Advertisement

ಏಡಿಗಳಿಂದಾಗಿ ಚಿಪ್ಲೂನ್‌ ಡ್ಯಾಮ್‌ ಕುಸಿತ!:ಸಚಿವ ಸಾವಂತ್‌

03:43 PM Jul 06, 2019 | Vishnu Das |

ಮುಂಬಯಿ:ರತ್ನಗಿರಿ ಜಿಲ್ಲೆಯ ಚಿಪ್ಲೂನ್‌ ತಾಲೂಕಿನ ತೇವಾರಿ ಅಣೆಕಟ್ಟು ಒಡೆದು ಸಂಭವಿಸಿದ ಘಟನೆ ನೈಸರ್ಗಿಕ ವಿಪತ್ತು ಎಂದು ರಾಜ್ಯ ಜಲ ಸಂರಕ್ಷಣಾ ಸಚಿವ ತಾನಾಜಿ ಸಾವಂತ್‌ ಹೇಳಿದ್ದಾರೆ. ಏಡಿಗಳಿಂದಾಗಿ ಈ ಅಣೆಕಟ್ಟಿನ ಗೋಡೆಗಳು ದುರ್ಬಲಗೊಂಡಿದ್ದು, ಡ್ಯಾಂ ಒಡೆದು ದುರ್ಘ‌ಟನೆ ಸಂಭವಿಸಿದೆ ಎಂದು ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಿದ್ದಾರೆ.

Advertisement

ಡ್ಯಾಂ ಒಡೆದುಹೋಗಿದ್ದರಿಂದ ಒಮ್ಮಿಂದಲೇ ರಭಸವಾಗಿ ನೀರು ಹರಿದು ಜಲಾಶಯದ ಕೆಳ ಭಾಗದಲ್ಲಿರುವ ಏಳು ಗ್ರಾಮಗಳಿಗೆ ನೀರು ಹೊಕ್ಕು 13 ಮನೆಗಳು ಕೊಚ್ಚಿ ಹೋಗಿದ್ದು, ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಹೊಸದಾಗಿ ಚುನಾಯಿತರಾದ ಜಲ ಸಂರಕ್ಷಣಾ ಸಚಿವ ಸಾವಂತ್‌ ಅವರು, ನೀಡಿದ ಹೇಳಿಗೆ ವಿವಾದಾತ್ಮಕವಾಗಿದೆ. ಯಾವುದು ಹಣೆಯಲ್ಲಿ ಬರೆದಿದೆ ಅದೆ ನಡೆಯುತ್ತಿದೆ ಎಂದಿದ್ದರು. ಹೆಚ್ಚಿನ ಸಂಖ್ಯೆಯ ಏಡಿಗಳು ಅಣೆಕಟ್ಟಿನ ಗೋಡೆಯನ್ನು ದುರ್ಬಲಗೊಳಿಸಿವೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ಜನರು ಅವರಿಗೆ ತಿಳಿಸಿದರು ಎಂದರು.
ಈ ಡ್ಯಾಂ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯ ಏಡಿಗಳು ಇದ್ದು, ಗೋಡೆಯನ್ನು ದುರ್ಬಲಗೊಳಿಸಿವೆ ಎಂದರು. ಈ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ವತಿಯಿಂದ ಸ್ಥಾಪಿತ ಎಐಟಿ ಶೀಘ್ರದಲ್ಲಿ ವರದಿ ಸಲ್ಲಿಸಲಿದೆ ಎಂದು ಸಾವಂತ್‌ ಹೇಳಿದ್ದಾರೆ.

ಎನ್‌ಸಿಪಿ ಟೀಕೆ: ಏಡಿ ಜತೆ ಠಾಣೆಗೆ ಹಾಜರು
ಥಾಣೆ: ರತ್ನಗಿರಿ ಜಿÇÉೆಯ ಚಿಪೂÉನ್‌ ತಾಲೂಕಿನ ತೇವಾರಿ ಡ್ಯಾಂ (ಅಣೆಕಟ್ಟು)ಒಡೆದು ಸಂಭವಸಿದ ಘಟನೆಯಲ್ಲಿ 20ಕ್ಕಿಂತ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಡ್ಯಾಂ ದುರಂತ‌ ಸದ್ಯ ರಾಜ್ಯದಲ್ಲಿ ದೊಡ್ಡ ರಾಜಕೀಯವೇ ಆರಂಭವಾಗಿದೆ. ಏಡಿಗಳಿಂದಾಗಿ ಈ ಅಣೆಕಟ್ಟಿನ ಗೋಡೆಗಳು ದುರ್ಬಲಗೊಂಡಿದ್ದು, ಡ್ಯಾಂ ಒಡೆದು ದುರ್ಘ‌ಟನೆ ಸಂಭವಿಸಿದೆ ಎಂದು ರಾಜ್ಯ ಜಲ ಸಂರಕ್ಷಣಾ ಸಚಿವ ತಾನಾಜಿ ಸಾವಂತ್‌ ನೀಡಿದ ಹೇಳಿಕೆಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಾವಂತ್‌ ಅವರ ಹೇಳಿಕೆಗೆ ಎಲ್ಲ ವಲಯದಿಂದ ಟೀಕೆ ವ್ಯಕ್ತವಾಗುತ್ತಿದೆ.

ತಾನಾಜಿ ಸಾವಂತ್‌ ಅವರು ಏಡಿಗಳಿಂದ ದುರಂತ ಸಂಭವಿಸಿದೆ ಎಂದು ಹೇಳಿದಕ್ಕೆ ಎನ್‌ಸಿಪಿ ಶಾಸಕ ಜಿತೇಂದ್ರ ಆವಾಡೆ, ನವಾಬ್‌ ಮಲ್ಲಿಕ್‌ ಹಾಗೂ ಬೆಂಬಲಿಗರ ಜತೆ ಸೇರಿ ಏಡಿಗಳನ್ನು ಹಿಡಿದುಕೊಂಡು ನೌಪಾಡಾ ಪೊಲೀಸ್‌ ಠಾಣೆಗೆ ದಾಖಲಾದರು. ಏಡಿಗಳ ವಿರುದ್ಧ ದೂರು ದಾಖಲಿಸುವಂತೆ ಹೇಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ವೇಳೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಲ ಸಂರಕ್ಷಣಾ ಸಚಿವ ಸಾವಂತ್‌ ಸ್ಥಾನೀಯ ಶಾಸಕರನ್ನು ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆಸಿದ್ದರಿಂದ ಈಗ ಏಡಿಗಳ ಮೇಲೆ ಆರೋಪಮಾಡುತ್ತಿದ್ದಾರೆ ಎಂದು ನವಾಬ್‌ ಮಲ್ಲಿಕ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next