Advertisement

ವಿರೋಧಿಸುವವರ ಹತ್ಯೆ ಸಿಪಿಎಂ ನೀತಿ : ವಿ.ಎಂ.ಸುಧೀರನ್‌

01:00 AM Feb 27, 2019 | Team Udayavani |

ಕಾಸರಗೋಡು: ವಿರೋಧಿಸುವವರನ್ನು ಹತ್ಯೆಗೈಯುವುದೇ ಸಿಪಿಎಂ ಅನುಸರಿಸುತ್ತಿರುವ ರಾಜಕೀಯ ನೀತಿ ಯಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಎಂ.ಸುಧೀರನ್‌ ಆರೋಪಿಸಿದರು.

Advertisement

ಪೆರಿಯದಲ್ಲಿ ಇಬ್ಬರು ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರನ್ನು ಹತ್ಯೆಗೈದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿದ್ಯಾನಗರದಲ್ಲಿರುವ ಡಿಸಿಸಿ ಕಾರ್ಯಾಲಯದ ಮುಂದೆ ಮಂಗಳವಾರ ಬೆಳಗ್ಗೆ ಆರಂಭಗೊಂಡ 48 ಗಂಟೆಗಳ ನಿರಾಹಾರ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ಈ ಗೌರವ ಕಳೆದುಕೊಳ್ಳುವಂತಾಗಲು ಸಿಪಿಎಂ ಪ್ರಯತ್ನಿಸುತ್ತಿದೆ. ಸಿಪಿಎಂ ನವೋತ್ಥಾನ ಮೌಲ್ಯಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿಲ್ಲ. ಬದಲಾಗಿ ಕೊಲೆ ರಾಜ ಕೀಯವೇ ಅದರ ಮುಖ್ಯ ಗುರಿಯಾಗಿದೆ. ರಾಜ್ಯದಲ್ಲಿ ಸಿಪಿಎಂ ಅಧಿಕಾರಕ್ಕೆ ಬಂದ ಬಳಿಕ 20ರಷ್ಟು ಕೊಲೆ ಪ್ರಕರಣಗಳು ನಡೆದಿವೆೆ. ಇದರಲ್ಲಿ ಆರೋಪಿಗಳಾಗಿರುವವರು ಮುಖ್ಯಮಂತ್ರಿ ಪ್ರತಿನಿಧಿಕರಿಸುವ ಪಕ್ಷ ದವರೇ ಆಗಿದ್ದಾರೆ. ಕೊಲೆ ನಡೆದ ಬಳಿಕ ಶಾಂತಿ ಸಭೆಯನ್ನು ನಾಮ ಮಾತ್ರಕ್ಕೆ ನಡೆಸಲಾಗುತ್ತಿದೆ. ಅದರಿಂದೇನೂ ಪ್ರಯೋಜನ ವಾಗುತ್ತಿಲ್ಲ. ಪೆರಿಯ ಕಲೊÂàಟ್‌ನಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಇದೀಗ ಬಂಧಿತ ರಾಗಿರುವವರು ನೈಜ ಆರೋಪಿಗಳಲ್ಲ.

ಯಥಾರ್ಥ ಆರೋಪಿ ಗಳನ್ನು ರಕ್ಷಿಸಲು ಸಿಪಿಎಂ ಪ್ರಯತ್ನಿಸುತ್ತಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವುದು ಅನಿವಾರ್ಯವೆಂದು ವಿ.ಎಂ.ಸುಧೀರನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next