ಚಿಕ್ಕಬಳ್ಳಾಪುರ: ಪೋಲಿಸ್ ಇಲಾಖೆಯಲ್ಲಿ ಆರಕ್ಷಕ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಐಷಾರಾಮಿ ಜೀವನ ನಡೆಸುತ್ತಾರೆ ಆದರೇ ಇಲ್ಲಿಯೊಬ್ಬ ನಿವೃತ್ತ ಪೋಲಿಸ್ ಅಧಿಕಾರಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದನ್ನು ಕಂಡ ಜಿಲ್ಲೆಯ ಚಿಂತಾಮಣಿ ನಗರದ ಸಿಪಿಐ ಆನಂದ್‍ಕುಮಾರ್ ಮತ್ತು ಸಿಬ್ಬಂದಿ ನಿವೃತ್ತ ಪೋಲಿಸ್ ಅಧಿಕಾರಿಗೆ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.
ಹೌದು ಪೋಲಿಸರು ಎಂದರೇ ಅವರಿಗೇನಪ್ಪ ಎಲ್ಲರು ಹೆದರುತ್ತಾರೆ ಅವರಿಗೆ ಸಕಲ ಸೌಲಭ್ಯ ಸಿಗುತ್ತದೆ ಎಂದು ಜನ ಅಂದುಕೊಳ್ಳುವುದು ಸರ್ವೇ ಸಾಮಾನ್ಯ ಆದರೇ ಪೋಲಿಸ್ ಇಲಾಖೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮಧುಸುಧನ್‍ರಾವ್ ಮಾನಸಿಕ ಖಿನ್ನತೆಗೊಳಗಾಗಿ ಚಿಂದಿ ಆಯುವ ಜೊತೆಗೆ ಭಿಕ್ಷೆ ಬೇಡುತ್ತಿದ್ದರು ಅದನ್ನು ಕಂಡು ಚಿಂತಾಮಣಿ ನಗರ ಪೋಲಿಸ್ ಠಾಣೆಯ ಸಿಪಿಐ ಆನಂದ್ ಕುಮಾರ್ ಮತ್ತು ಸಿಬ್ಬಂದಿ ಮಧುಸುಧನ್‍ರಾವ್ ಅವರನ್ನು ಠಾಣೆಗೆ ಕರೆದುಕೊಂಡು ಮೊದಲು ಗಡ್ಡ ಮತ್ತು ಕೂದಲು ತೆಗೆಸಿ ಹೊಸ ಬಟ್ಟೆಯನ್ನು ಖರೀದಿಸಿ ಕೊಡುವ ಜೊತೆಗೆ ಹೊಸ ಜೀವನ ನಡೆಸಲು ನೆರವು ಕಲ್ಪಿಸಲು ಮುಂದಾಗಿದ್ದಾರೆ ಸಿಪಿಐ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.
ನಿವೃತ್ತ ಪೋಲಿಸ್ ಅಧಿಕಾರಿ ಮಧುಸುಧನ್‍ರಾವ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ, ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಕೋಲಾರ ಜಿಲ್ಲೆಯ ಗಲ್‍ಪೇಟ್, ರಾಯಲ್ ಪಾಡ್, ಮಾಸ್ತಿ ಹಾಗೂ ಮಾಲೂರು ಸಹಿತ ವಿವಿಧ ಪೋಲಿಸ್‍ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಇನ್ನೂ ನಿವೃತ್ತಿಯಾಗುವ ವೇಳೆಯಲ್ಲಿ ಅವರ ಪತ್ನಿ ಮೃತಪಟ್ಟಿದ್ದರಿಂದ ಅವರ ಜೀವನದಲ್ಲಿ ಸಿಡಿಲು ಬಡಿದಂತಾಗಿದೆ ಮಾನಸಿಕ ಖಿನ್ನತೆಗೊಳಗಾಗಿ ಮನೆಯನ್ನು ತೈಜಿಸಿ ಬೀದಿ ಬೀದಿ ಅಲೆದು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ದೃಶ್ಯವನ್ನು ಕಂಡು ಸ್ವತಃ ಪೋಲಿಸ್ ಇಲಾಖೆಯ ಅಧಿಕಾರಿ ಸಿಪಿಐ ಆನಂದ್‍ಕುಮಾರ್ ಸಹಾಯ ಮಾಡಲು ಮುಂದಾಗಿದ್ದಾರೆ.
ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಧುಸುಧನ್ ರಾವ್ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾರೆ ಅವರಿಗೆ ನಮ್ಮ ಸಿಪಿಐ ಆನಂದ್‍ಕುಮಾರ್ ಅವರು ಹೊಸ ಜೀವನ ನಡೆಸಲು ಸಹಕಾರ ನೀಡಿದ್ದಾರೆ ಮಾನಸಿಕ ತಜ್ಞ ವೈದ್ಯರ ಮೂಲಕ ಅವರ ಆರೋಗ್ಯವನ್ನು ತಪಾಸಣೆ ನಡೆಸಿ ಮಕ್ಕಳೊಂದಿಗೆ ಅಥವಾ ಪ್ರತ್ಯೇಕವಾಗಿ ಜೀವನ ನಡೆಸಲು ವ್ಯವಸ್ಥೆ ಮಾಡುತ್ತೇವೆ.
ಮಿಥುನ್‍ಕುಮಾರ್ ಜಿಲ್ಲಾ ಎಸ್ಪಿ ಚಿಕ್ಕಬಳ್ಳಾಪುರ.
ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಧುಸುಧನ್ ರಾವ್ ಅವರನ್ನು ಹೊಸ ಜೀವನ ನಡೆಸಲು ಕೈಲಾದಷ್ಟು ಸಹಾಯ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಒಳ್ಳೆಯ ಜೀವನ ನಡೆಸುವಂತಾಗಲಿ ಎಂಬುದು ತಮ್ಮ ಬಯಕೆ ಚಿಂತಾಮಣಿ ನಗರದಲ್ಲಿ ಭದ್ರತಾ ಸಿಬ್ಬಂದಿ ಅಥವಾ ಬೇರೆ ಕೆಲಸ ನೀಡಲು ಚಿಂತನೆ ನಡೆಸಿದ್ದೇವೆ.
ಆನಂದ್‍ಕುಮಾರ್ ಸಿಪಿಐ ಚಿಂತಾಮಣಿ