Advertisement

ಬಿಇಒ ಕಚೇರಿ ಕಟ್ಟಡದಲ್ಲಿ ಬಿರುಕು

12:58 PM Aug 15, 2017 | Team Udayavani |

ಔರಾದ: ಕ್ಷೇತ್ರ ಶಿಕ್ಷಣಾಧಿ ಕಾರಿಗಳ ನೂತನ ಕಚೇರಿ ಕಟ್ಟಡ ಉದ್ಘಾಟನೆಯಾಗಿ ಕೆಲವೇ ದಿನಗಳಲ್ಲಿ ಕಟ್ಟಡದ ಹಲವು ಕಡೆ ಬಿರುಕು
ಕಾಣಿಸಿಕೊಂಡಿದ್ದು, ಇದರಿಂದ 50ಲಕ್ಷ ರೂ. ವೆಚ್ಚದಲ್ಲಿ ಭೂಸೇನಾ ನಿಗಮ ಕೈಗೊಂಡ ಕಾಮಗಾರಿಯ ನಿಜ ಬಣ್ಣ ಬಯಲಾದಂತಾಗಿದೆ.
2013-14ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎರಡು ಅಂತಸ್ಥಿನ ಕಟ್ಟಡ ನಿರ್ಮಾಣಕ್ಕೆ ತಾಲೂಕಿಗೆ 50ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ, ಭೂಸೇನಾ ನಿಮಗಕ್ಕೆ ಕಾಮಗಾರಿ ವಹಿಸಲಾಗಿತ್ತು. ಒಂದು ವರ್ಷದಲ್ಲಿ ಮುಗಿಸಬೇಕಾಗಿದ್ದ ಕಾಮಗಾರಿಗೆ ಎರಡು ವರ್ಷ ಮಾಡಿದರೂ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳದಿರುವುದು ಶಿಕ್ಷಣಾಧಿಕಾರಿಕಚೇರಿ ಸಿಬ್ಬಂದಿಯವರನ್ನು ಕೆರಳಿಸುವಂತೆ ಮಾಡಿದೆ. ಚನ್ನಬಸವೇಶ್ವರ ವೃತ್ತದ ಬಳಿ ನಿರ್ಮಾಣ ಮಾಡಲಾದ ಈ ಕಚೇರಿ ಕಟ್ಟಡದಲ್ಲಿ ಐದು ಕೋಣೆಗಳಿದ್ದು, ಪ್ರತಿಯೊಂದು ಕೋಣೆಯ ಗೋಡೆಗಳು ಬಿರುಕು ಬಿಟ್ಟಿವೆ. ಕಚೇರಿ ಉದ್ಘಾಟನೆಗಾಗಿ ಹಾಕಲಾಗಿದ್ದ ವಿದ್ಯುತ್‌ ದೀಪ, ತೋರಣಗಳನ್ನು ಕೂಡ ತೆಗೆದಿಲ್ಲ. ಆದರೆ ಕಟ್ಟಡದ ಪ್ರತಿಯೊಂದು ಕೋಣೆಗಳಲ್ಲಿ ಬಿರುಕು ಬಿಟ್ಟಿದ್ದು ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದೆ. ಅಗತ್ಯ ಸೌಕರ್ಯಗಳಿಲ್ಲ: ಶಿಕ್ಷಣಾಧಿಕಾರಿಗಳ ಕಚೇರಿಗೆ ಬರಲು ದಾರಿ ಕೂಡ ಇಲ್ಲ. ಕಾಮಗಾರಿಯ ಕ್ರಿಯಾ ಯೋಜನೆಯಲ್ಲಿ ಮುಖ್ಯದ್ವಾರ ಹಾಗೂ ಸಿಸಿ ರಸ್ತೆಗಳನ್ನು ಮಾಡಿ ಒಂದು ಸಣ್ಣ ಗೇಟ್‌ನ ಕೇಲಸವನ್ನೂ ಮಾಡುವಂತೆ
ನಮೂದಿಸಲಾಗಿದೆ. ಆದರೂ ಕಚೇರಿಗೆ ರಸ್ತೆ, ನೀರು ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಲ್ಲ. ಪಟ್ಟಣ ಹಾಗೂ ಗ್ರಾಮೀಣ
ಭಾಗದ ಸರ್ಕಾರಿ ಶಾಲೆಯ ಕಟ್ಟಗಳಿಗೆ ಅಂಗವಿಕಲರಿಗೆ ಅನುಕೂಲವಾಗುವಂತೆ ರ್‍ಯಾಂಪ್‌ ನಿರ್ಮಿಸಲಾಗಿದೆ. ಆದರೆ ಶಿಕ್ಷಣಾ 
ಕಾರಿಗಳ ಕಟ್ಟಡ ಎರಡು ಅಂತಸ್ಥಿನದಾದರೂ ಅಂಗವಿಕಲರು ಮೇಲೆ ಹೋಗಲು ಹೇಗೆ ಸಾಧ್ಯವಾಗುತ್ತದೆ ಎನ್ನುವ ಪ್ರಶ್ನೆ ಕಾಡುತ್ತಿವೆ.
ಆಕ್ರೋಶಗೊಂಡ ಶಾಸಕ: ಕೆಲ ದಿನಗಳ ಹಿಂದೆ ಈ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಪ್ರಭು ಚವ್ಹಾಣ ಅವರು ಕಟ್ಟಡದ
ಪ್ರತಿಯೊಂದು ಕೋಣೆಗಳನ್ನು ಪರಿಶೀಲಿಸಿದ ಬಳಿಕ, ಬಿರಕು ಬಿಟ್ಟ ಗೋಡೆಗಳನ್ನು ನೋಡಿ ಕಟ್ಟಡ ಉದ್ಘಾಟಿಸವುದಿಲ್ಲ. ತಾಲೂಕು
ಕೆಂದ್ರಸ್ಥಾನದ ಶಿಕ್ಷಣಾ ಧಿಕಾರಿಗಳ ಕಚೇರಿ ಕ್ರಿಯಾ ಯೋಜನೆಯಂತೆ ನಿರ್ಮಾಣವಾಗಿಲ್ಲ ಎಂದು ಕೋಪಗೊಂಡ ಪ್ರಸಂಗ ನಡೆದಿತ್ತು.
ಕಳಪೆಯಾದ ಕಟ್ಟಡವನ್ನು ಭೂಸೇನಾ ನಿಗಮದಿಂದ ಹಸ್ತಾಂತರಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೆಲ ಪ್ರಭಾವಿ ನಾಯಕರು ನಮಗೆ ದಬ್ಟಾಳಿಕೆಯಿಂದ ಕಟ್ಟಡ ಹಸ್ತಾಂತರಗೊಳ್ಳುವಂತೆ ಮಾಡಿದ್ದಾರೆ. ನಾವು ಸರ್ಕಾರಿ ನೌಕರರು ಉತ್ತಮವಾಗಿ ಕಾರ್ಯ ನಿರ್ವಹಿಸುವುದೇ ನಮ್ಮ ಕಾಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಚವ್ಹಾಣಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next