Advertisement
ಸ್ಪರ್ಧೆ ಯಾಕಾಗಿ ?ಬೈಂದೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸಮಸ್ಯೆಗಳ ಆಗರವಾಗಿದೆ. ಗಂಗೊಳ್ಳಿ ಬಂದರನ್ನು ವಿಶ್ವದರ್ಜೆಗೆ ಏರಿಸಬಹುದು. ಆದರೆ ಮಲ್ಪೆಯಷ್ಟು ಕೂಡ ಅಭಿವೃದ್ಧಿಯಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಮೇಲ್ದರ್ಜೆಗೇರಿಲ್ಲ. ಸಾಕಷ್ಟು ಸಮಸ್ಯೆಗಳ ಕುರಿತು ಹೋರಾಟ ಮಾಡಿದ್ದೇವೆ. ಆದರೆ ಅಧಿಕಾರಾರೂಢರ ಸ್ಪಂದನೆಯೇ ಇಲ್ಲ. ಮೂಲಸೌಕರ್ಯಗಳೇ ಇಲ್ಲ. ಬೈಂದೂರಿನ ಅದಿರು ಹೊರಭಾಗಕ್ಕೆ ಸಾಗಾಟ ಮಾಡುವ ಬದಲು ಇಲ್ಲೇ ಕಾರ್ಖಾನೆ ಮಾಡಿದರೆ ಉದ್ಯೋಗ, ಉದ್ಯಮ ಎಲ್ಲವೂ ಆಗುತ್ತದೆ. ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಿಸುವ ಮೂಲಕ ಆಗಬಹುದಾದ ಪ್ರಯೋಜನಕ್ಕೂ ಜನ ಪ್ರತಿನಿಧಿಗಳು ಸ್ಪಂದಿಸಲಿಲ್ಲ. ಇವರಿಗೆ ಇಚ್ಛಾಶಕ್ತಿಯೇ ಇಲ್ಲ.
ಕುಂದಾಪುರ, ಬೈಂದೂರಿನಲ್ಲಿ ಕಾರ್ಮಿಕರ ಪರ, ರೈತರ ಬದುಕಿಗಾಗಿ ಹೆಚ್ಚು ಹೋರಾಟಗಳನ್ನು ಮಾಡಿದ್ದೇವೆ. ಹಂಚು ಕಾರ್ಖಾನೆಗಳ ಕಾರ್ಮಿಕರು ಅತಂತ್ರರಾಗಿದ್ದಾರೆ. ಉದ್ಯಮ ಕುಸಿದಿದೆ. ಮರಳು ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ. ಉಪ್ಪು ನೀರಿನ ಮರಳನ್ನೇ ಉಪಯೋಗಿಸಬೇಕಿದೆ. ಆದರೆ ಸಂಸದರು, ಸಚಿವರು, ಶಾಸಕರು ಈ ಕುರಿತು ಮಾತನಾಡುವುದೇ ಇಲ್ಲ. ನಮ್ಮ ಹೋರಾಟವನ್ನೇ ಗೇಲಿ ಮಾಡುತ್ತಾರೆ. ಆದ್ದರಿಂದ ಇಂತಹ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕೆಂಬ ಆಶಯದಿಂದ ಸ್ಪರ್ಧೆಗೆ ಹೊರಟಿದ್ದೇವೆ. ಕಾರ್ಮಿಕ ಕಲ್ಯಾಣ ಮಂಡಳಿಗಳಲ್ಲಿ ಸಿಬಂದಿ ಕೊರತೆಯಿದೆ. ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ನಿವೇಶನರಹಿತ ಸಾವಿರಾರು ಕಾರ್ಮಿಕರು ಬಾಡಿಗೆ ಮನೆಗಳಲ್ಲಿ ಇದ್ದಾರೆ. ಆದರೆ ಶಾಸಕರು ಇದಾವುದಕ್ಕೂ ಸ್ಪಂದಿಸುವುದಿಲ್ಲ. ಆದ್ದರಿಂದ ನಮ್ಮ ಸ್ಪರ್ಧೆ ಅನಿವಾರ್ಯ. ಪೈಪೋಟಿ ನೀಡಬಲ್ಲುದೇ?
ಬಿಜೆಪಿ, ಕಾಂಗ್ರೆಸ್ ಉಳ್ಳವರ ಪಕ್ಷ. ಜನ ಪ್ರಬುದ್ಧರಾಗಿದ್ದು, ಮತವನ್ನು ಮಾರಿಕೊಳ್ಳಲಾರರು. ಹಣ ಹಂಚುವಿಕೆ ಇಲ್ಲಿ ಯಾವುದೇ ಪ್ರಭಾವ ಬೀಳದು. ಜನರನ್ನು ಮೋಸ ಮಾಡಲಾಗದು. ತ್ರಿಕೋನ ಸ್ಪರ್ಧೆ ಖಡಾಖಡಿ.
Related Articles
ಜೆಡಿಎಸ್ ಇಲ್ಲಿ ಸಂಘಟನೆಯಾಗಿ ಇಲ್ಲ. ಏಕವ್ಯಕ್ತಿ ಕೇಂದ್ರಿತ. ಆದ್ದರಿಂದ ನಮ್ಮ ಸ್ಪರ್ಧೆಗೆ ಪರಿಣಾಮ ಬೀರದು.
Advertisement
ಚುನಾವಣಾ ಸಿದ್ಧತೆ ಹೇಗಿದೆ?ಕಾರ್ಮಿಕ ಸಂಘಟನೆಗಳಿಗೆ ತಿಳಿಸಿದ್ದೇವೆ. ಸಭೆಗಳನ್ನು ಮಾಡಿ ದ್ದೇವೆ. ಯುವಜನತೆಗೆ ಉದ್ಯೋಗ ಒದಗಿಸುವುದೇ ನಮ್ಮ ಗುರಿ. ಹಾಗಾಗಿ ನಮಗೆ ಇಲ್ಲಿ ತೊಡಕಿಲ್ಲ. ಪ್ರಬಲ ಸ್ಪರ್ಧೆ ಮೂಲಕ ನಮ್ಮ ಶಕ್ತಿ ಪ್ರದರ್ಶನ ಆಗಲಿದೆ. – ಲಕ್ಷ್ಮೀ ಮಚ್ಚಿನ