ನಗರ : ಪುತ್ತೂರು ನಗರ ಕೇಂದ್ರ ತವಾಗಿಯೂ ಗೋ ಕಳ್ಳತನ ಪ್ರಕರಣ ಗಳು ಹೆಚ್ಚುತ್ತಿದ್ದು, ಈ ವ್ಯವಸ್ಥಿತ ಜಾಲ ವನ್ನು ಭೇದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಹಿಂದೂಪರ ಸಂಘಟನೆ ಗಳು ಗುರುವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿವೆ.
ಬುಧವಾರ ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರುಗದ್ದೆಯಿಂದ ತಡರಾತ್ರಿ ಹೋರಿಯೊಂದರ ಕೊಂಬಿಗೆ ಹಗ್ಗಕಟ್ಟಿ ಎಳೆದು ಅದನ್ನು ಕಂದು ಬಣ್ಣದ ಸ್ಕಾರ್ಪಿಯೋ ವಾಹನಕ್ಕೆ ತುಂಬಿಸಲು 6 ಮಂದಿ ಮುಸುಕುಧಾರಿಗಳ ತಂಡ ಯತ್ನಿಸಿತ್ತು. ಈ ಕುರಿತು ಮಾಹಿತಿ ದೊರೆತ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಬಂದಾಗ ಗೋ ಕಳ್ಳರು ಕಾರ್ಯಕರ್ತರತ್ತ ಕಲ್ಲು ಎಸೆದು, ತಲವಾರು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಬೀಟ್ ಪೊಲೀಸರು ಸ್ಥಳಕ್ಕೆ ಬಂದಾಗ ಹೋರಿಯನ್ನು ಬಿಟ್ಟು ಕಳ್ಳರು ವಾಹನ ಸಹಿತ ಪರಾರಿಯಾಗಿದ್ದು, ಪೊಲೀಸರು ವಾಹನವನ್ನು ಬೆನ್ನಟ್ಟಿದರೂ ಪ್ರಯೋಜನವಾಗಿಲ್ಲ. ಹೋರಿಯನ್ನು ಬಜರಂಗದಳ ಕಾರ್ಯಕರ್ತರು ನಗರ ಪೊಲೀಸ್ ಠಾಣೆಗೆ ತಂದು ಕಟ್ಟಿ ಹಾಕಿದ್ದಾರೆ.
ಬಜರಂಗ ದಳ ಕಾರ್ಯಕರ್ತರು ಮತ್ತು ಪ್ರಮುಖರು ಪುತ್ತೂರು ನಗರ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುವುದು ಎಂದು ನಗರ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಸಂಘಟನೆಯ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ದೂರು ನೀಡುವ ಸಂದರ್ಭ ನ್ಯಾಯವಾ ದಿಗಳಾದ ಜಯಾನಂದ, ಮಾಧವ ಪೂಜಾರಿ, ಬಜರಂಗ ದಳ ಪ್ರಮುಖರಾದ ಶ್ರೀಧರ ತೆಂಕಿಲ, ನಿತಿನ್ ನಿಡ್ಪಳ್ಳಿ, ಜಯಂತ ಕುಂಜೂರುಪಂಜ, ಪ್ರವೀಣ್ ಕಲ್ಲೇಗ, ತಾ. ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಜಿತೇಶ್ ಬಲ್ನಾಡು, ವಿಶಾಖ್ ಸಸಿಹಿತ್ಲು ಮೊದಲಾದವರಿದ್ದರು.
ಪುತ್ತೂರು ನಗರವೂ ಸಹಿತ ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಗೋ ಕಳ್ಳರ ತಂಡದ ಕೈವಾಡವಿದೆ. ಹಿಂದೂಗಳಿಗೆ ಪೂಜನೀಯವಾದ ಗೋವಿನ ಹತ್ಯೆ ಮತ್ತು ಕಳ್ಳತನವನ್ನು ತಡೆಗಟ್ಟದಿದ್ದರೆ ಬಜರಂಗದಳ ಗೋ ಹಂತಕರ ವಿರುದ್ಧ ಉಗ್ರ ಹೋರಾಟ ನಡೆಸಲಿದೆ ಎಂದು ಬಜರಂಗ ದಳ ಪುತ್ತೂರು ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ ಎಚ್ಚರಿಕೆ ನೀಡಿದ್ದಾರೆ.