Advertisement

‘ಮಂಗಳೂರನ್ನು ಸೌಹಾರ್ದ ತಾಣವಾಗಿಸಲು ಸಿಪಿಎಂ ಬದ್ಧ’

03:06 PM Oct 21, 2017 | Team Udayavani |

ಮಹಾನಗರ: ಇತ್ತೀಚಿನ ವರ್ಷಗಳಲ್ಲಿ ಕೆಲವು ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ತುಳುನಾಡಿನ ಸಂಸ್ಕೃತಿಯನ್ನೇ  ನಾಶಪಡಿಸುವ ಮೂಲಕ ಭಯದ ವಾತಾವರಣವನ್ನು ನಿರ್ಮಿಸಿದ್ದಾರೆ. ಸೌಹಾರ್ದವನ್ನು ನೆಲೆಗೊಳಿಸಲು ಹಾಗೂ ಮಂಗಳೂರನ್ನು ಸೌಹಾರ್ದ ತಾಣ ವನ್ನಾಗಿಸಲು ಪಕ್ಷ ಕಂಕಣಬದ್ಧವಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್‌ ಹೇಳಿದರು.

Advertisement

ಅವರು ಪಕ್ಷದ ನೇತೃತ್ವದಲ್ಲಿ ಸೌಹಾರ್ದದಿಂದ ಅಭಿವೃದ್ಧಿಯೆಡೆಗೆ ಎಂಬ ಘೋಷಣೆಯೊಂದಿಗೆ ಡಿಸೆಂಬರ್‌ನಲ್ಲಿ ಜರಗಲಿರುವ ಜನತೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸೌಹಾರ್ದ ನಿರ್ಮಾಣ
ಅಧ್ಯಕ್ಷತೆ ವಹಿಸಿದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್‌ ಮಾತನಾಡಿ, ಸ್ವಚ್ಚ, ಸುಂದರ, ಸಮೃದ್ಧ, ಸೌಹಾರ್ದ ಮಂಗಳೂರಿನ ನಿರ್ಮಾಣ ನಮ್ಮ ಕನಸಾಗಿದ್ದು, ಅದನ್ನು ಸಾಕಾರಗೊಳಿಸಲು ಸ್ಪಷ್ಟ ಹಾಗೂ ವೈಜ್ಞಾನಿಕ ವಾದ ದೃಷ್ಟಿಯನ್ನು ಹೊಂದಿದೆ ಎಂದರು.

ನಗರ ದಕ್ಷಿಣ ಸಮಿತಿ ಸದಸ್ಯರಾದ ಯೋಗೀಶ್‌ ಜಪ್ಪಿನಮೊಗರು, ಸಂತೋಷ್‌ ಶಕ್ತಿನಗರ, ದಿನೇಶ್‌ ಶೆಟ್ಟಿ, ಪ್ರೇಮನಾಥ ಜಲ್ಲಿಗುಡ್ಡೆ, ಭಾರತಿ ಬೋಳಾರ ಮತ್ತಿತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next