ಮಧುಗಿರಿ: ಗೋರಕ್ಷಕರ ಅನುಮಾನದಿಂದ ರೈತರಿಗೆ ಸೇರಬೇಕಾದ ಸದೃಢವಾದ 60 ಹಸುಗಳು ಮಾಲೀಕರಿಗೆ ತಲುಪದೇ ಗೋಶಾಲೆಗೆ ಕಳುಹಿಸಿದ ಘಟನೆ ನಡೆದಿದೆ.
ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ 60 ಹಸು ಗಳನ್ನು ತುಂಬಿಕೊಂಡಿದ್ದ 6 ಕ್ಯಾಂಟರ್ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು, ಮೇಲಧಿಕಾರಿಗಳ ಆದೇಶದಂತೆ ತಾಲೂಕಿನ ರಾಮದೇವರ ಬೆಟ್ಟದ ಬಳಿಯ ಸುರಭಿ ಗೋಶಾಲೆಗೆ ಕಳುಹಿಸಿದ್ದಾರೆ.
ಘಟನೆ ಹಿನ್ನೆಲೆ: ತಾಲೂಕಿನ ಯರಗುಂಟೆ ಗ್ರಾಮದ ಯುವಕ ತಿಮ್ಮರಾಜು ಹೇಳುವಂತೆ ಆರೂಢಿ ಬಳಿಯಿಂದ ಮಹಾರಾಷ್ಟ್ರಕ್ಕೆ ಸೇರಿದ ಈ ಹಸು ತುಂಬಿದ ಲಾರಿಯನ್ನು ತಡೆದರೂ ನಿಲ್ಲಿಸದ ಕಾರಣ ಸ್ನೇಹಿತರ ಸಹಕಾರದಿಂದ ಪಟ್ಟಣದ ಟಿವಿವಿ ಕಾಲೇಜು ಬಳಿ ತಡೆದಿದ್ದಾರೆ. ಸ್ಥಳಕ್ಕೆ ಪೊಲೀಸರು, ಮಾಧ್ಯಮದವರು ಬಂದಿದ್ದು ಹಸುಗಳನ್ನು ತಪಾಸಣೆ ನಡೆಸಿದ್ದಾರೆ. ಆದರೆ ಗೋರಕ್ಷಕರ ಅನುಮಾನದಂತೆ ಇವು ಯಾವು ಕೂಡ ಕಸಾಯಿಖಾನೆಗೆ ಸಾಗಿಸುವ ಹಸುವಾಗಿರಲಿಲ್ಲ. ಬದಲಿಗೆ ಸದೃಢಕಾಯದ ಹಸುಗಳಾಗಿದ್ದು, ಒಂದೊಂದು 80 ಸಾವಿರದಿಂದ 1 ಲಕ್ಷ ಬೆಲೆ ಬಾಳುತ್ತವೆ. ಇಂತಹ ಹಸುಗಳನ್ನು ಚಿಂತಾಮಣಿಯ ಗೋವುಗಳ ಸಂತೆಯಲ್ಲಿ ರೈತರಿಂದ ಖರೀದಿಸಿ ತಂದಿದ್ದೀವಿ ಎಂದು ಹಲವು ರೈತರು ಕಣ್ಣೀರು ಹಾಕಿದ್ದಾರೆ.
ಹಸುಗಳ ಮಾಲೀಕ ಸುಖದೇವ್ ಹೇಳುವಂತೆ ಇವು ಕಡಿಯುವ ಹಸುಗಳಲ್ಲ, ನಾವು ರೈತರಾಗಿದ್ದು ಸಾಕಲು ಕೊಂಡೊಯ್ಯುತ್ತಿದ್ದೇವೆ. ಕೆಲವರು ಹಸುಗಳನ್ನು ರೈತರಿಗೆ ಮಾರಾಟ ಮಾಡುತ್ತಾರೆ ಎಂದು ಸಂತೆಯಲ್ಲಿ ಭಾಗವಹಿಸಿದ್ದ ರಶೀದಿ ತೋರಿಸಿ ನಮ್ಮನ್ನು ನಂಬಿ. ಇವು ಬಹು ಸೂಕ್ಷ್ಮ ಹಸುಗಳು, ಆರೋಗ್ಯ ಸಮಸ್ಯೆಯಾದರೆ ಲಕ್ಷಾಂತರ ರೂ. ನಷ್ಟವಾಗುತ್ತದೆ ಎಂದು ಕಾಲಿಗೆ ಬೀಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆದರೆ, ಸ್ಥಳಕ್ಕೆ ಬಂದಿದ್ದ ಪಿಎಸ್‌ಐ ವಿಜಯ್‌ಕುಮಾರ್, ಡಿವೈಎಸ್ಪಿ ಹಾಗೂ ತಹಶೀಲ್ದಾರ್ ಗೆ ಮಾಹಿತಿ ನೀಡಿದ್ದರು. ಅವರ ಮೌಖೀಕ ಆದೇಶದಂತೆ ಗೋವುಗಳನ್ನು ಸೋಮವಾರದವರೆಗೂ ಸುರಭಿ ಗೋಶಾಲೆಯಲ್ಲಿಡಲು ಸೂಚಿಸಿ ಹಸುಗಳನ್ನು ಸಂಜೆ ಗೋಶಾಲೆ ಕಡೆ ಕಳುಹಿಸಿದರು.
