Advertisement
ಸೇತುವೆ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಆದರೆ ಬಿರುಕು ಬಿಟ್ಟ ಶಿಥಿಲ ಸೇತುವೆಯ ಸಮಸ್ಯೆಗೆ ಮಾತ್ರ ಪರಿಹಾರ ವಾಗಿಲ್ಲ. ದಿನದಿಂದ ದಿನಕ್ಕೆ ಸೇತುವೆ ಕುಸಿಯುವ ಹಂತದಲ್ಲಿದೆ.ಹೆದ್ದಾರಿ ಚತುಷ್ಪಥ ಯೋಜನೆ ಇನ್ನೂ ರಾಜ್ಯದಲ್ಲಿ ಆರಂಭಗೊಂಡಿಲ್ಲ. ನಿಧಾನವೇ ಪ್ರಧಾನ ವಾಗಿ ನಡೆಯುವ ರಾಜ್ಯದ ಯೋಜನೆ ಪ್ರಕ್ರಿಯೆಯಲ್ಲಿ ಕುಕ್ಕಾರು, ಉಪ್ಪಳ, ಮೊಗ್ರಾಲ್ ಮುಂತಾದ ಸೇತುವೆ ಗಳು ಶಿಥಿಲಗೊಳ್ಳುತ್ತಿವೆ. ಆದರೆ ಗುತ್ತಿಗೆದಾರ ರಿಗಾಗಿ ರಸ್ತೆ ಪಕ್ಕದಲ್ಲಿ ಎತ್ತರ ಪ್ರದೇಶವಲ್ಲದ ಸ್ಥಳದಲ್ಲಿ ಕಬ್ಬಿಣ ತಡೆಬೇಲಿ, ಕಾಂಕ್ರಿಟ್ ತಡೆಗೋಡೆ,ನೀರು ಹರಿಯದಲ್ಲಿ ಕಾಂಕ್ರಿಟ್ ತೋಡು ನಿರ್ಮಾಣ ಮುಂತಾದ ಅನಗತ್ಯ ಕಾಮಗಾರಿಗಳು ಹೇರಳ ನಿಧಿ ದುರ್ವಿವಿನಿಯೋಗದ ಮೂಲಕ ನಡೆಯುತ್ತಲೇ ಇದೆ. ಆದರೆ ಅಗತ್ಯದ ಕಾಮಗಾರಿ ಮಾತ್ರ ನಡೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕರದು. ಕುಸಿಯಲು ಮುಂದಾದ ಕುಕ್ಕಾರು ಸೇತುವೆಗೆ ತುರ್ತು ಕಾಯಕಲ್ಪ ಮಾಡದಿದ್ದಲ್ಲಿ ಮುಂದೊಂದು ದಿನ ದುರಂತ ಸಂಭವಿಸಲಿದೆ. ಸಂಭಾವ್ಯ ದುರಂತ ಘಟಿಸುವ ಮುನ್ನ ಲೋಕೋಪಯೋಗಿ ಇಲಾಖೆ ಶಿಥಿಲ ಸೇತುವೆಯತ್ತ ಕಣ್ಣು ಹಾಯಿಸಬೇಕಾಗಿದೆ.
ಕುಕ್ಕಾರು ಸೇತುವೆ ಪರಿಸರ ಪ್ರದೇಶದ ರಸ್ತೆಯಲ್ಲಿ ಅನೇಕ ವರ್ಷಗಳಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಕೆಲವು ಸಾವು-ನೋವುಗಳೂ ಸಂಭವಿಸಿವೆ. ಯಾವುದೋ ಅಗೋಚರ ಶಕ್ತಿಯಿಂದಾಗಿ ಈ ರೀತಿಯಾಗು ವುದಾಗಿ ಸ್ಥಳೀಯರ ಅಭಿಪ್ರಾಯ. ಇದರಂತೆ ಸ್ಥಳೀಯ ಮನೆಯವ ರೋರ್ವರು ಪರಿಹಾರ ಕ್ರಿಯಾದಿ ಯನ್ನೂ ಮಾಡಿಸಿದ್ದಾರಂತೆ. ಆ ಬಳಿಕ ಈ ಪ್ರದೇಶದಲ್ಲಿ ಅಪಘಾತ ನಡೆದಿಲ್ಲವಂತೆ. – ಅಚ್ಯುತ ಚೇವಾರ್