ಶಿರಸಿ: ಕಳೆದ ಹತ್ತು ತಿಂಗಳಿಂದ ಶಿರಸಿಯಲ್ಲಿ ವೃತ್ತ ಪೊಲೀಸ್ ನಿರೀಕ್ಷಕರಾಗಿ ಕಾರ್ಯ ಮಾಡುತ್ತಿರುವ ರಾಮಚಂದ್ರ ನಾಯಕ ಅವರಿಗೆ ಮುಖ್ಯಮಂತ್ರಿ ಪದಕ ಪ್ರಕಟವಾಗಿದೆ.
ಮೂಲತಃ ಅಂಕೋಲಾದ ಅಗ್ರಗೋಣದವರಾದ ರಾಮಚಂದ್ರ ನಾಯಕ ಜನಪರ ಅಧಿಕಾರಿಯಾಗಿದ್ದು, ಅನೇಕ ಅಪರಾಧ ಚಟುವಟಿಕೆ ತಡೆದು, ಆರೋಪಿಗಳಿಗೂ ಕೋಳ ತೊಡಿಸಿದ್ದಾರೆ ಎಂಬುದು ಉಲ್ಲೇಖನೀಯ.
2005 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾದ ಮೈಸೂರಿನಲ್ಲಿ 1ವರ್ಷ ತರಬೇತಿ ಪಡೆದಿದ್ದಾರೆ. ನಂತರ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕಳಸ, ಚಿಕ್ಕಮಗಳೂರಿನಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದಾರೆ..
ಇದನ್ನೂ ಓದಿ : ಪಿರಿಯಾಪಟ್ಟಣ ತಾಲೂಕಿನಾದ್ಯಂತ ಗಾಳಿ ಮಳೆ ಅಬ್ಬರ, ಹಲವೆಡೆ ಹಾನಿ
2016 ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಪಡೆದ ಅವರು ಕುಮಟಾದ ಕರಾವಳಿ ಕಾವಲು ಪಡೆಯಲ್ಲಿ ಹಾಗೂ ಚಿಕ್ಕಮಗಳೂರಿನ ತರೀಕೆರೆಯಲ್ಲಿ ಹಾಗೂ ಉಡುಪಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಏಪ್ರೀಲ್ 2 ಪೊಲೀಸ್ ಧ್ವಜದಿನದಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.