Advertisement

Channapatana: ಮೈತ್ರಿ ಮುರಿಯಲು ರೆಡಿಯಾದ ಸಿ.ಪಿ.ಯೋಗೇಶ್ವರ್‌!

08:57 PM Oct 15, 2024 | Team Udayavani |

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಚುರುಕಾಗಿದೆ. ಟಿಕೆಟ್‌ಗಾಗಿ ಜೆಡಿಎಸ್‌-ಬಿಜೆಪಿ ಹಗ್ಗಜಗ್ಗಾಟದ ನಡುವೆಯೂ ಮೈತ್ರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಬುಧವಾರ ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆ ಕರೆದಿದ್ದಾರೆ.

Advertisement

ಮೊದಲಿನಿಂದಲೂ ತಾವಿರುವ ಪಕ್ಷಗಳಿಗೇ ಟಾಂಗ್‌ ಕೊಡುವಲ್ಲಿ ಪರಿಣತರಾಗಿರುವ ಯೋಗೇಶ್ವರ್‌, ಬಿಜೆಪಿ ಕೇಂದ್ರ ವರಿಷ್ಠರ ಕಿವಿ ಮಾತಿನ ನಡುವೆಯೂ ತಮ್ಮ ಬೆಂಬಲಿಗರ ಸಭೆ ಕರೆಯುವ ಮೂಲಕ ಬಂಡಾಯದ ಕಹಳೆ ಊದುತ್ತಿದ್ದಾರೆ. ಮೈತ್ರಿ ಟಿಕೆಟ್‌ ತಮಗೇ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯದ ಅಸ್ತ್ರ ಪ್ರಯೋಗಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಬಿಜೆಪಿ ರಾಜ್ಯ ನಾಯಕರು ಉಪಚುನಾವಣೆಯಲ್ಲಿ ಯೋಗೇಶ್ವರ್‌ಗೆ ಟಿಕೆಟ್‌ ಬೇಕು ಎಂದು ಶಿಫಾರಸು ಮಾಡಿದ್ದರೂ, ಕುಮಾರಸ್ವಾಮಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಟಿಕೆಟ್‌ ಬಿಟ್ಟುಕೊಟ್ಟರೆ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಕಷ್ಟ ಎಂದು ಜಿಲ್ಲಾ ಬಿಜೆಪಿ ಘಟಕ ಆತಂಕ ವ್ಯಕ್ತಪಡಿಸಿದೆ. ಈ ಎಲ್ಲಾ ಬೆಳ ವಣಿಗೆಗಳ ನಡುವೆ ಯೋಗೇಶ್ವರ್‌ ಸಭೆ ಸಾಕಷ್ಟು ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next