Advertisement
ಭಾರತದಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟುವಲ್ಲಿ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಹಾಗೂ ತಳಮಟ್ಟದ ಕಾರ್ಯಗಳು ಸಹಕಾರಿಯಾಗಿವೆ ಎಂದು ಕೈಪಿಡಿಯಲ್ಲಿ ಸರ್ಕಾರ ಹೇಳಿಕೊಂಡಿದೆ. ನಾಳೆ(ಮಾರ್ಚ್ 1) ಬೆಳಿಗ್ಗೆ 9 ಗಂಟೆಯಿಂದ ಕೋವಿನ್ 2.0 ಪೋರ್ಟಲ್‌ನಲ್ಲಿ ನೋಂದಣಿ ಕಾರ್ಯ ಶುರುವಾಗಲಿದೆ. ಹೆಚ್ಚಿನ ಮಾಹಿತಿಗಾಗಿ cowin.gov.in ಭೇಟಿ ನೀಡಬಹುದೆಂದು ಕೇಂದ್ರ ಸರ್ಕಾರ ಕೈಪಿಡಿಯಲ್ಲಿ ತಿಳಿಸಿದೆ.
Related Articles
Advertisement
ಆರು ವಾರಗಳ ಕಾಲ ನಡೆಯಲಿರುವ ಎರಡನೇ ಹಂತದ ಲಸಿಕಾ ಅಭಿಯಾನದಲ್ಲಿ 45 ವರ್ಷ ಮೇಲ್ಪಟ್ಟವರು ಹಾಗೂ 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದೆ. ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರು ಹಾಗೂ 59 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಆದರೆ, ಇವರು ಈ ಹಿಂದೆ ಚಿಕತ್ಸೆ ಪಡೆದ ದಾಖಲೆಗಳನ್ನು ತೋರಿಸಬೇಕು. ಉದಾಹರಣೆಗೆ ಲಸಿಕೆ ಪಡೆಯಲು ಇಚ್ಛಿಸಿದ ವ್ಯಕ್ತಿ ಕಳೆದ ವರ್ಷ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರೆ ಅದರ ದಾಖಲೆಗಳನ್ನು ಸಲ್ಲಿಸಬೇಕು.