಒಂದೇ ಬಾರಿಗೆ ಹೊರಬಂದರೆ ಅನಾಹುತವಾಗುವುದು ಖಚಿತ. ಜೊತೆಗೆ ವಿಷಯ ತಿಳಿದ ನೀರಾವರಿ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳು ಸಾರ್ವಜನಿಕರು ಕೆರೆಯ ಬಳಿಗೆ ತೆರಳದಂತೆ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.

ರೈತರ ಆಕ್ರೋಶ: ಈಗ ಅಧಿಕಾರಿಗಳು ಕೆರೆಯ ಒಳಭಾಗದಿಂದ ಮರಳು ಚೀಲವನ್ನು ಬಿಟ್ಟು ಕೆರೆ ಏರಿ ಒಡೆದು ಹೋಗದಂತೆ ಕ್ರಮವಹಿಸಿದ್ದಾರೆ. ಆದರೂ ಕೆರೆಕೋಡಿ ಬಿರುಕುಬಿಟ್ಟಿರುವುದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next