Advertisement

ಖುಷಿಯ ಟ್ರ್ಯಾಕ್‌ನಲ್ಲಿ ಕ್ರ್ಯಾಕ್‌!

10:38 AM Sep 15, 2017 | |

“ಕಳೆದ ಸಲ “ಟೈಸನ್‌’ ಚಿತ್ರ ಮಾಡಿದ್ದಾಗ, ಚಿತ್ರ ಬಿಡುಗಡೆ ಮಾಡೋಕೆ ಥಿಯೇಟರ್‌ ಕೇಳಿದರೆ, ಆಗಲ್ಲ ಅಂದಿದ್ದರು. ಆದರೆ, ಆ ಸಿನಿಮಾ ಮಾಡಿದ ಬಿಜಿನೆಸ್‌ ನೋಡಿ, ಈಗ ಮತ್ತದೇ ಕಾಂಬಿನೇಷನ್‌ನಲ್ಲಿ ಮಾಡಿರುವ “ಕ್ರ್ಯಾಕ್‌’ ಚಿತ್ರವನ್ನು ಅದೇ ಥಿಯೇಟರ್‌ನವರು “ನಿಮ್ಮ ಸಿನಿಮಾ ಕೊಡಿ ಹಾಕ್ತೀವಿ …’ ಅಂತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಷಯ ಎನ್ನುತ್ತಲೇ ಬಿಡುಗಡೆಗೂ ಮುನ್ನ ತಮ್ಮ “ಕ್ರ್ಯಾಕ್‌’ ಚಿತ್ರಕ್ಕೆ ಸಿಕ್ಕ ಬೇಡಿಕೆ ಕುರಿತು ಹೇಳಿಕೊಂಡರು ನಿರ್ದೇಶಕ ರಾಮ್‌ನಾರಾಯಣ್‌.

Advertisement

“”ಕ್ರ್ಯಾಕ್‌’ ಇಂದು ರಾಜ್ಯಾದ್ಯಂತ ರಿಲೀಸ್‌ ಆಗಲಿದೆ. ವಿತರಕ ಎನ್‌. ಕುಮಾರ್‌ ಎಲ್ಲಾ ಏರಿಯಾಗಳಲ್ಲೂ ವಿತರಣೆ ಮಾಡುತ್ತಿದ್ದಾರೆ. ಬಿಕೆಟಿಗೆ ಬಸವರಾಜ್‌ ಎಂಬುವವರು ಪಡೆದರೆ, ಹೈದರಾಬಾದ್‌ ಕರ್ನಾಟಕಕ್ಕೆ ಜಯರಾಂ ಎಂಬುವವರು ವಿತರಣೆ ಮಾಡುತ್ತಿದ್ದಾರೆ. ಇನ್ನು, 250 ಕ್ಕೂ ಹೆಚ್ಚು  ಚಿತ್ರಮಂದಿರಗಳಲ್ಲಿ “ಕ್ರ್ಯಾಕ್‌’ ರಿಲೀಸ್‌ ಆಗುತ್ತಿದೆ. “ಟೈಸನ್‌’ ತಕ್ಕಮಟ್ಟಿಗೆ ಸಕ್ಸಸ್‌ ಕಂಡಿತ್ತು. ಅದು ನನಗೂ ಮತ್ತು ವಿನೋದ್‌ ಪ್ರಭಾಕರ್‌ ಅವರಿಗೂ ಪ್ಲಸ್‌ ಆಯ್ತು. ಇಬ್ಬರೂ ಸೇರಿ ಈಗ “ಕ್ರ್ಯಾಕ್‌’ ಮಾಡಿದ್ದೇವೆ. ಬೇಡಿಕೆ ಹೆಚ್ಚಿದೆ. ಹಿಂದಿ ಭಾಷೆಗೆ ಹೆಚ್ಚು ಮೊತ್ತಕ್ಕೆ ಡಬ್ಬಿಂಗ್‌ ರೈಟ್ಸ್‌ ಹೋಗಿದೆ.

