ಚಿಕ್ಕೋಡಿ: ಚಿಕ್ಕೋಡಿ ಪ್ರೀಮಿಯರ್ ಲೀಗ್ ಐದನೆಯ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ವ್ಹಿ.ಕೆ.ಟೈಗರ್ಸ ಮೊದಲ ಸ್ಥಾನ ಪಡೆದು ಟ್ರೋಪಿ ತನ್ನದಾಗಿಸಿಕೊಂಡಿತು.
ಎರಡನೇ ಸ್ಥಾನದಲ್ಲಿ ರಜಾ11 ಟೀಮ್ ಹಾಗೂ ಐಸಿಬಿ ಕ್ಯಾಪಿಟಲ್ ತಂಡ ಮೂರನೆ ಸ್ಥಾನ ಪಡೆಯಿತು.
ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿನೋದ ಟವಳೇ ಅವರಿಗೆ ಸರಣಿಯ ಉತ್ತಮ ಬ್ಯಾಟಿಂಗ್ ಪ್ರಶಸ್ತಿ ನೀಡಲಾಯಿತು, ಉತ್ತಮ ಬೌಲಿಂಗ ಹಾಗೂ ಪಂದ್ಯಾವಳಿಯ ಅತ್ಯತ್ತಮ ಆಟಗಾರರಾಗಿ ಪ್ರದರ್ಶನ ನೀಡಿದ ಪ್ರವೀಣ ಕಾಳೆ ಅವರಿಗೆ ಪ್ರಶಸ್ತಿ ಪಡೆದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಕೇತ ಮಾಂಜರೇಕರ, ಬಡೆ ನಾಯಿಕವಾಡಿ, ರಾಜು ಸೊಲ್ಲಾಪುರೇ, ವಿಜಯ ಚಿಂಚಣಿಕರ, ರಘು ಹಣಬರ, ಬಾಬು ಮಿರ್ಜಿ, ವಿಶ್ವನಾಥ ಕಾಮಗೌಡ. ಕಾಶಿನಾಥ್ ಕುರಣಿ, ಇಮ್ತಿಯಾಜ, ರಾಜು ಸಂಕೇಶ್ವರಿ ಆಗಮೀಸಿದ್ದರು.
ಸಿಪಿಎಲ್ ಕಮಿಟಿ ಸದಸ್ಯರಾದ ಮಹೇಶ ನೂಲಿ, ಪ್ರವೀಣ ಬ್ಯಾಕುಡಿ, ಸಂದಿಪ ಶೇರಖಾನೆ, ಪ್ರವೀಣ ಸವದಿ, ಪ್ರವೀಣ ಮಾನೆ, ದೀಪಕ್ ಕಾಂಬಳೆ, ಶಿವಾನಂದ ಡಬ್ಬ, ಬಂಡು ಬೋಸಲೇ, ಪ್ರಶಾಂತ ಕಾಳಿಂಗೆ ಹಾಗೂ ಸಂತೋಷ ಸೊಲ್ಲಾಪುರೆ ಇತರರು ಇದ್ದರು.
ಇದನ್ನೂ ಓದಿ : ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್ವೈ