ಮೇವಿಲ್ಲ, ಯಾರು ಹೊಣೆ: ಈ ಹಸುಗಳು ಕನಿಷ್ಠ 80 ಸಾವಿರದವರೆಗೂ ಬೆಲೆ ಬಾಳುತ್ತವೆ. ಇವು ಎಚ್ ಎಫ್ ತಳಿಯ ಹಸುಗಳಾಗಿದ್ದು, ಕೊಂಚ ಆರೋಗ್ಯ ಏರುಪೇರಾದರೂ ಸಾವಿಗೀಡಾಗುವ ಸಂಭವ ಹೆಚ್ಚು. ಅಧಿಕಾರಿಗಳು ಹೇಳುವಂತೆ ಇವರಲ್ಲಿ ಯಾವುದೇ ದಾಖಲೆಗಳಿಲ್ಲ. ಖರೀದಿಸಿದ ರೈತ ಯಾವ ದಾಖಲೆ ಕೊಡಲು ಸಾಧ್ಯ, ಇಂತಹ ಘಟನೆಗಳಿಂದ ರೈತರು ಸಾಕುವ ಹಸುಗಳನ್ನೂ ಕಾಸಾಯಿಖಾನೆಗೆ ಹೋಗುವ ಹಸುಗಳೆಂದು ಭಾವಿಸಿ ಕಾನೂನು ಕ್ರಮಕ್ಕೆ ಮುಂದಾದರೆ ರೈತರಿಗಾಗುವ ನಷ್ಟಕ್ಕೆ ಯಾರು ಹೊಣೆ. ಮೇವಿಲ್ಲದೆ ಹಸುಗಳಿಗೆ ಈಗ ತಾಲೂಕು ಆಡಳಿತ ಮೇವಿನ ಸೌಲಭ್ಯ ಕಲ್ಪಿಸಬೇಕಿದ್ದು, ರಾತ್ರಿ ಕಾಯುವ ಹೊಣೆ ಸ್ಥಳೀಯ ಕಂದಾಯಾಧಿಕಾರಿಗಳದ್ದಾಗಿದೆ. ಬೆಳಗ್ಗೆ ಸೂಕ್ತ ದಾಖಲೆ ಪಡೆದು ನಂತರ ಹಸುಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಶಾಲೆಯಲ್ಲಿ ಮೇವಿಲ್ಲ, ಸಮಸ್ಯೆಗೆ ಯಾರು ಹೊಣೆ : ಈ ಹಸುಗಳು ಕನಿಷ್ಠ 80 ಸಾವಿರದವರೆಗೂ ಬೆಲೆ ಬಾಳುತ್ತವೆ. ಇವು ಎಚ್‌ಎಫ್ ತಳಿಯ ಹಸುಗಳಾ ಗಿದ್ದು, ಕೊಂಚ ಆರೋಗ್ಯ ಏರುಪೇರಾದರೂ ಸಾವಿಗೀಡಾಗುವ ಸಂಭವ ಹೆಚ್ಚು. ಅಧಿಕಾರಿಗಳು ಹೇಳುವಂತೆ ಇವರಲ್ಲಿ ಯಾವುದೇ ದಾಖಲೆ ಗಳಿಲ್ಲ. ಖರೀದಿಸಿದ ರೈತ ಯಾವ ದಾಖಲೆ ಕೊಡಲು ಸಾಧ್ಯ, ಇಂತಹ ಘಟನೆಗಳಿಂದ ರೈತರು ಸಾಕುವ ಹಸುಗಳನ್ನೂ ಕಾಸಾಯಿಖಾನೆಗೆ ಹೋಗುವ ಹಸುಗಳೆಂದು ಭಾವಿಸಿ ಕಾನೂನು ಕ್ರಮಕ್ಕೆ ಮುಂದಾದರೆ ರೈತರಿಗಾಗುವ ನಷ್ಟಕ್ಕೆ ಯಾರು ಹೊಣೆ. ಮೇವಿಲ್ಲದೆ ಹಸುಗಳಿಗೆ ಈಗ ತಾಲೂಕು ಆಡಳಿತ ಮೇವಿನ ಸೌಲಭ್ಯ ಕಲ್ಪಿಸ ಬೇಕಿದ್ದು, ರಾತ್ರಿ ಕಾಯುವ ಹೊಣೆ ಸ್ಥಳೀಯ ಕಂದಾಯಾಧಿಕಾರಿಗಳದ್ದಾಗಿದೆ. ಬೆಳಗ್ಗೆ ಸೂಕ್ತ ದಾಖಲೆ ಪಡೆದು ನಂತರ ಹಸುಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಶಾಲೆ ಸ್ಪಷ್ಟನೆ : ಇವುಗಳು ಸಾಕುವ ಹಸುಗಳಾಗಿದ್ದು, ಇಲ್ಲಿವ ರೆಗೂ ತರಬೇಕಾದ ಅವಶ್ಯಕತೆ ಯಿರಲಿಲ್ಲ. ಬದಲಿಗೆ ಸ್ಥಳಕ್ಕೆ ಪಶುವೈದ್ಯರನ್ನು ಕರೆಸಿ ಸದೃಢ ತೆಯ ಬಗ್ಗೆ ಖಚಿತಪಡಿಸಿ ಕೊಂಡು ರೈತರೊಂದಿಗೆ ಕಳುಹಿಸಬಹುದಿತ್ತು. ಗೋಶಾಲೆಯಲ್ಲೂ ಸಾಕಷ್ಟು ಮೇವಿಲ್ಲದ ಕಾರಣ ಕೆಲವೊಮ್ಮೆ ಅಧಿಕಾರಿಗಳು ಮಾನವೀಯತೆ ಯಲ್ಲಿ ಇಂತಹ ಪ್ರಕರಣವನ್ನು ನಿಭಾಯಿಸಬೇಕು ಎಂದು ಸುರಭಿ ಗೋಶಾಲೆಯ ಮಧುಸೂದನ್ ತಿಳಿಸಿದರು.