Advertisement

ಬೆಲೆ ಏರಿಕೆ ವಿರುದ್ಧ ಸಿಪಿಐ ಆಕ್ರೋಶ

06:10 PM Apr 12, 2022 | Team Udayavani |

ಚಿತ್ರದುರ್ಗ: ಜನಸಾಮಾನ್ಯರು ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೆ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಭಾರತ ಕಮ್ಯುನಿಸ್‌ ಪಕ್ಷದಿಂದ ಸೋಮವಾರ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾನ್ಯ ಜನರು ನಿತ್ಯ ಬಳಕೆ ಮಾಡುವ ಸಕ್ಕರೆ, ಅಕ್ಕಿ, ಗೋಧಿ, ಸೀಮೆಎಣ್ಣೆ, ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ ದರಗಳನ್ನು ಗಗನಕ್ಕೇರಿಸಿವೆ. ಇದರಿಂದ ಸಾಮಾನ್ಯ ಜನರು ಕೂಲಿ ಕಾರ್ಮಿಕರು, ಕಾರ್ಮಿಕರು, ರೈತರು ಕೊಂಡುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಳದಿಂದ ಬಸ್‌ ದರಗಳು ಕೂಡ ಹೆಚ್ಚಾಗಿವೆ.

ಮ ಆರೋಗ್ಯ ರಕ್ಷಿಸಿಕೊಳ್ಳಲು ಔಷ ಗಳ ಬೆಲೆಯೂ ಹೆಚ್ಚಾಗಿದೆ. ಇಂತಹ ಪರಿಸ್ಥಿಯಲ್ಲಿ ಜನ ಹೇಗೆ ಬದುಕು ಕಟ್ಟಿಕೊಳ್ಳಬೇಕೆಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಕೇಂದ್ರದ ಸಂಯುಕ್ತ ಪ್ರಗತಿಪರ ಒಕ್ಕೂಟ ಸರ್ಕಾರದ ರಚನೆಗೆ ಎಡ ಪಕ್ಷಗಳು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಾದ ಉದ್ಯೋಗ ಖಾತ್ರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಒಕ್ಕಲುತನ, ಮೂಲ ಸೌಲಭ್ಯಗಳು, ಸಾಮಾಜಿಕ ನ್ಯಾಯ ಮುಂತಾದ ಹಲವು ಜನಪರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಬಾಹ್ಯ ಬೆಂಬಲ ನೀಡಿದ್ದವು. ಆದರೆ ಒಪ್ಪಿಕೊಂಡ ಕಾರ್ಯಕ್ರಮಗಳನ್ನು ಸರ್ಕಾರ ಗಾಳಿಗೆ ತೂರಿದೆ. ಸರ್ಕಾರ ಅಧಿ ಕಾರಕ್ಕೆ ಬರುವಾಗ ಒಪ್ಪಿಕೊಂಡ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು.ಅಗತ್ಯ ವಸ್ತುಗಳ ಬೆಲೆಗಳನ್ನು ಕೂಡಲೇ ಕಡಿಮೆ ಮಾಡಬೇಕು.

ಕಾಳಸಂತೆಯಲ್ಲಿ ಮಾರಾಟವಾಗುವ ಗ್ಯಾಸ್‌ ಮತ್ತು ಸೀಮೆಎಣ್ಣೆ ಸಾಮಾನ್ಯ ಜನರಿಗೆ ಸಿಗುವಂತಾಗಬೇಕು. ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು. ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ, ಜನರ ಸಮಸ್ಯೆಗಳನ್ನು ಮರೆಮಾಚಿ ಮುಂಬರುವ ಚುನಾವಣೆಗಳಲ್ಲಿ ಮತ್ತೆ ವಂಚಿಸಲು ಭಾವನಾತ್ಮಕ ವಿಚಾರಗಳನ್ನು ಮುಂದಿಡುತ್ತಿದ್ದಾರೆ. ಭಾವನಾತ್ಮಕ ಧಾರ್ಮಿಕ ಆಚಾರ ವಿಚಾರಗಳನ್ನು ಹುಟ್ಟುಹಾಕಿ ಸಹೋದರರಂತೆ ಬದುಕುತ್ತಿರುವ ಹಿಂದೂ- ಮುಸ್ಲಿಂ- ಕ್ರೈಸ್ತರ ನಡುವೆ ಕೋಮು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮೊದಲು ಇದು ನಿಲ್ಲಬೇಕು ಎಂದು ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ, ರಾಜ್ಯ ಮಂಡಳಿ ಸದಸ್ಯ ಉಮಾಪತಿ, ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್‌ ಬಾಬು, ಮುಖಂಡರಾದ ಬಸವರಾಜು, ಕಾರ್ಯದರ್ಶಿ ದೊಡ್ಡಉಳ್ಳಾರ್ತಿ ಕರಿಯಣ್ಣ, ಎಸ್‌ .ಸಿ. ಕುಮಾರ್‌, ಜಯದೇವಮೂರ್ತಿ, ಜಾಫರ್‌ ಷರೀಫ್‌, ಸತ್ಯಕೀರ್ತಿ, ಕುಮಾರಸ್ವಾಮಿ, ಅಮಿನಾಥ್‌, ಚಂದ್ರಪ್ಪ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next