ರಬಕವಿ ಬನಹಟ್ಟಿ: ದೇಶದಲ್ಲಿ ಕರ್ನಾಟಕ ಪೊಲೀಸ್ ಅತ್ಯಂತ ದಕ್ಷತೆಯಿಂದ ಕೂಡಿದ ಸುಭದ್ರವಾದ ವ್ಯವಸ್ಥೆಯಾಗಿದೆ. ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಬನಹಟ್ಟಿಯ ಸಿಪಿಐ ಜೆ.ಕರುಣೇಶಗೌಡ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ಡಾ.ಸ.ಜ.ನಾಗಲೋಟಿಮಠ ಸಾಂಸ್ಕೃತಿಕ ಭವನದಲ್ಲಿ ಪಿಎಸ್‌ಐ ಆಗಿ ಆಯ್ಕೆಯಾದ ಸ್ಥಳೀಯ ಸಾಧರನ್ನು ಸನ್ಮಾನಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧರಕನ್ನು ಸನ್ಮಾನಿಸುವ ಅಗತ್ಯವಿದೆ. ಇದು ಮುಂಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಯಾವುದೆ ವೃತ್ತಿಯಲ್ಲಿ ಸತತ ಪ್ರಯತ್ನ ಮತ್ತು ಕಾರ್ಯದಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಸಾಧನೆ ಸಾಧ್ಯ ಎಂದು ಜಿ.ಕರುಣೇಶಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಿ, ಸಾಧನೆಗೆ ಕೊನೆ ಎಂಬುದು ಇಲ್ಲ. ಪಿಎಸ್‌ಐ ಹುದ್ದೆ ಕೊನೆಯದಲ್ಲ. ಇದಕ್ಕಿಂತ ಹೆಚ್ಚಿನ ಹುದ್ದೆಗಳು ಇವೆ. ಅವುಗಳಿಗಾಗಿ ಇನ್ನಷ್ಟು ಪ್ರಯತ್ನಿಸಿ ಎಂದರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಆಗಿ ನೇಮಕೊಂಡ ದೀಪಾ ಹಿರೇಮಠ, ಸಾಗರ ಕಮಲದಿನ್ನಿ, ಅಕ್ಷಯ ದೇವಾಡಿಗ, ಸಾಧಿಯಾ ಗುರ್ಲಹೊಸೂರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಮ.ಕ. ಮೇಗಾಡಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ರಜನಿ ಶೇಠೆ, ಪ್ರಕಾಶ ಹೋಳಗಿ, ಮನೋಹರ ಸುಟ್ಟಟ್ಟಿ, ಪ್ರಾಚಾರ್ಯ ಬಿ.ಆರ್.ಗೊಡ್ಡಾಳೆ, ವಿನಾಯಕ ತಾಂಬಟ ಇದ್ದರು.
ಗೋಪಾಲ ಭಟ್ಟಡ ಸ್ವಾಗತಿಸಿದರು. ಕನ್ಯಾಕುಮಾರಿ ಹೂಗಾರ ನಿರೂಪಿಸಿದರು. ಕಿರಣ ಆಳಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಈರಣ್ಣ ಜಿಗಜಿನ್ನಿ, ಸೋಮು ಹಿರೇಮಠ, ಪ್ರೊ.ಗೀತಾ ಸಜ್ಜನ, ಜ್ಯೋತಿ ಸಜ್ಜಿ, ಲಕ್ಷ್ಮಿ ಕರಿಗಾರ, ಶಿರೋಳ, ವಿಶ್ವಜ ಕಾಡದೇವರ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ : ಕಳ್ಳತನ ಮಾಡದಂತೆ ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಂದ ಮಗ