ಟ್ರೇಲರ್‌, ಸಾಂಗ್‌ ನೋಡಿದವರು ತೆಲುಗು, ತಮಿಳಿಗೆ ರಿಮೇಕ್‌ ರೈಟ್ಸ್‌ ಕೇಳುತ್ತಿದ್ದಾರೆ. ಈಗಾಗಲೇ ತಮಿಳಿನ ನಿರ್ಮಾಪಕರೊಬ್ಬರು ವಿಶಾಲ್‌ಗೆ ಸಿನಿಮಾ ಮಾಡೋಕೆ ಮುಂದಾಗಿದ್ದು, ಆ ಬಗ್ಗೆ ಮಾತುಕತೆ ನಡೆಯುತ್ತಿದೆ. ನಮ್ಮ ಮಟ್ಟಿಗೆ “ಕ್ರ್ಯಾಕ್‌’ ಒಂದು ಸಂದೇಶವಿರುವ ಚಿತ್ರ. ಮಾಸ್‌ ಆಡಿಯನ್ಸ್‌ನ ಸಿನಿಮಾವಾಗಿದ್ದರೂ, ಫ್ಯಾಮಿಲಿ ಕುಳಿತು ನೋಡಬಹಬುದಾದ ಯಾವುದೇ, ಅಶ್ಲೀಲವಾಗಲಿ, ಡಬ್ಬಲ್‌ ಮೀನಿಂಗ್‌ ಆಗಲಿ ಇರದ ಒಂದು ಫ‌ುಲ್‌ಪ್ಯಾಕೇಜ್‌ ಸಿನಿಮಾವಿದು’ ಎಂದರು ರಾಮ್‌ನಾರಾಯಣ್‌. ಕೇರಳ ಮೂಲದ ನಟ ಅರ್ಜುನ್‌ ಇಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರಂತೆ. ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಸುಮಾರು 25 ಚಿತ್ರಗಳಲ್ಲಿ ನಟಿಸಿರುವ ಅರ್ಜುನ್‌ಗೆ ಇದು ಮೊದಲ ಚಿತ್ರವಂತೆ. 
ಅವರಿಗೆ ಈ ಚಿತ್ರ ಕನ್ನಡದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತೆ ಎಂಬ ವಿಶ್ವಾಸವಿದೆ. ನಾಯಕಿ ಆಕಾಂಕ್ಷ ಇಲ್ಲಿ ಮೊದಲ ಸಲ ಡಬ್ಬಿಂಗ್‌ ಮಾಡಿದ ಖುಷಿ ಹಂಚಿಕೊಂಡರು. ಉಳಿದಂತೆ ಸಿನಿಮಾದಲ್ಲೇ ಎಲ್ಲವನ್ನೂ ನೋಡಬೇಕು ಅಂದರು. ಸಂಗೀತ ನಿರ್ದೇಶಕಿ ಶಮಿತಾ ಮಲಾ°ಡ್‌ಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರಂತೆ. ಕಾವೇರಿ ಹಾಡು ಈಗಾಗಲೇ ಹಿಟ್‌ ಆಗಿದ್ದು, ಎಲ್ಲರಿಗೂ ಚಿತ್ರ ಮೆಚ್ಚುಗೆಯಾಗುತ್ತೆ ಅಂದರು. 

ಚಿತ್ರಕ್ಕೆ ಆನಂದ್‌ ಪ್ರಿಯ ಸಂಭಾಷಣೆ ಬರೆದಿದ್ದು, ಪಕ್ಕಾ ಕಮರ್ಷಿಯಲ್‌ ಎಲಿಮೆಂಟ್ಸ್‌ ಇರುವ ಗುಣಮಟ್ಟದ ಚಿತ್ರವಿದು ಎಂದರು. ನಿರ್ಮಾಪಕ ವಿಜಯ್‌, “ಕ್ರ್ಯಾಕ್‌’ಗೆ ಡಿಮ್ಯಾಂಡ್‌ ಬಂದಿದ್ದರಿಂದ ಎಲ್ಲಾ ಏರಿಯಾಗಳಿಗೂ ಚಿತ್ರ ಕೊಟ್ಟಿದ್ದಾರಂತೆ. ಸುಮಾರು 26 ಮಲ್ಟಿಪ್ಲೆಕ್ಸ್‌ ಸೇರಿದಂತೆ 250 ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next