ತಿರುವನಂತಪುರ: ಕೇರಳ ಸಿಪಿಎಂ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೊಡಿಯೇರಿ ಬಾಲಕೃಷ್ಣ ನ್ ರಾಜೀನಾಮೆ ನೀಡಿದ್ದಾರೆ. ಮುಂದಿನ ತಿಂಗಳು ದೇವರ ಸ್ವಂತ ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಮುಂದಿನ ಏಪ್ರಿಲ್-ಮೇ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ, ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಅವರ ಪುತ್ರ ಬಿನೀಶ್ ಕೊಡಿಯೇರಿ ಬಂಧನವಾಗಿರುವಂತೆಯೇ ಬಾಲಕೃಷ್ಣನ್ ಶುಕ್ರವಾರ ಹುದ್ದೆ ತೊರೆದಿದ್ದಾರೆ.
ದೀರ್ಘ ಕಾಲದಿಂದ ಅನಾರೋಗ್ಯಪೀಡಿತರಾಗಿರುವ ತಾವು ಚಿಕಿತ್ಸೆಯ ಕಾರಣದಿಂದ ಹುದ್ದೆ ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ನಿರ್ಧಾರವನ್ನು ಮನ್ನಿಸುವುದಾಗಿ ಸಿಪಿಎಂ ಹೇಳಿದರೂ ಕೊಡಿಯೇರಿ ನಿರ್ಧಾರ ಭಾರಿ ಸವಾಲುಗಳನ್ನು ತಂದೊಡ್ಡಲಿದೆ.
ಎಲ್‌ಡಿಎಫ್ ಸಂಚಾಲಕ ಎ.ವಿಜಯರಾಘವನ್ ಅವರಿಗೆ ಕೊಡಿಯೇರಿ ನಿಭಾಯಿಸುತ್ತಿರುವ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಇದನ್ನೂ ಓದಿ:ಪ್ರತೀಕಾರ: ಗಡಿಯಲ್ಲಿ ಮತ್ತೆ ಅಟ್ಟಹಾಸ-ಭಾರತೀಯ ಸೇನೆಯ ದಾಳಿಗೆ ಎಂಟು ಪಾಕ್ ಸೈನಿಕರು ಸಾವು
ಬಿನೀಶ್ ಬಂಧನ ಮತ್ತು ಕಳೆದ ವಾರ ಕೇಂದ್ರ ಸಂಸ್ಥೆಗಳಿಂದ ತಿರುವನಂತಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆದ ಬಳಿಕ ಕೊಡಿಯೇರಿ ಅವರನ್ನು ಪಕ್ಷದಲ್ಲಿ ರಕ್ಷಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಕೇರಳ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳಿಗೆ ಸಹಕರಿಸದೇ ಇದ್ದದ್ದೂ ಪ್ರಶ್ನೆಗೆ ಕಾರಣವಾಗಿತ್ತು. ಬಾಲಕೃಷ್ಣನ್‌ರ ಹಿರಿಯ ಪುತ್ರ ಬಿನೊಯ್ ಮುಂಬೈನ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೂ ಗುರಿಯಾಗಿದ್ದಾರೆ.